ಕೊಡಗಿಗೆ ಬರುವುದಕ್ಕೆ ಆಗದ ಸಿದ್ದರಾಮಯ್ಯ ಎಂಥಾ ವೀರ ? : ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವ್ಯಂಗ್ಯ

| Updated By: ವಿವೇಕ ಬಿರಾದಾರ

Updated on: Aug 30, 2022 | 8:12 AM

ಪುಟ್ಟದಾದ ಕೊಡಗಿಗೆ ಬರುವುದಕ್ಕೆ ಆಗದ ಸಿದ್ದರಾಮಯ್ಯ ಎಂಥಾ ವೀರ ? ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವ್ಯಂಗ್ಯವಾಡಿದ್ದಾರೆ.

ಕೊಡಗಿಗೆ ಬರುವುದಕ್ಕೆ ಆಗದ ಸಿದ್ದರಾಮಯ್ಯ ಎಂಥಾ ವೀರ ? : ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವ್ಯಂಗ್ಯ
ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ
Follow us on

ಮೈಸೂರು: ಪುಟ್ಟದಾದ ಕೊಡಗಿಗೆ (Kodagu) ಬರುವುದಕ್ಕೆ ಆಗದ ಸಿದ್ದರಾಮಯ್ಯ (Siddaramaiah) ಎಂಥಾ ವೀರ ? ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ವ್ಯಂಗ್ಯವಾಡಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯರ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಮಡಿಕೇರಿ ಚಲೋ ಕರೆ ನೀಡಿದ್ದರು. ಆದರೆ ಕೊಡಗಿನಲ್ಲಿ 144 ಸೆಕ್ಷನ್ ಜಾರಿಯಾದ ಹಿನ್ನೆಲೆ ಮಡಿಕೇರಿ ಚಲೋ ಮುಂದೂಡಲಾಗಿದೆ.

ಈ ಸಂಬಂಧ ಕೊಡಗು ಮೂಲದ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು ಮಾತನಾಡಿ 144 ಸೆಕ್ಷನ್ ಗೆ ತರಗುಟ್ಟಿ ಹೋದ್ರಿ? ಸಿದ್ದರಾಮಯ್ಯ ಟಿಪ್ಪು ಸುಲ್ತಾನ್‌ನಂತೆ ಪುಕ್ಕಲ. ಸಿದ್ದರಾಮಯ್ಯಗೆ ತಾಕತ್ ಇದ್ದರೆ ಕೊಡಗಿಗೆ ಬರಬೇಕಿತ್ತು. ಇಂತಾ ಎಷ್ಟು ನಿಷೇಧಾಜ್ನೆ ನೀವು ಉಲ್ಲಂಘಿಸಿಲ್ಲ ಹೇಳಿ ?ಕೊಡಗಿನಲ್ಲಿ ಯಾಕೆ 144 ಸೆಕ್ಷನ್​ಗೆ ಮರ್ಯಾದೆ ಕೊಟ್ರಿ ? ಎಂದು ಪ್ರಶ್ನೆ ಮಾಡಿದ್ದಾರೆ.

144 ಸೆಕ್ಷನ್ ಇದ್ದರು ಪ್ರತಿಭಟನೆ ಮಾಡಿ ಪೊಲೀಸ್ ಜೀಪು ನೀವು ಯಾವತ್ತೂ ಹತ್ತಿಲ್ವಾ ? ಕೊಡಗಿನವರು ಟಿಪ್ಪುವನ್ನೇ 32 ಬಾರಿ ಕೊಡವರು ಸೋಲಿಸಿದ್ದಾರೆ. ಈಗ ಟಿಪ್ಪು ತಮ್ಮ ಸಿದ್ದರಾಮಯ್ಯ ಬಂದರೆ ಸೋಲಿಸದೆ ಬಿಡುತ್ತಾರಾ ? ಯಾವನೋ ಮೂರ್ಖ ಮೊಟ್ಟೆ ಎಸೆದ ಅಷ್ಟಕ್ಕೇ ನೀವು ಹೆದರಿ ಬಿಟ್ರಿ ? ತಾಕತ್ ಇದ್ದರೆ ಕೊಡಗಿಗೆ ಬನ್ನಿ ಎಂದು ಸವಾಲಾಕಿರುವ ವಿಡಿಯೋ ವೈರಲ್ ಆಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:10 am, Tue, 30 August 22