ಮೈಸೂರು ದಸರಾ ಪ್ರಾಯೋಜಕತ್ವದ ಪಟ್ಟಿ ಬಿಡುಗಡೆ: ಜಂಬೂಸವಾರಿ ಪ್ರಾಯೋಜಕತ್ವಕ್ಕೆ 2 ಕೋಟಿ ರೂ ನಿಗದಿ
ಈ ಬಾರಿ ಅದ್ದೂರಿ ದಸರಾ ಆಚರಣೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಹಲವು ಬದಲಾವಣೆಯೊಂದಿಗೆ ಈ ಬಾರಿಯ ದಸರಾ ಹಬ್ಬ ನಡೆಯಲಿದೆ ಎಂದು ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು. ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ‘ದಸರಾ ಪ್ರಾಯೋಜಕರ ಜೊತೆ ಇಂದು ಸಭೆ ನಡೆಸಿದ್ದೇವೆ. ಕಳೆದ ಬಾರಿ ದಸರಾದಲ್ಲಿ 1ಕೋಟಿ 70 ಲಕ್ಷ ಪ್ರಾಯೋಜಕತ್ವ ಬಂದಿತ್ತು. ಹೆಚ್ಚಿನ ಪ್ರಾಯೋಜಕರು ಬಂದರೆ ಕಾರ್ಯಕ್ರಮ ಆಯೋಜನೆ ಸುಲಭ ಎಂದರು.
ಮೈಸೂರು, ಸೆ.11: ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ ದಿನಗಣನೆ ಆರಂಭವಾಗಿದೆ. ದಸರಾಗೆ ಕಾಡುಬಿಟ್ಟು ನಾಡಿಗೆ ಬಂದಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಟೀಂ ಭರ್ಜರಿ ತಾಲೀಮು ಮಾಡುತ್ತಿವೆ. ಇದೀಗ ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಾಯೋಜಕತ್ವದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಬಾರಿ ಅದ್ದೂರಿ ದಸರಾ ಆಚರಣೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇನ್ನು ಪ್ರಾಯೋಜಕತ್ವದ ವಿವರ ಇಲ್ಲಿದೆ.
ಪ್ರಾಯೋಜಕತ್ವದ ವಿವರ
- ಜಂಬೂಸವಾರಿ ಪ್ರಾಯೋಜಕತ್ವಕ್ಕೆ 2 ಕೋಟಿ ನಿಗದಿ ಮಾಡಲಾಗಿದೆ. ಇದಕ್ಕಾಗಿ ಒಬ್ಬರಿಗೆ ಪ್ರಾಯೋಜಕತ್ವಕ್ಕೆ ಅವಕಾಶ ನೀಡಲಾಗಿದ್ದು, ಪ್ರಾಯೋಜಕರಿಗೆ ಜಂಬೂಸವಾರಿಯಲ್ಲಿ ಅರಮನೆಯ ಎಲ್ಲಾ ದ್ವಾರದಲ್ಲಿ ಜಾಹೀರಾತಿಗೆ ಅವಕಾಶ ಕಲ್ಪಿಸಲಾಗಿದೆ.
- ಅಂಬಾರಿ ಪ್ರಾಯೋಜಕತ್ವಕ್ಕೆ 1 ಕೋಟಿ ನಿಗದಿಯಾಗಿದ್ದು, ಮೂರು ಜನರಿಗೆ ಅವಕಾಶ ನೀಡಲಾಗಿದೆ. ಇವರಿಗೆ ಅರಮನೆ ಒಳಭಾಗದಲ್ಲಿ ಜಾಹೀರಾತಿಗೆ ಅವಕಾಶ ಮಾಡಿಕೊಡಲಾಗಿದೆ.
- ಪ್ಲಾಟಿನಂ ಪ್ರಾಯೋಜಕತ್ವಕ್ಕೆ 75 ಲಕ್ಷ ನಿಗದಿಸಿದ್ದು, ಇಬ್ಬರಿಗೆ ಅವಕಾಶ ಕೊಡಲಾಗಿದೆ. ಆಹಾರ ಮೇಳ ಯುವ ಸಂಭ್ರಮದಲ್ಲಿ ಜಾಹೀರಾತಿಗೆ ಅವಕಾಶ.
- ಗೋಲ್ಡನ್ ಪ್ರಾಯೋಜಕತ್ವಕ್ಕೆ 50 ಲಕ್ಷ ನಿಗದಿ, ಇಬ್ಬರಿಗೆ ಅವಕಾಶವಿದೆ. ಫಲಪುಷ್ಪ ಮೇಳ ದಸರಾ ಚಲನ ಚಿತ್ರೋತ್ಸವದಲ್ಲಿ ಜಾಹೀರಾತಿಗೆ ಅವಕಾಶ.
- ಸಿಲ್ವರ್ ಪ್ರಾಯೋಜಕತ್ವಕ್ಕೆ 25 ಲಕ್ಷ. ನಾಲ್ಕು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಕ್ರೀಡಾ ದಸರಾ ನಂಜನಗೂಡು ದಸರಾ ಕುಸ್ತಿಯಲ್ಲಿ ಜಾಹೀರಾತಿಗೆ ಅವಕಾಶ.
ಇತರೆ ಪ್ರಾಯೋಜಕತ್ವಕ್ಕೆ 5 ರಿಂದ 15 ಲಕ್ಷ ನಿಗದಿ ಮಾಡಲಾಗಿದ್ದು, ದಸರೆಯ 6 ಕಡೆ ಜಾಹೀರಾತಿಗೆ ಅವಕಾಶ ನೀಡಲಾಗಿದೆ. ಇದನ್ನು ಹೊರತುಪಡಿಸಿ ಎಲ್ಇಡಿ ಫ್ಲೆಕ್ಸ್ ಡಿಜಿಟಲ್ ಜಾಹೀರಾತಿಗೆ ಅವಕಾಶವಿದ್ದು, ಮೈಸೂರಿನ ಪ್ರಮುಖ ವೃತ್ತ ರಸ್ತೆಗಳಲ್ಲಿ ಅವಕಾಶವಿದೆ. ಈ ಕುರಿತು ಜಿಲ್ಲಾಡಳಿತದಿಂದ ಮಾಹಿತಿ ದೊರೆತಿದೆ.
ಇದನ್ನೂ ಓದಿ:ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ಈ ಕುರತು ಮಾತನಾಡಿದ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ‘ಈ ಬಾರಿ ಅದ್ದೂರಿ ದಸರಾ ಆಚರಣೆಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಹಲವು ಬದಲಾವಣೆಯೊಂದಿಗೆ ಈ ಬಾರಿಯ ದಸರಾ ಹಬ್ಬ ನಡೆಯಲಿದೆ. ದಸರಾ ಪ್ರಾಯೋಜಕರ ಜೊತೆ ಇಂದು ಸಭೆ ನಡೆಸಿದ್ದೇವೆ. ಕಳೆದ ಬಾರಿ ದಸರಾದಲ್ಲಿ 1ಕೋಟಿ 70 ಲಕ್ಷ ಪ್ರಾಯೋಜಕತ್ವ ಬಂದಿತ್ತು. ಹೆಚ್ಚಿನ ಪ್ರಾಯೋಜಕರು ಬಂದರೆ ಕಾರ್ಯಕ್ರಮ ಆಯೋಜನೆ ಸುಲಭ. ಈಗಾಗಲೇ ದಸರಾ ಕಾರ್ಯಕ್ರಮಗಳ ಪೂರ್ವ ಸಿದ್ಧತೆ ನಡೆಯುತ್ತಿವೆ ಎಂದು ಮೈಸೂರಿನಲ್ಲಿ ದಸರಾ ಕುರಿತು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ