ಅಧಿಕಾರಿಗಳ ಎಡವಟ್ಟು: ದಸರಾ ಕಲಾವಿದರಿಗೆ ನೀಡಿದ ಬಹುಮಾನದ ಚೆಕ್ ವಾಪಸ್​​

| Updated By: ಗಂಗಾಧರ​ ಬ. ಸಾಬೋಜಿ

Updated on: Nov 02, 2023 | 7:54 PM

ದಸರಾ ಕಲಾವಿದರಿಗೆ ನೀಡಿದ ಬಹುಮಾನದ ಚೆಕ್​ನ್ನು ವಾಪಸ್ ಪಡೆಯಲಾಗಿದೆ. ಲಲಿತಕಲೆ ಹಾಗೂ ಕರಕುಶಲ ಉಪಸಮಿತಿ ಮುಖ್ಯಸ್ಥರ ಎಡವಟ್ಟಿನಿಂದ ಬಹುಮಾನ ವಿಜೇತರು ಅಲೆದಾಡುವಂತಾಗಿದೆ. ಈಗಾಗಲೇ ನೂರಾರು ಜನರಿಗೆ ಚೆಕ್ ವಿತರಣೆ ಮಾಡಲಾಗಿದೆ. ಇಂತಹ ಬೇಜಾವ್ದಾರಿತನಕ್ಕೆ ಕಲಾವಿದರು ನೋವು ತೋಡಿಕೊಂಡಿದ್ದಾರೆ.

ಅಧಿಕಾರಿಗಳ ಎಡವಟ್ಟು: ದಸರಾ ಕಲಾವಿದರಿಗೆ ನೀಡಿದ ಬಹುಮಾನದ ಚೆಕ್ ವಾಪಸ್​​
ದಸರಾ ಕಲಾವಿದ
Follow us on

ಮೈಸೂರು, ನವೆಂಬರ್​​​​ 02: ವಿಶ್ವ ವಿಖ್ಯಾತ ಜಂಬೂ ಸವಾರಿಯೊಂದಿಗೆ ನಾಡಹಬ್ಬ ದಸರಾ (Mysuru Dasara) ಮಹೋತ್ಸವ ಈಗಾಗಲೇ ಅದ್ಧೂರಿಯಾಗಿ ಸಂಪನ್ನಗೊಂಡಿದೆ. ಆದರೆ ದಸರಾ ಕಲಾವಿದರಿಗೆ ನೀಡಿದ ಬಹುಮಾನದ ಚೆಕ್​ನ್ನು ವಾಪಸ್ ಪಡೆಯಲಾಗಿದೆ. ಲಲಿತಕಲೆ ಹಾಗೂ ಕರಕುಶಲ ಉಪಸಮಿತಿ ಮುಖ್ಯಸ್ಥರ ಎಡವಟ್ಟಿನಿಂದ ಬಹುಮಾನ ವಿಜೇತರು ಅಲೆದಾಡುವಂತಾಗಿದೆ. ಈಗಾಗಲೇ ನೂರಾರು ಜನರಿಗೆ ಚೆಕ್ ವಿತರಣೆ ಮಾಡಲಾಗಿದೆ.

ಈ ಕುರಿತಾಗಿ ಮೈಸೂರಿನ ಹವ್ಯಾಸಿ ಛಾಯಚಿತ್ರಗಾರ ಎನ್.ಜಿ ಸುಧೀರ್​ ಪ್ರತಿಕ್ರಿಯಿಸಿದ್ದು, ಕಲಾವಿದರಿಗೆ ಇಂತಹ ಅವಮಾನ ಮಾಡಬೇಡಿ. ಸ್ಪರ್ಧೆಯಲ್ಲಿ ಭಾಗಿಯಾಗಿ ಬಹುಮಾನ ಪಡೆದ ನನಗೆ 118ರೂ ದಂಡ ಬಿದಿದೆ. ಇಂತಹ ಬೇಜಾವ್ದಾರಿತನ ಏಕೆ ಎಂದು ಕಲಾವಿದ ನೋವು ತೋಡಿಕೊಂಡಿದ್ದಾರೆ.

7 ಸಾವಿರ ರೂ. ಬಹುಮಾನ ಬಂದಿದೆ ಚೆಕ್ ನೀಡಲಾಗಿತ್ತು‌. ಅ. 26 ರಂದು ಸುಧೀರ್​ಗೆ ಚೆಕ್ ನೀಡಲಾಗಿತ್ತು. ಅ.27 ರಂದು ಸುಧೀರ್ ಬ್ಯಾಂಕ್​ಗೆ ಚೆಕ್​ನ್ನು ಹಾಜರು ಪಡಿಸಿದ್ದರು. ಆದರೆ ಅದೇ ಚೆಕ್ ಅ.30 ರಂದು ವಾಪಸ್ ಆಗಿದೆ. ವಾಪಸ್ ಆಗುವ ವೇಳೆ ಸುಧೀರ್ ಅಕೌಂಟ್​ನಿಂದ 118 ರೂ. ಕೂಡ ಕಟ್ ಮಾಡಲಾಗಿದೆ. ಸದ್ಯ ಈ ಪ್ರಕರಣದಿಂದ ಬಹುಮಾನ ವಿಜೇತ ಎನ್.ಜಿ ಸುಧೀರ್​ ಬೇಸರ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿ: ಮೈಸೂರು: ದಸರಾ ಡ್ಯೂಟಿ ಮುಗಿಸಿ ಕಾಡಿಗೆ ಹೊರಟ ಗಜಪಡೆ, ಮಾವುತರು ಕಾವಾಡಿಗಳಿಗೆ ಹೆಚ್ಚು ಗೌರವ ಧನ ನೀಡಿ ಬಿಳ್ಕೊಡುಗೆ

ಈ ಬಾರಿಯ ಜಂಬೂಸವಾರಿ ವೇಳೆ ಕಲಾತಂಡಗಳ ದಿಬ್ಬಣ ರಸ್ತೆಯ ಇಕ್ಕೆಲಗಳಲ್ಲೂ ನೆರೆದಿದ್ದ ಜನಸಾಗರವನ್ನು ಸೂಜಿ ಗಲ್ಲಿನಂತೆ ಆಕರ್ಷಿಸಿತು. 31 ಜಿಲ್ಲೆಗಳ ಸ್ತಬ್ಧ ಚಿತ್ರದ ಮೆರವಣಿಗೆ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆಯನ್ನು ಅನಾವರಣಗೊಂಡಿತ್ತು.

ಇದನ್ನೂ ಓದಿ: ನಂದಿಪೂಜೆ ಬಳಿಕವೇ ಜಂಬೂಸವಾರಿಗೆ ಮುನ್ನುಡಿ: ಈ ಪೂಜೆಯ ಹಿಂದಿದೆ ರಾಜರ ಕಾಲದ ಇತಿಹಾಸ

ಸ್ತಬ್ಧಚಿತ್ರಗಳ ಮೆರವಣಿಗೆಯಲ್ಲಿ ಧಾರವಾಡದ ಟ್ಯಾಬ್ಲೋ ಗಮನ ಸೆಳೆದಿತ್ತು. ಧಾರವಾಡ ಪೇಡಾ, ಧಾರವಾಡಿ ಎಮ್ಮೆ ನಮ್ಮ ಹೆಮ್ಮೆ ಅನ್ನೋ ಟ್ಯಾಗ್‌ಲೈನ್‌ ಗಮನ ಸೆಳೆದಿತ್ತು. ಚಿಕ್ಕಮಗಳೂರಿನ ಸ್ತಬ್ಧಚಿತ್ರದಲ್ಲಿ ಬೆಟ್ಟದಿಂದ ಬಟ್ಟಲಿನವರೆಗೆ ಅನ್ನೋ ಅಡಿಬರಹ ಹಾಕಿ ಕಾಫಿ ತೋಟದಿಂದ ಕಾಫಿ ಬಟ್ಟಲುವರೆಗೂ ಕಲಾಕೃತಿಗಳಿದ್ವು. ಚಾಮರಾಜನಗರ, ಮಂಡ್ಯ, ಚಿಕ್ಕಬಳ್ಳಾಪು ಹೀಗೆ ಹಲವು ಜಿಲ್ಲೆಗಳ ಸ್ತಬ್ಧಚಿತ್ರಗಳು ವಿವಿಧತೆ ಏಕತೆಯನ್ನು ಸಾರಿದ್ದವು.

ಸತತ 4ನೇ ಬಾರಿ ಅಂಬಾರಿ ಹೊತ್ತ ಅಭಿಮನ್ಯು ಬನ್ನಿಮಂಟಪವನ್ನ ತಲುಪಿದ್ದು ಜಂಬೂಸವಾರಿ ಯಶಸ್ವಿಯಾಗಿ ನೆರವೇರಿತ್ತು. ಕ್ಯಾಪ್ಟನ್ ಅಭಿಮನ್ಯು ಒಟ್ಟು 2 ಗಂಟೆ 16 ನಿಮಿಷದಲ್ಲಿ 5 ಕಿ. ಮೀ ಅಂಬಾರಿಯನ್ನ ಹೊತ್ತು ಸಾಗಿದ್ದ. ಬನ್ನಿಮಂಟಪಕ್ಕೆ ಅಂಬಾರಿ ತಲುಪಿದ ಬಳಿಕ ಬನ್ನಿ ಮರಕ್ಕೆ ಪೂಜೆ ಸಲ್ಲಿಸಲಾಗಿದ್ದು ದಸರಾಗೆ ಅದ್ಧೂರಿ ತೆರೆ ಬಿದ್ದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.