AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ ಮಹೇಶ್ ಆಕ್ರೋಶ

ಹಿಂದಿನ ಡಿಸಿ ಅಭಿರಾಂ ಜಿ ಶಂಕರ್ ಒಬ್ಬರು ಡಿ ಗ್ರೂಪ್ ನೌಕರ ಹೇಳಿದ್ದನ್ನು ಆಲಿಸುತ್ತಿದ್ದರು. ಜಿಲ್ಲೆಗೆ ಅಭಿರಾಮ್ ಜಿ ಶಂಕರ್, ಹರ್ಷಗುಪ್ತ ಶಿಖಾರಂತಹ ಅಧಿಕಾರಿ ಬೇಕು ಎಂದು ಶಾಸಕ ಸಾ.ರಾ ಮಹೇಶ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ ಮಹೇಶ್ ಆಕ್ರೋಶ
ಶಾಸಕ ಸಾ.ರಾ ಮಹೇಶ್ ಮತ್ತು ರೋಹಿಣಿ ಸಿಂಧೂರಿ
preethi shettigar
|

Updated on:May 02, 2021 | 11:41 AM

Share

ಮೈಸೂರು: ಕೊವಿಡ್ ಎರಡನೇ ಅಲೆ ನಿಭಾಯಿಸುವುದರಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಜಿಲ್ಲಾಡಳಿತದ ತಪ್ಪಿನಿಂದಲೇ 3 ಸಾವಿರಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಕೊವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡುವುದರಲ್ಲೂ ನಿಯಮ ಪಾಲಿಸುತ್ತಿಲ್ಲ. ಮತ್ತೇ ಹೇಗೆ ನಿಯಂತ್ರಣಕ್ಕೆ ಬರಲಿದೆ ? ಎಂದು ಶಾಸಕ ಸಾ.ರಾ ಮಹೇಶ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಡಿಸಿ ಅವರು ವಿಡಿಯೋ ಕಾನ್ಫಿರೇನ್ಸ್ ಮೂಲಕ ಪ್ರತಿ ವಲಯದಲ್ಲೂ ಕೊವಿಡ್ ಕೇರ್ ಸೆಂಟರ್ ತೆರೆಯಬೇಕು ಎನ್ನುತ್ತಾರೆ. ಅದಕ್ಕೆ ಬೇಕಿರುವ ವೈದ್ಯರನ್ನ ಎಲ್ಲಿಂದ ತರುತ್ತಾರೆ? ಅಧಿಕಾರಿಗಳನ್ನ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿಲ್ಲ. ಹಿಂದಿನ ಡಿಸಿ ಅಭಿರಾಂ ಜಿ ಶಂಕರ್ ಒಬ್ಬರು ಡಿ ಗ್ರೂಪ್ ನೌಕರ ಹೇಳಿದ್ದನ್ನು ಆಲಿಸುತ್ತಿದ್ದರು. ಜಿಲ್ಲೆಗೆ ಅಭಿರಾಮ್ ಜಿ ಶಂಕರ್, ಹರ್ಷಗುಪ್ತ ಶಿಖಾರಂತಹ ಅಧಿಕಾರಿ ಬೇಕು ಎಂದು ಶಾಸಕ ಸಾ.ರಾ ಮಹೇಶ್ ತಿಳಿಸಿದ್ದಾರೆ.

ಕೊವಿಡ್ ಮೊದಲ ಅಲೆಯಲ್ಲಿ ಡಿಸಿಯಾಗಿದ್ದ ಅಭಿರಾಮ್ ಅವರು ಜಿಲ್ಲೆಯನ್ನ ಯಶಸ್ವಿಯಾಗಿ ನಡೆಸಿದರು. ಆದರೆ ಈ ಬಗ್ಗೆ ಈಗಿರುವ ಜಿಲ್ಲಾಧಿಕಾರಿ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಇಂತಹ ಸಮಸ್ಯೆಗಳನ್ನ ಅರಿತು ಸಾ.ರಾ ಬಳಗದಿಂದ ಕೊವಿಡ್ ಕೇರ್ ಸೆಂಟರ್ ತೆರೆದು ಮೂವರು ವೈದ್ಯರನ್ನ ನಾವೇ ನೇಮಿಸಿದ್ದೇವೆ. ಒಬ್ಬೊಬ್ಬ ವೈದ್ಯರಿಗೆ 1ಲಕ್ಷ ರೂಪಾಯಿ ಸಂಬಳ ನೀಡಿ ನೇಮಿಸಿಕೊಳ್ಳಲಾಗಿದೆ ಎಂದು ಶಾಸಕ ಸಾ.ರಾ ಮಹೇಶ್ ಹೇಳಿದ್ದಾರೆ.

200 ಬೆಡ್​ಗಳ ಅಸ್ಪತ್ರೆಯನ್ನು ಸಾ.ರಾ ಸ್ನೇಹ ಬಳಗದಿಂದ ಮಾಡಲಿದ್ದೇವೆ. ಕೆ.ಆರ್ ನಗರದಲ್ಲಿ ಎಸಿ ಮತ್ತು ಫ್ಯಾನ್ ಒಳಗೊಂಡ 200 ಬೆಡ್​ಗಳಿರುವ ಆಸ್ಪತ್ರೆ ನಿರ್ಮಿಸಿ ತಾಲ್ಲೂಕು ಆಡಳಿತಕ್ಕೆ ಒಪ್ಪಿಸುತ್ತೇವೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಾ.ರಾ ಮಹೇಶ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:

ಚಿಕ್ಕಬಳ್ಳಾಪುರದ ಸೋಂಕಿತರಿಗೆ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬೆಡ್ ರಿಸರ್ವ್; ಆರೋಗ್ಯ ಇಲಾಖೆ ಆದೇಶಕ್ಕೆ ಕೆಲ ಸಚಿವರ ಆಕ್ರೋಶ

ಬೆಡ್ ಸಿಕ್ಕಿದರೆ, ಆಕ್ಸಿಜನ್ ಸಿಗಲ್ಲ ಹೀಗಾದ್ರೆ ಹೇಗೆ: ಯಲಹಂಕದ ರೀಗನ್ ಆಸ್ಪತ್ರೆಯ ವಿರುದ್ಧ ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರೋಶ

(Mysore Law Maker SaRa Mahesh Angry on Mysuru DC Rohini Sindhuri)

Published On - 11:35 am, Sun, 2 May 21