ನಂಜನಗೂಡು ನಂಜುಂಡೇಶ್ವರನ ಸನ್ನಿಧಿಯಲ್ಲಿ ನೆರವೇರಿದ ಉಚಿತ ಸಾಮೂಹಿಕ ವಿವಾಹ
ನಂಜನಗೂಡು ನಂಜುಂಡೇಶ್ವರನ ಸನ್ನಿಧಿಯಲ್ಲಿ ಉಚಿತ ಸಾಮೂಹಿಕ ವಿವಾಹ ನೆರವೇರಿತು. ಚಾಮರಾಜನಗರ ಜಿಲ್ಲೆಯ 63 ಜೋಡಿಗಳು ಸಪ್ತಪದಿ ತುಳಿದಿದ್ದಾರೆ.
ನಂಜನಗೂಡು: ನಂಜನಗೂಡು (Nanjangudu) ನಂಜುಂಡೇಶ್ವರನ ಸನ್ನಿಧಿಯಲ್ಲಿ ಉಚಿತ ಸಾಮೂಹಿಕ ವಿವಾಹ ನೆರವೇರಿತು. ಚಾಮರಾಜನಗರ (Chamrajnagar) ಜಿಲ್ಲೆಯ 63 ಜೋಡಿಗಳು ಸಪ್ತಪದಿ ತುಳಿದಿದ್ದಾರೆ. ಈ ಸಾಮೂಹಿಕ ವಿವಾಹವನ್ನು ಮೈಸೂರು ಜಿಲ್ಲಾಡಳಿತ, ಧಾರ್ಮಿಕ ದತ್ತಿ ಇಲಾಖೆಯಿಂದ ಆಯೋಜಿಸಲಾಗಿತ್ತು. ಜಿಲ್ಲಾಡಳಿತದಿಂದ ವಧು-ವರರಿಗೆ ಉಚಿತ ವಸ್ತ್ರ, ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂಜನಗೂಡು ನಂಜುಂಡೇಶ್ವರನ ದೇಗುಲ ಆಡಳಿತ ಮಂಡಳಿಯಿಂದ 55 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಯಿತು. ವಧು-ವರರಿಗೆ ಪಂಚೆ, ಶರ್ಟ್, ಶಲ್ಯ, ಹೂವಿನ ಹಾರ, ಧಾರೆ ಸೀರೆ ಕೊಳ್ಳಲು ಹಣ ನೀಡಲಾಗಿದೆ. ವಧುಗೆ ತಾಳಿ, ಚಿನ್ನದ 2 ಗುಂಡು ಸೇರಿ 8 ಗ್ರಾಂ ತೂಕದ ಚಿನ್ನ ವಿತರಣೆ ಮಾಡಲಾಗಿದೆ.
ಕುಸಿದು ಬಿದ್ದ ಶಿಥಿಲಗೂಂಡಿದ್ದ ಅಂಗಡಿಯ ಗೋಡೆ
ಮೈಸೂರು: ಶಿಥಿಲಗೂಂಡಿದ್ದ ಅಂಗಡಿಯ ಗೋಡೆ ಕುಸಿದು ಬಿದ್ದಿದೆ. ಮೈಸೂರಿನ ತ್ರಿಪುರ ಭೈರವಿ ಮಠಕ್ಕೆ ಸೇರಿದ ಜಾಗದಲ್ಲಿದ್ದ ಅಂಗಡಿ ಇತ್ತು. ಅಂಗಡಿಯ ಗೋಡೆ ಶಿಥಿಲಗೊಂಡಿದ್ದರು ಅಂಗಡಿಯನ್ನು ಖಾಲಿ ಮಾಡಿರಲಿಲ್ಲ. ಈ ಸಂಬಂಧ ಮಠ ಹಾಗೂ ಅಂಗಡಿ ಮಾಲೀಕರ ನಡುವೆ ಕಾನೂನು ಸಮರ ನಡೆದಿತ್ತು. ಶಿಥಿಲಗೊಂಡ ಕಟ್ಟಡವನ್ನು ತೆರವುಗೊಳಿಸಲು ಮಠದ ಸಿಬ್ಬಂದಿ ನಗರ ಪಾಲಿಕೆಗೂ ದೂರು ನೀಡಿದ್ದರು. ತಡರಾತ್ರಿ ಅಂಗಡಿಯ ಹಿಂಭಾಗದ ಗೋಡೆ ಕುಸಿದು ಬಿದ್ದಿದೆ. ಯಾರು ಇಲ್ಲದ ಕಾರಣ ಅನಾಹುತ ತಪ್ಪಿದೆ. ಇನ್ನು ಶಿಥಿಲಗೊಂಡಿದ್ದ ಉಳಿದ ಕಟ್ಟಡವನ್ನು ತೆರವುಗೊಳಿಸುವಂತೆ ನಗರ ಪಾಲಿಕೆ ಮನವಿ ಮಾಡಿದ್ದಾರೆ.
ಇದನ್ನು ಓದಿ: ಶಾಲಾ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕಿ; ಕಿಮ್ಸ್ ಆಸ್ಪತ್ರೆ ಬಳಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಘಟನಾ ಸ್ಥಳಕ್ಕೆ ಪಾಲಿಕೆ ಅಧಿಕಾರಿಗಳೊಂದಿಗೆ ಶಾಸಕ ಎಲ್.ನಾಗೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಕಟ್ಟಡ ಸಂಪೂರ್ಣ ತೆರವಿಗೆ ಸೂಚನೆ ನೀಡಿದ್ದಾರೆ. ಚಾಮರಾಜ ಕ್ಷೇತ್ರದ ಅಪಾಯಕಾರಿ ಕಟ್ಟಡಗಳ ಪಟ್ಟಿಮಾಡುವಂತೆ ಅಧಿಆಕರಿಗಳಿಗೆ ಆದೇಶ ನೀಡಿದ್ದಾರೆ. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದ್ದಾರೆ. ಈವರೆಗೆ ಮೈಸೂರಿನಲ್ಲಿ 70 ರಿಂದ 80 ಕಟ್ಟಡ ಗುರುತು ಮಾಡಲಾಗಿದೆ. ಪಾಲಿಕೆ ಮೂಲಕ ಅವುಗಳಿಗೆ ನೋಟೀಸ್ ನೀಡಲಾಗುತ್ತೆ.ಅಪಾಯದಲ್ಲಿ ಇರುವ ಕಟ್ಟಡ ತೆರವು ಮಾಡುವಂತೆ ತಿಳಿಸಲಾಗುತ್ತೆ. ಶಿಥಿಲಾವಸ್ಥೆಯ ಕಟ್ಟಡ ತೆರವು ಮಾಡದೆ ಅಪಾಯ ಸಂಭವಿಸಿದರೆ ನೀವೆ ಹೊಣೆಯಾಗುತ್ತೀರಾ. ಈ ಬಗ್ಗೆ ಗಮನಹರಿಸದ ಅಧಿಕಾರಿಗಳ ವಿರುದ್ಧ ಶಾಸಕ ಎಲ್.ನಾಗೇಂದ್ರ ಗರಂ ಆಗಿದ್ದಾರೆ. ಘಟನಾ ಸ್ಥಳಕ್ಕೆ ತಡವಾಗಿ ಬಂದ ಪಾಲಿಕೆ ಆಯುಕ್ತರ ವಿರುದ್ಧವೂ ಶಾಸಕರು ಗರಂ ಆಗಿದ್ಧಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:05 pm, Thu, 26 May 22