ಪತಿಯ ಅಣ್ಣನ ಮಗನ ಜತೆ ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ; ಯುವಕನ ಮೃತ ದೇಹ ಕೆರೆಯಲ್ಲಿ ಪತ್ತೆ

ಬಿಳಿಕೆರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಕೆರೆಯಲ್ಲಿ ಶೋಧ ಕಾರ್ಯ ನಡೆದಿತ್ತು. ಆದರೆ ಮೃತದೇಹ ಪತ್ತೆಯಾಗಿರಲಿಲ್ಲ. ಇದೀಗ ಕುಮಾರ್ ಮೃತದೇಹ ಪತ್ತೆಯಾಗಿದೆ.

ಪತಿಯ ಅಣ್ಣನ ಮಗನ ಜತೆ ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ; ಯುವಕನ ಮೃತ ದೇಹ ಕೆರೆಯಲ್ಲಿ ಪತ್ತೆ
ಪ್ರಾತಿನಿಧಿಕ ಚಿತ್ರ

ಮೈಸೂರು: ಯುವಕನ ಜೊತೆ ಗೃಹಿಣಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಯುವಕನ ಮೃತ ದೇಹ ಕೆರೆಯಲ್ಲಿ ಸಿಕ್ಕಿದೆ. ಸೆಪ್ಟೆಂಬರ್ 9 ರಂದು ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಉದ್ದೂರು ಬಳಿಯ ಕೆರೆಗೆ ಗೃಹಿಣಿ ಮತ್ತು ಯುವಕ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ಕೆರೆಗೆ ಹಾರಿರುವುದಕ್ಕೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ.

ಶೀಲ (37) ಮತ್ತು ಕುಮಾರ್ (27) ಕೆರೆಗೆ ಒಟ್ಟಿಗೆ ಹಾರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕುಮಾರ್ ಶೀಲಳ ಪತಿಯ ಅಣ್ಣನ ಮಗ. ಕೆರೆ ದಡದಲ್ಲಿ ಕುಮಾರ್ ಹಾಗೂ ಶೀಲ ಮೊಬೈಲ್ ಪತ್ತೆಯಾಗಿದ್ದು, ಈ ಹಿನ್ನೆಲೆ ಕೆರೆಗೆ ಹಾರಿರುವ ಶಂಕೆಯಿಂದ ಹುಡುಕಾಟ ನಡೆಸಲಾಗಿದೆ. ಬಿಳಿಕೆರೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಕೆರೆಯಲ್ಲಿ ಶೋಧ ಕಾರ್ಯ ನಡೆದಿತ್ತು. ಆದರೆ ಮೃತದೇಹ ಪತ್ತೆಯಾಗಿರಲಿಲ್ಲ. ಇದೀಗ ಕುಮಾರ್ ಮೃತದೇಹ ಪತ್ತೆಯಾಗಿದೆ.

ದಾವಣಗೆರೆ ಕಾಂಗ್ರೆಸ್ ಮುಖಂಡ ಕೊಲೆ ಪ್ರಕರಣ; ಮೂವರು ಅರೆಸ್ಟ್
ಕಾಂಗ್ರೆಸ್ ಮುಖಂಡ ಜೈನುಲ್ಲಾ ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾ ಪಟ್ಟಣ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಮ್ಜದ್ ಖಾನ್ (44), ಇಸ್ಮಾಯಿಲ್ ಖಾನ್ (42) ನೂರ್ ಅಹ್ಮದ್ (36) ಬಂಧಿತ ಆರೋಪಿಗಳು. ಸೆಪ್ಟೆಂಬರ್ ಎರಡರಂದು ಕಾಂಗ್ರೆಸ್ ಮುಖಂಡ ಜೈನುಲ್ಲಾ ಖಾನ್ರವರ ಕೊಲೆ ನಡೆದಿತ್ತು. ಆದರೆ ಈ ಬಗ್ಗೆ ನಿನ್ನೆ (ಸೆ.10) ಬೆಳಕಿಗೆ ಬಂದಿತ್ತು.

ಆರೋಪಿಗಳು ಬಸವಾ ಪಟ್ಟಣದ ಗುಡ್ಡದಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ, ಹೂತು ಹಾಕಿದ್ದರು. ಅನೈತಿಕ ಸಂಬಂಧವೇ ಕೊಲೆಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಕೊಲೆಯಾದ ಕೈ ಮುಖಂಡ ಜೈನುಲ್ಲಾ ಖಾನ್ ಆರೋಪಿ ಅಮ್ಜದ್ ಖಾನ್ ಪತ್ನಿ ಜೊತೆ ಅನೈತಿಕ ಸಂಬಂಧ ಹೊಂದಿದ್ದರಂತೆ. ಈ ವಿಷಯ ಆರೋಪಿ ಅಮ್ಜದ್ ಖಾನ್ ಗಮನಕ್ಕೆ ಬಂದಿತ್ತು. ಹೀಗಾಗಿ ಸಹೋದರ ಇಸ್ಮಾಯಿಲ್ ಖಾನ್ ಹಾಗೂ ಸ್ನೇಹಿತ ನೂರ್ ಅಹ್ಮದ್ ಜೊತೆ ಸೇರಿ ಜೈನುಲ್ಲಾ ಖಾನ್ನ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಮೃತ ಜೈನುಲ್ಲಾ ಖಾನ್ ಬೆಸ್ಕಾಂ ಗುತ್ತಿಗೆದಾರನಾಗಿದ್ದು, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಉಪಾಧ್ಯಕ್ಷರಾಗಿದ್ದರು. ಒಂದು ವಾರದ ಹಿಂದೆ ನಾಪತ್ತೆ ಆಗಿದ್ದರು. ಉದ್ದೇಶಪೂರ್ವಕವಾಗಿ ಅಪಹರಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಭೇಟಿ ನೀಡಿ ಪರಶೀಲನೆ ನಡೆಸಿದ್ದರು. ಸದ್ಯ ಬಸವಾಪಟ್ಟಣದ ಪೊಲೀಸರು ಆರೋಪಿಗಳನ್ನು ಬಂಧಿಸಿ ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.

ಇದನ್ನೂ ಓದಿ:
ದೆಹಲಿಯ ಬಿಜೆಪಿ ನಾಯಕ ಜಿ.ಎಸ್. ಬಾವಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ; ಆತ್ಮಹತ್ಯೆ ಶಂಕೆ

Crime Update: ಪರಿಹಾರ ಧನಕ್ಕೆ ಲಂಚ, ಬೋರ್​ವೆಲ್ ವೈರ್ ಕಳ್ಳತನ, ಆತ್ಮಹತ್ಯೆ, ಕಳ್ಳರ ಬಂಧನ

Click on your DTH Provider to Add TV9 Kannada