ಮೈಸೂರು: ಆರೋಗ್ಯವಾಗಿದ್ದ ನಾಲ್ಕು ಹಸುಗಳು ಪಶು ಆಹಾರ ಸೇವಿಸಿ ಸಾವು
ಮೈಸೂರಿನಲ್ಲಿ ರೈತ ಜಯಕೃಷ್ಣನಿಗೆ ಸೇರಿದ ಸುಮಾರು 3ಲಕ್ಷ ಮೌಲ್ಯದ ನಾಲ್ಕು ಹಸುಗಳು ಮೃತಪಟ್ಟಿವೆ. ಹಸುಗಳು ಸಧ್ರಡವಾಗಿ ಬೆಳೆಯಲಿ ಎಂದು ಕುಟುಂಬಸ್ಥರು ಪಶು ಆಹಾರ ನೀಡಿದ್ದರು. ಪಶು ಆಹಾರ ಸೇವಿಸಿದ್ದ ಕೂಡಲೇ ತೀವೃ ಅಸ್ವಸ್ಥವಾದ ನಾಲ್ಕು ಹಸುಗಳು ಅಸ್ವಸ್ಥವಾದ ಕೆಲವೇ ಹೊತ್ತಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿವೆ.
ಮೈಸೂರು, ಅ.31: ಆರೋಗ್ಯವಾಗಿದ್ದ ನಾಲ್ಕು ಹಸುಗಳು (Cow) ಪಶು ಆಹಾರ ಸೇವಿಸಿ ಮೃತಪಟ್ಟಿರುವ (Death) ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ. ರೈತ ಜಯಕೃಷ್ಣನಿಗೆ ಸೇರಿದ ಸುಮಾರು 3ಲಕ್ಷ ಮೌಲ್ಯದ ನಾಲ್ಕು ಹಸುಗಳು ಮೃತಪಟ್ಟಿವೆ. ಹಸುಗಳು ಸಧ್ರಡವಾಗಿ ಬೆಳೆಯಲಿ ಎಂದು ಕುಟುಂಬಸ್ಥರು ಪಶು ಆಹಾರ ನೀಡಿದ್ದರು. ಪಶು ಆಹಾರ ಸೇವಿಸಿದ್ದ ಕೂಡಲೇ ತೀವೃ ಅಸ್ವಸ್ಥವಾದ ನಾಲ್ಕು ಹಸುಗಳು ಅಸ್ವಸ್ಥವಾದ ಕೆಲವೇ ಹೊತ್ತಿನಲ್ಲಿ ಒದ್ದಾಡಿ ಪ್ರಾಣ ಬಿಟ್ಟಿವೆ. ಸ್ಥಳಕ್ಕೆ ಪಶು ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಐದು ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು
ಮೈಸೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐದು ಕಳ್ಳತನ ಪ್ರಕರಣ, ಮಾದಕ ಜಾಲ ಪ್ರಕರಣ ಭೇದಿಸಿದ್ದಾರೆ. ಮೈಸೂರು ಪೊಲೀಸರು ಐವರು ಆರೋಪಿಗಳನ್ನ ಬಂಧಿಸಿದ್ದು ಒಟ್ಟು 55 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಕಳ್ಳ ಮಾಲು ವಶಕ್ಕೆ ಪಡೆದಿದ್ದಾರೆ. ಹಾಗೂ 15 ಕೆಜಿ 580 ಗ್ರಾಂ ಗಾಂಜಾ ಮತ್ತು 217ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಸರ್ಕಾರಿ ಅತಿಥಿ ಗೃಹದ ಬಳಿಯೇ ನಿಷೇಧಿತ ಮಾದಕ ಮಾರಾಟ ಮಾಡುತ್ತಿದ್ದರು. ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಗಳು, ಆಟೋರಿಕ್ಷಾ ಹಾಗೂ ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.
ಇನ್ನು ದಾವಣಗೆರೆಯಲ್ಲಿ ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ. ಆರೋಪಿಯಿಂದ 12 ಲಕ್ಷ ಮೌಲ್ಯದ 200ಗ್ರಾಂ ಚಿನ್ನ ಮತ್ತು 29ಗ್ರಾಂ ಬೆಳ್ಳಿ ಆಭರಣಗಳು ವಶಕ್ಕೆ ಪಡೆಯಲಾಗಿದೆ. ಹಾಗೂ ಮೈಸೂರು ದಸರಾ ವೇಳೆ ಮಾರಾಟ ಮಾಡಲು ತರಲಾಗಿದ್ದ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾಹಿತಿ ನೀಡಿದರು.
ಇದನ್ನೂ ಓದಿ: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ಅವಕಾಶ ನೀಡಿ: ಕರ್ನಾಟಕ ಹೈಕೋರ್ಟ್ ಸೂಚನೆ
ಬೀದರ್ನಲ್ಲಿ ಬಸ್ಗೆ ಬೆಂಕಿ
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡಿಪೋಗೆ ಸೇರಿದ ಬಸ್ ಗೆ ಮಹಾರಾಷ್ಟ್ರ ರಾಜ್ಯದ ಲಾತೂರ್ ಜಿಲ್ಲೆಯ ಉಮರ್ಗಾ ತಾಲೂಕಿನ ತುರುರಿ ಬಳಿ ಕರ್ನಾಟಕ ಬಸ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ನಿನ್ನೆ ರಾತ್ರಿ 8:30ರ ಸುಮಾರಿಗೆ ಪ್ರಯಾಣಿಕರನ್ನ ಒತ್ತಾಯ ಪೂರ್ವಕವಾಗಿ ಕೆಳಗಿಳಿಸಿ 30 ಕ್ಕೂ ಹೆಚ್ಚು ಜನರಿದ್ದ ತಂಡದ ಕಿಡಿಗೇಡಿಗಳು ಬೆಂಕಿಹಚ್ಚಿದ್ದಾರೆ. ಬೆಂಕಿಯ ಕೆನ್ನಾಲಿಗೆಯಿಂದಾ ಸುಟ್ಟು ಕರಕಲಾಗಿರುವ ಬಸ್ ನ್ನ ಈಗ ಬೀದರ್ ಗೆ ತೆಗೆದುಕೊಂಡು ಬಂದಿದ್ದು ಬಸ್ ಸಂಪೂರ್ಣವಾಗಿ ಸುಟ್ಟಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ