AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆ ಬಾಲರಾಮನ ಮೂರ್ತಿ ಶಿಲೆಗೂ ದಂಡ: ಸ್ಪಷ್ಟನೆ ನೀಡಿದ ಶ್ರೀನಿವಾಸ್

ಸೋಮವಾರ ಜನವರಿ 22 ರಂದು ಅಯೋಧ್ಯೆಯಲ್ಲಿ ನಿರ್ಮಾಣವಾದ ಭವ್ಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿತು. ಬಾಲರಾಮನ ಮೂರ್ತಿ ಮೂಡಿ ಬಂದಿದ್ದು ಕೃಷ್ಣ ಶಿಲೆಯಲ್ಲಿ. ಈ ಕೃಷ್ಣ ಶಿಲೆಯನ್ನು ನೀಡಿದ ಶ್ರೀನಿವಾಸ್​ ಅವರಿಗೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 80 ಸಾವಿರ ರೂ. ದಂಡ ವಿಧಸಿದ್ದಾರೆ ಎಂಬ ವಂದತಿಗಳು ಕೇಳಿಬಂದಿವೆ. ಆದರೆ ಇದಕ್ಕೆ ಶ್ರೀನಿವಾಸ್​ ಸ್ಪಷ್ಟನೆ ನೀಡಿದ್ದಾರೆ.

ಅಯೋಧ್ಯೆ ಬಾಲರಾಮನ ಮೂರ್ತಿ ಶಿಲೆಗೂ ದಂಡ: ಸ್ಪಷ್ಟನೆ ನೀಡಿದ ಶ್ರೀನಿವಾಸ್
ಶ್ರೀನಿವಾಸ್​ ನಟರಾಜ್​
ರಾಮ್​, ಮೈಸೂರು
| Updated By: ವಿವೇಕ ಬಿರಾದಾರ|

Updated on: Jan 27, 2024 | 1:15 PM

Share

ಮೈಸೂರು, ಜನವರಿ 27: ಅಯೋಧ್ಯೆಯ (Ayodhya) ರಾಮ ಮಂದಿರದಲ್ಲಿ (Ram Mandir) ಬಾಲರಾಮನ (Ramlalla) ಪ್ರತಿಷ್ಠಾಪಿಸಲಾಗಿದೆ. ಈ ಬಾಲರಾಮನ ಮೂರ್ತಿ ಮೂಡಿ ಬಂದಿರುವ ಕೃಷ್ಣ ಶಿಲೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 80 ಸಾವಿರ ರೂ. ದಂಡ ವಿಧಸಿದ್ದಾರೆ ಎಂಬ ವಂದತಿಗಳಿಗೆ ಗುತ್ತಿಗೆದಾರ ಶ್ರೀನಿವಾಸ್​​​​ ನಟರಾಜ್​ ಸ್ಪಷ್ಟನೆ ನೀಡಿದ್ದಾರೆ.

ಬಾಲರಾಮನ ಮೂರ್ತಿಗೆ ಕಲ್ಲು ಆಯ್ಕೆಯಾಗಿದ್ದು ಆರು ತಿಂಗಳ ಹಿಂದೆ. ಆದರೆ ನಾನು (ಶ್ರೀನಿವಾಸ್)​ ದಂಡ ಕಟ್ಟಿರುವುದು 2022ರ ಜುಲೈನಲ್ಲಿ. ಗಣಿ ಇಲಾಖೆಯಿಂದ ಅನುಮತಿ ಪಡೆಯದೆ ಗಣಿಗಾರಿಕೆ ಮಾಡಿದ ಹಿನ್ನೆಲೆಯಲ್ಲಿ ಒಂದೂವರೆ ವರ್ಷದ ಹಿಂದೆ ಅಂದರೆ 2022ರ ಜುಲೈನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 80 ಸಾವಿರ ರೂ. ದಂಡ ವಿಧಸಿದ್ದರು.

ಹೀಗಾಗಿ ನಾನು ದಂಡ ಪಾವತಿಸಿದೆ. ಬಾಲರಾಮನ ಮೂರ್ತಿ ತಯಾರಿಸಲು ಕಲ್ಲು ಆಯ್ಕೆಯಾಗಿರುವುದು ಆರು ತಿಂಗಳ ಹಿಂದೆ. ಈ ಕಲ್ಲಿನ ಸಂಬಂಧ ದಂಡ ಹಾಕಿಲ್ಲ. ಹೀಗಾಗಿ ತಪ್ಪು ಪ್ರಚಾರ ಮಾಡಬೇಡಿ ಎಂದು ಗುತ್ತಿಗೆದಾರ ಶ್ರೀನಿವಾಸ್ ಮನವಿ ಮಾಡಿದ್ದಾರೆ.

ಏನಿದು ಪ್ರಕರಣ

ಬಾಲರಾಮನ ಮೂರ್ತಿ ಮೂಡಿ ಬಂದಿರುವ ಕೃಷ್ಣ ಶಿಲೆಗೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 80 ಸಾವಿರ ರೂ. ದಂಡ ವಿಧಸಿದ್ದರು. ಈ ದಂಡವನ್ನು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ​​ಪಾವತಿಸಿದ್ದಾರೆ ಎಂಬ ವಂದತಿಗಳು ಕೇಳಿಬಂದಿದ್ದವು. ಹೀಗಾಗಿ ಶ್ರೀನಿವಾಸ್​ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ಬಾಲರಾಮನ ಮೂರ್ತಿ ಶಿಲೆಗೂ ದಂಡ: ಶ್ರೀನಿವಾಸ್ ಕಟ್ಟಿದ್ದ 80 ಸಾವಿರ ರೂ. ಬಿಜೆಪಿ ನೀಡಲಿದೆ- ಪ್ರತಾಪ್​ ಸಿಂಹ

ಕೃಷ್ಣ ಶಿಲೆ ದೊರೆತಿದ್ದು ಹೇಗೆ?

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಹಾರೋಹಳ್ಳಿ ಗುಜೇಗೌಡನಪುರ ಗ್ರಾಮದಲ್ಲಿನ ಜಮೀನಿನ ಮಾಲೀಕರಾದ ರಾಮದಾಸ್ ಅವರು ನೆಲ ಸಮತಟ್ಟು ಮಾಡಲು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ ಅವರಿಗೆ ಗುತ್ತಿಗೆ ನೀಡಿದ್ದರು. ನೆಲ ಸಮತಟ್ಟು ಮಾಡುವ ವೇಳೆ ಜಮೀನಿನಲ್ಲಿ ಶಿಲ್ಪಕ್ಕೆ ಯೋಗ್ಯವಾದ ಕೃಷ್ಣಶಿಲೆ ದೊರೆಯುತ್ತಿದ್ದವು. ಈ ವಿಷಯ ತಿಳಿದ ಹಲವು ಶಿಲ್ಪಿಗಳು ಇಲ್ಲಿಗೆ ಬಂದು ಕೃಷ್ಣ ಶಿಲೆಯನ್ನು ತೆಗೆದುಕೊಂಡು ಹೋಗುತ್ತಿದ್ದರು. ಈಗ ಅಯೋಧ್ಯೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲರಾಮನ ಮೂರ್ತಿ ಅರಳಿರುವ ಕೃಷ್ಣ ಶಿಲೆಯೂ ದೊರೆತಿತ್ತು.

ಜಮೀನಿನ 10 ಅಡಿ ಆಳದಲ್ಲಿ 2022ರಲ್ಲಿ ದೊರೆತ ಭಾರಿ ಗಾತ್ರವಿದ್ದ ಶಿಲೆಯನ್ನು ಮೂರು ಭಾಗವಾಗಿ ಮಾಡಿ ಮೇಲೆತ್ತಲಾಗಿತ್ತು. ನೆಲದಿಂದ ಹೊರ ತೆಗೆದು ಜಮೀನಿನಲ್ಲಿ ಇಟ್ಟಿದ್ದ ಕಲ್ಲುಗಳನ್ನು ಕಂಡ ಕೆಲವರು, ಜಮೀನಿನಲ್ಲಿ ಅನಧಿಕೃತ ಗಣಿಗಾರಿಕೆ ನಡೆಯುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಬಂದ ಅಧಿಕಾರಿಗಳು, ಭಾರಿ ಗಾತ್ರದ ಕಲ್ಲುಗಳನ್ನು ಹೊರ ತೆಗೆಯಬೇಕಾದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಈಗ ಕಲ್ಲು ತೆಗೆದಿರುವುದು ಅನಧಿಕೃತ ಎಂದು ಹೇಳಿ ಕಲ್ಲುಗಳ ಗಾತ್ರದ ಆಧಾರದ ಮೇಲೆ ಒಟ್ಟು 80 ಸಾವಿರ ರೂ. ದಂಡ ವಿಧಿಸಿದ್ದರು.

ಕಲ್ಲು ತೆಗೆಯಲು ಅನುಮತಿ ಪಡೆಯಬೇಕು ಎನ್ನುವ ಅರಿವಿಲ್ಲದೆ ಗುತ್ತಿಗೆದಾರ ಶ್ರೀನಿವಾಸ್​ ನಟರಾಜನ್​​ ಅನ್ಯ ಮಾರ್ಗವಿಲ್ಲದೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ವಿಧಿಸಿದ ದಂಡವನ್ನು ಆನ್‌ಲೈನ್ ಮೂಲಕವೇ ಪಾವತಿಸಿದ್ದರು. ಇನ್ನು ಬಾಲರಾಮನ ಮೂರ್ತಿ ಕೆತ್ತಲು ಆರು ತಿಂಗಳ ಹಿಂದೆ ಇಲ್ಲಿಯ ಕೃಷ್ಣ ಶಿಲೆಯನ್ನೇ ಆಯ್ಕೆ ಮಾಡಲಾಗಿತ್ತು. ಇಲ್ಲಿ ಸಿಕ್ಕ ಕಲ್ಲಿನಲ್ಲೇ ಬಾಲರಾಮ ಮೂಡಿ ಬಂದಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
ಪೂಜೆ ಮಾಡಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎನ್ನುವ ಗೃಹಿಣಿಯರು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
‘ನಮ್ಮ ಮನೆ ಹತ್ತಿರವೇ ಅಟ್ಯಾಕ್ ಆಗಿದೆ’: ಪೊಲೀಸ್ ಎದುರು ಪ್ರಥಮ್ ಅಳಲು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
ಹುಲಿರಾಯನ ಫೋಸ್​ ಕಂಡು ಹೌದು ಹುಲಿಯಾ ಎಂದ ಪ್ರವಾಸಿಗರು
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
PM Modi Speech Live: ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಭಾಷಣದ ನೇರಪ್ರಸಾರ
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ದರ್ಶನ್ ವಿಗ್ ಧರಿಸುತ್ತಾರೆ, ಅದನ್ನು ಹೇಗೆ ಕಿತ್ತುಕೊಳ್ಳಲಾದೀತು? ಪ್ರಥಮ್
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಹಿಮಾಚಲ ಪ್ರದೇಶದ ಮಂಡಿಯಲ್ಲಿ ಮೇಘಸ್ಫೋಟ; ದಿಢೀರ್ ಪ್ರವಾಹದಿಂದ ಮೂವರು ಸಾವು
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಪಹಲ್ಗಾಮ್ ದಾಳಿಗೆ ಭದ್ರತಾ ಲೋಪವೇ ಕಾರಣ: ಖರ್ಗೆ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಕಾಂಗ್ರೆಸ್​ನ ದಲಿತ ವಿರೋಧಿ ನೀತಿಯಿಂದ ಖರ್ಗೆ ಸಿಎಂ ಆಗಲಿಲ್ಲ: ಜ್ಞಾನೇಂದ್ರ
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಅವಮಾನಗಳ ಹೊರತಾಗಿಯೂ ಸಿಎಂ ವಿರುದ್ಧ ಮಾತಾಡದ ಶಿವಕುಮಾರ್
ಖರ್ಗೆಯವರ ಪೂರ್ತಿ ಹೇಳಿಕೆ ಕೇಳಿಸಿಕೊಂಡರೆ ವಿಷಯ ಅರ್ಥವಾಗುತ್ತದೆ: ಪ್ರಿಯಾಂಕ್
ಖರ್ಗೆಯವರ ಪೂರ್ತಿ ಹೇಳಿಕೆ ಕೇಳಿಸಿಕೊಂಡರೆ ವಿಷಯ ಅರ್ಥವಾಗುತ್ತದೆ: ಪ್ರಿಯಾಂಕ್