AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ ದೇಶದ ಅಸ್ಮಿತೆ ಆತ ರಾಜಕೀಯ ವಿಚಾರ ಅಲ್ಲ; ಹೆಂಡತಿಯನ್ನು ಬಿಡದ ರಾಮನಿಗೆ ಹೆಂಡತಿ ತೊರೆದ ಪ್ರಧಾನಿ ಹೇಗೆ? -ಹೆಚ್ ವಿಶ್ವನಾಥ್

ಹೆಂಡತಿಯನ್ನು ಬಿಡದ ರಾಮನಿಗೆ ಹೆಂಡತಿ ತೊರೆದ ಪ್ರಧಾನಿ ಹೇಗೆ? ಈ ರೀತಿ ಒಂದು ಸಂದೇಶ ಒಬ್ಬ ಯುವಕ ನನಗೆ ಕಳುಹಿಸಿದ್ದಾನೆ. ನಿಮ್ಮ ಚುನಾವಣೆಗೆ ಮುಖ್ಯ ಪ್ರಚಾರಕನಾಗಿ ರಾಮನನ್ನು ಬಳಸಿಕೊಳ್ಳಬೇಡಿ. ಬಡವರ ಹಸಿವಿನ ಬಗ್ಗೆ ದೇಶದ ಅಭಿವೃದ್ಧಿ ಬಗ್ಗೆ ಮಾತಾಡಿ ಎಂದು ಹೆಚ್ ವಿಶ್ವನಾಥ್ ತಿಳಿಸಿದರು.

ರಾಮ ದೇಶದ ಅಸ್ಮಿತೆ ಆತ ರಾಜಕೀಯ ವಿಚಾರ ಅಲ್ಲ; ಹೆಂಡತಿಯನ್ನು ಬಿಡದ ರಾಮನಿಗೆ ಹೆಂಡತಿ ತೊರೆದ ಪ್ರಧಾನಿ ಹೇಗೆ? -ಹೆಚ್ ವಿಶ್ವನಾಥ್
ಹೆಚ್ ವಿಶ್ವನಾಥ್
TV9 Web
| Updated By: ಆಯೇಷಾ ಬಾನು|

Updated on: Jan 28, 2024 | 12:13 PM

Share

ಮೈಸೂರು, ಜ.28: ರಾಮ ದೇಶದ ಅಸ್ಮಿತೆ ಆತ ರಾಜಕೀಯ ವಿಚಾರ ಅಲ್ಲ. ರಾಮ ನಮ್ಮ ದಮನಿ ದಮನಿಯಲ್ಲಿ ಇರುವವನು. ಅದರಿಂದ ಲೋಕಸಭೆಗೆ ಅನುಕೂಲವಾಗುತ್ತದೆ ಅನ್ನೋದು ಸರಿಯಲ್ಲ. ಹೆಂಡತಿಯನ್ನು ಬಿಡದ ರಾಮನಿಗೆ ಹೆಂಡತಿ ತೊರೆದ ಪ್ರಧಾನಿ ಹೇಗೆ? ಎಂದು ಮೈಸೂರಿನಲ್ಲಿ ಹೆಚ್ ವಿಶ್ವನಾಥ್ (H Vishwanath) ವಾಗ್ದಾಳಿ ನಡೆಸಿದ್ದಾರೆ. ಹಾಗೂ ಇದೇ ವೇಳೆ ಕೃತಜ್ಞತೆಯೇ ಇಲ್ಲದ ನಾಯಕ ಶಾಮನೂರು ಶಿವಶಂಕರಪ್ಪ (Shamanur Shivashankarappa). ಹಣವಿದೆ ಎಲ್ಲರನ್ನೂ ಕೊಂಡುಕೊಳ್ಳಬಹುದು ಅಂದುಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ರಾಮ ದೇಶದ ಅಸ್ಮಿತೆ ಆತ ರಾಜಕೀಯ ವಿಚಾರ ಅಲ್ಲ. ರಾಮ ನಮ್ಮ ದಮನಿ ದಮನಿಯಲ್ಲಿ ಇರುವವನು. ಅದರಿಂದ ಲೋಕಸಭೆಗೆ ಅನುಕೂಲವಾಗುತ್ತದೆ ಅನ್ನೋದು ಸರಿಯಲ್ಲ. ನಮ್ಮ ಪ್ರತಿ ಊರಿನಲ್ಲೂ ರಾಮಮಂದಿರ ಕಟ್ಟಿದ್ದಾರೆ. ಅದನ್ನು ಮೋದಿ ಬಂದು ಕಟ್ಟಿಸಿದ್ದರಾ? ಹೆಂಡತಿಯನ್ನು ಬಿಡದ ರಾಮನಿಗೆ ಹೆಂಡತಿ ತೊರೆದ ಪ್ರಧಾನಿ ಹೇಗೆ? ಈ ರೀತಿ ಒಂದು ಸಂದೇಶ ಒಬ್ಬ ಯುವಕ ನನಗೆ ಕಳುಹಿಸಿದ್ದಾನೆ. ನಿಮ್ಮ ಚುನಾವಣೆಗೆ ಮುಖ್ಯ ಪ್ರಚಾರಕನಾಗಿ ರಾಮನನ್ನು ಬಳಸಿಕೊಳ್ಳಬೇಡಿ. ಬಡವರ ಹಸಿವಿನ ಬಗ್ಗೆ ದೇಶದ ಅಭಿವೃದ್ಧಿ ಬಗ್ಗೆ ಮಾತಾಡಿ ಎಂದು ಹೆಚ್ ವಿಶ್ವನಾಥ್ ತಿಳಿಸಿದರು.

ನಮ್ಮವರೇ ಸರಿ ಇಲ್ಲ, ಸಿಎಂ, ಮಂತ್ರಿಗಳು ಅವರ ಮೇಲೆ ಡಿಪೆಂಡ್

ಸಂಸದ ಬಿ.ವೈ. ರಾಘವೇಂದ್ರ ಅವರನ್ನು ಗೆಲ್ಲಿಸಿ ಶ್ಯಾಮನೂರು ಶಿವಶಂಕರಪ್ಪ ಹೇಳಿಕೆ ವಿಚಾರ ಸಂಬಂಧ ಕೃತಜ್ಞತೆಯೇ ಇಲ್ಲದ ನಾಯಕ ಶ್ಯಾಮನೂರು ಶಿವಶಂಕರಪ್ಪ ಎಂದು ಹೆಚ್​.ವಿಶ್ವನಾಥ್​ ವಾಗ್ದಾಳಿ ನಡೆಸಿದರು. ದುಡ್ಡು ಇದೆ ಎಲ್ಲರನ್ನೂ ಕೊಂಡುಕೊಳ್ಳಬಹುದು ಅಂದುಕೊಂಡಿದ್ದಾರೆ. ನಮ್ಮವರೇ ಸರಿ ಇಲ್ಲ ನಮ್ಮ ಮಂತ್ರಿಗಳು, ಮುಖ್ಯಮಂತ್ರಿಗಳು ಅವರ ಮೇಲೆ ಡಿಪೆಂಡ್ ಆಗಿದ್ದಾರೆ. ಅಲ್ಲಿಗೆ ಹೋದಾಗ ಅವರ ಗೆಸ್ಟ್ ಹೌಸ್‌ನಲ್ಲೇ ಮಲಗುತ್ತಾರೆ. ಕಾಂಗ್ರೆಸ್ ಪಕ್ಷ ಜೀವಂತವಾಗಿದ್ದರೆ ಶಿವಕುಮಾರ್ ಬಂಡೆಯಾಗಿದ್ದರೆ ಅಮಾನತು ಮಾಡಿ. ಅವನು ಇಲ್ಲದಿದ್ದರೆ ಕಾಂಗ್ರೆಸ್ ನಡೆಯಲ್ವಾ? ಎಂದು ಏಕವಚನದಲ್ಲೇ ಹೆಚ್​ ವಿಶ್ವನಾಥ್ ಅವರು ಶ್ಯಾಮನೂರು ಶಿವಶಂಕರಪ್ಪ ವಿರುದ್ದ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷದಿಂದ ಶ್ಯಾಮನೂರು ಶಿವಶಂಕರ ಅವರನ್ನು ಹೊರಗೆ ತಳ್ಳಿ. ಶ್ಯಾಮನೂರು ಶಿವಶಂಕರಪ್ಪಗೆ ನಾಚಿಕೆ ಆಗಲ್ವಾ? ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: Video: ಶ್ರೀರಾಮ ದೇವಾಲಯದ ಎದುರಿನ ಶಿವಲಿಂಗದ ಮೇಲೆ ನಾಗರಹಾವು ಪ್ರತ್ಯಕ್ಷ; ವಿಡಿಯೋ ಇಲ್ಲಿದೆ

ಮೈಸೂರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಿ ದೇವರಾಜ ಅರಸು ಪುತ್ಥಳಿಗೆ ನಿರ್ಣಯ ವಿಚಾರವನ್ನು ಸರ್ಕಾರದ ನಿರ್ಧಾರಕ್ಕೆ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಸ್ವಾಗತಿಸಿದ್ದಾರೆ. 92 ಲಕ್ಷ ಹಣ ಅದಕ್ಕಾಗಿ ಮಂಜೂರು ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಸಚಿವರಾದ ಡಾ ಎಚ್ ಸಿ ಮಹದೇವಪ್ಪ, ಕೆ ವೆಂಕಟೇಶ್ ಶಿವರಾಜ್ ತಂಗಡಿಗೆ ಅಭಿನಂದನೆ. ಮೈಸೂರಿನ ಶಾಸಕರಿಗೂ ಅಭಿನಂದನೆ ಸಲ್ಲಿಸಿದರು. ವರ್ಷ ಪೂರ್ತಿ ದೇವರಾಜ ಅರಸು ಹೆಸರಿನಲ್ಲಿ ಕಾರ್ಯಕ್ರಮ ಮಾಡಬೇಕು. ದೇಶಕ್ಕೆ ದೇವರಾಜ ಅರಸು ಹೆಸರೇ ಒಂದು ಶಕ್ತಿ. ಸಾಮಾಜಿಕ ನ್ಯಾಯವನ್ನು ಎತ್ತರದಲ್ಲಿ ಹಿಡಿದವರು ದೇವರಾಜ ಅರಸು. ಜೀತ ಪದ್ದತಿ ನಿರ್ಮೂಲನೆ ಮಾಡಿದರು ಹಾಸ್ಟೆಲ್ ವ್ಯವಸ್ಥೆ ಮೂಲಕ ಅಕ್ಷರ ಕ್ರಾಂತಿ ಮಾಡಿದವರು. ಜನ ಮಾನಸದಲ್ಲಿ ಉಳಿದ ಜನನಾಯಕ ದೇವರಾಜ ಅರಸ್. ಎಲ್ಲಾ ಜಾತಿಗೂ ರಾಜಕೀಯ ಅಧಿಕಾರವನ್ನು ಕೊಟ್ಟವರು ಅರಸು. ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿ ಬೆಳೆಸಿದರು ಎಂದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಬೇರೆ ಭಾಷೆಯಿಂದ ಅವಕಾಶ ಇದೆ; ಆದರೆ ಕನ್ನಡಲ್ಲಿ ಚಾನ್ಸ್ ಇಲ್ಲ: ಖುಷಿ ರವಿ
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಕಾರ್ಮಿಕರು ಸಾವು
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ಬುಮ್ರಾ ಆಡುವುದರ ಬಗ್ಗೆ ಸಿರಾಜ್ ಹೇಳಿದ್ದೇನು? ವಿಡಿಯೋ
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ರಿಷಭ್ ಪಂತ್ ಬಗ್ಗೆ ಹೊರಬಿತ್ತು ಮತ್ತೊಂದು ಬಿಗ್ ಅಪ್​ಡೇಟ್
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಚರ್ಚೆಗೆ ಕರೆದರೆ ವಿಜಯೇಂದ್ರ ಚುನಾವಣೆ ನಡೆಸಿ ಅನ್ನುತ್ತಾರೆ: ಸಿದ್ದರಾಮಯ್ಯ
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಇಬ್ಬರು ಮುಸ್ಲಿಂ ಯುವಕರು ಮಠವನ್ನು ಪ್ರವೇಶಿಸಿದ್ದರು: ಅರವಿಂದ್ ಬೆಲ್ಲದ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಯಾವ ಸ್ವಾಮೀಜಿಯಿಂದಲೂ ನಾನು ಸ್ವಂತಕ್ಕಾಗಿ ಲಾಭ ಮಾಡಿಕೊಂಡಿಲ್ಲ: ಯತ್ನಾಳ್
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಢಾಕಾ ಕಾಲೇಜಿನ ಮೇಲೆ ಚೀನಾ ನಿರ್ಮಿತ ಯುದ್ಧ ವಿಮಾನ ಪತನ, ಹಲವು ಮಂದಿ ಸಾವು
ಚಾಮರಾಜನಗರ ಹಾಗೂ ಪಾವಗಡ ಎರಡಕ್ಕೂ ಭೇಟಿ ನೀಡಿದ ವಿಚಾರವಾದಿ ಸಿಎಂ
ಚಾಮರಾಜನಗರ ಹಾಗೂ ಪಾವಗಡ ಎರಡಕ್ಕೂ ಭೇಟಿ ನೀಡಿದ ವಿಚಾರವಾದಿ ಸಿಎಂ
ರಾಹುಲ್ ಗಾಂಧಿ ತಮ್ಮ ಆಕಾಂಕ್ಷೆಯನ್ನು ತ್ಯಾಗಮಾಡಬಹುದು: ರಾಯರೆಡ್ಡಿ
ರಾಹುಲ್ ಗಾಂಧಿ ತಮ್ಮ ಆಕಾಂಕ್ಷೆಯನ್ನು ತ್ಯಾಗಮಾಡಬಹುದು: ರಾಯರೆಡ್ಡಿ