Mysore Bangalore expressway: ಎಕ್ಸ್​ಪ್ರೆಸ್​ ಹೈವೇಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗಲ್ಲ ಪ್ರವೇಶ: ಪ್ರತಾಪ್ ಸಿಂಹ

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೈವೇಯಲ್ಲಿ ದ್ವಿಚಕ್ರ & ತ್ರಿಚಕ್ರ ವಾಹನಕ್ಕೆ ಅವಕಾಶವಿಲ್ಲವೆಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

Mysore Bangalore expressway: ಎಕ್ಸ್​ಪ್ರೆಸ್​ ಹೈವೇಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗಲ್ಲ ಪ್ರವೇಶ: ಪ್ರತಾಪ್ ಸಿಂಹ
ಸಂಸದ ಪ್ರತಾಪ್​ ಸಿಂಹ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 06, 2023 | 2:08 PM

ಮೈಸೂರು: ಇಂದು (ಜ.6) ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ  ಸಂಸದ ಪ್ರತಾಪ್ ಸಿಂಹ  ನಿನ್ನೆ(ಜ.5) ಕೇಂದ್ರ ಸಚಿವ ನಿತಿನ್ ಗಡ್ಕರಿ(Nitin Gadkari) ಬೆಂಗಳೂರು ಮೈಸೂರು ಹೈವೆ ಪರಿಶೀಲನೆ ನಡೆಸಿದ್ದು, ಫೆಬ್ರವರಿ ಅಂತ್ಯದೊಳಗೆ ಕಾಮಗಾರಿ ಮುಗಿಸಲು ಸೂಚನೆ ನೀಡಿದ್ದಾರೆ. ರಸ್ತೆ ಬಹಳ ಚೆನ್ನಾಗಿ ಬಂದಿದೆ. ಸರ್ವಿಸ್ ರೋಡ್ ಸಂಪೂರ್ಣವಾಗಿ ನಿರ್ಮಾಣವಾಗುವ ವರೆಗೂ ಎಲ್ಲಾ ವಾಹನಗಳಿಗೆ ಅವಕಾಶ ನೀಡಲಾಗುವುದು. ಸರ್ವಿಸ್ ರಸ್ತೆ ನಿರ್ಮಾಣವಾದ ಬಳಿಕ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಹೈವೆಯಲ್ಲಿ ಪ್ರವೇಶವಿಲ್ಲ. ಆಕ್ಸಿಡೆಂಟ್ ಫ್ರೀ ರಸ್ತೆ ಮಾಡುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಸದ ಪ್ರತಾಪಸಿಂಹ ಹೇಳಿದ್ದಾರೆ.

ಉತ್ತರ ಪ್ರದೇಶದ ನದಿಗಳ ಹೆಸರನ್ನು ಹೈವೆಗಳಿಗೆ ಇಟ್ಟಿದ್ದಾರೆ. ಅದೇ ರೀತಿಯಲ್ಲಿ ಕಾವೇರಿ ನದಿ ಹೆಸರನ್ನು ಹೈವೆಗೆ ಇಡಲು ಮನವಿ ಮಾಡಿದ್ದೇನೆ. ಕಾವೇರಿ ನಮ್ಮ ಜೀವನದಿ, ಪವಿತ್ರ ಮತ್ತು ಬಹಳ ಭಕ್ತಿಯಿಂದ ಪೂಜಿಸುವ ನದಿ ಬೆಂಗಳೂರು ಉದ್ಧಾರವಾಗಿರುವುದೇ ಕಾವೇರಿ ನದಿಯಿಂದ ರಾಜಕಾರಣಿಗಳು ಒಂದೊಂದು ಹೆಸರು ಹೇಳುತ್ತಿದ್ದಾರೆ. ಕಾವೇರಿ ನದಿ ಇಲ್ಲದೆ ಇದ್ದರೆ ನಾವು ಯಾವ ನೀರು ಕುಡಿಯಬೇಕಿತ್ತು. ಕಾವೇರಿ ನದಿ ಇರದಿದ್ದರೆ ಕನ್ನಂಬಾಡಿ ಕಟ್ಟಲು ಆಗುತ್ತಿತ್ತಾ. ನಾಲ್ವಡಿ ಹೆಸರನ್ನು ಮೈಸೂರು ವಿಮಾನ ನಿಲ್ದಾಣಕ್ಕೆ ಇಡುತ್ತಿದ್ದು, ದೇವೇಗೌಡರ ಹೆಸರು ಕೂಡ ಕೇಳಿ ಬಂದಿದೆ. ದೇಶದಲ್ಲಿ ಎಲ್ಲಿಯೂ ಹೈವೆಗೆ ವ್ಯಕ್ತಿಯ ಹೆಸರು ಇಟ್ಟಿಲ್ಲ. ಎಸ್.ಎಂ. ಕೃಷ್ಣ ಅವರ ಬಗ್ಗೆ ಗೌರವವಿದೆ ಅವರನ್ನು ಕೇಳುತ್ತೇವೆ ಎಲ್ಲರೂ ಸೇರಿ ಕಾವೇರಿ ನದಿ ಹೆಸರು ಇಡಲು ಸಿಎಂ ಗೆ ಮನವಿ ಮಾಡುತ್ತೇವೆ ಎಂದು ಮಾಧ್ಯಮಗೋಷ್ಠಿಯಲ್ಲಿ ಸಂಸದ ಪ್ರತಾಪಸಿಂಹ ಹೇಳಿದ್ದಾರೆ.

ಇದನ್ನೂ ಓದಿ:Bengaluru-Mysuru Expressway ಫೆಬ್ರವರಿ ಅಂತ್ಯಕ್ಕೆ ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ಹೈವೇ ಉದ್ಘಾಟನೆ: ಗಡ್ಕರಿ ಘೋಷಣೆ

ಇನ್ನು ಇದೇ ಸಂದರ್ಭದಲ್ಲಿ ಬಿಜೆಪಿಯನ್ನು ಬ್ರೋಕರ್ ಜನತಾ ಪಾರ್ಟಿ ಎಂದು ಟೀಕಿಸಿದ ಪ್ರಿಯಾಂಕ ಖರ್ಗೆ ಹೇಳೀಕೆಗೆ, ಪ್ರಿಯಾಂಕ ಖರ್ಗೆ ಯಾರು ಎಂದು ನನಗೆ ಗೊತ್ತಿಲ್ಲ ಎನ್ನುವುದರ ಮೂಲಕ ಖರ್ಗೆ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಾಪ್ ಸಿಂಹ ವ್ಯಂಗ್ಯದ ತಿರುಗೇಟು ನೀಡಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:05 pm, Fri, 6 January 23