ಮೈಸೂರು ಜಿಲ್ಲೆಯಲ್ಲಿ ಜೀತ ಪದ್ಧತಿ ಇನ್ನೂ ಜೀವಂತ: ಜೀತಕ್ಕಿಟ್ಟುಕೊಂಡು ಕೂಡಿಹಾಕಿದ್ದ ತಾಯಿ, ಮಕ್ಕಳ ರಕ್ಷಣೆ

Mysore News: ಮೈಸೂರು ಜಿಲ್ಲೆಯಲ್ಲಿ ಜೀತ ಪದ್ಧತಿ ಇನ್ನೂ ಜೀವಂತವಾಗಿದೆ. ಜೀತಕ್ಕಿಟ್ಟುಕೊಂಡು ತೋಟದಲ್ಲಿ ಕೂಡಿಹಾಕಿದ್ದ ನೇಪಾಳ ಮೂಲದ ಮಹಿಳೆ, ಇಬ್ಬರು ಮಕ್ಕಳನ್ನು ತಾಲೂಕು ಆಡಳಿತ ರಕ್ಷಣೆ ಮಾಡಿರುವಂತಹ ಘಟನೆ ಹೆಚ್​.ಡಿ.ಕೋಟೆ ತಾಲೂಕಿನ ಕೈಲಾಸಪುರ ಗ್ರಾಮದಲ್ಲಿ ನಡೆದಿದೆ. ಇಡೀ ದಿನ ಕೂಲಿ ಕೆಲಸ ಮಾಡುವ ಮಹಿಳೆಗೆ ಹಲವು ಭಾರಿ ಹಲ್ಲೆ ನಡೆಸಿದ್ದು, ಅಲ್ಲದೇ ಪುಟಾಣಿ ಮಕ್ಕಳಿಂದಲೂ ದುಡಿಸಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಜೀತ ಪದ್ಧತಿ ಇನ್ನೂ ಜೀವಂತ: ಜೀತಕ್ಕಿಟ್ಟುಕೊಂಡು ಕೂಡಿಹಾಕಿದ್ದ ತಾಯಿ, ಮಕ್ಕಳ ರಕ್ಷಣೆ
ನೇಪಾಳ ಮೂಲದ ಮಹಿಳೆಯೊಂದಿಗೆ ತಾಲೂಕು ಆಡಳಿತ ಅಧಿಕಾರಿಗಳು
Follow us
ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ

Updated on: Dec 08, 2023 | 7:44 AM

ಮೈಸೂರು, ಡಿಸೆಂಬರ್​​ 08: ಜಿಲ್ಲೆಯಲ್ಲಿ ಜೀತ ಪದ್ಧತಿ ಇನ್ನೂ ಜೀವಂತ ಇರುವ ಘಟನೆಯೊಂದು ಬೆಳಕಿಗೆ ಬಂದಿದೆ. ಜೀತಕ್ಕಿಟ್ಟುಕೊಂಡು ತೋಟದಲ್ಲಿ ಕೂಡಿಹಾಕಿದ್ದ ನೇಪಾಳ (Nepal) ಮೂಲದ ತಾಯಿ ಮತ್ತು ಇಬ್ಬರು ಮಕ್ಕಳ ರಕ್ಷಣೆ ಮಾಡಿರುವಂತಹ ಘಟನೆ ಹೆಚ್ ಡಿ ಕೋಟೆ ತಾಲ್ಲೂಕಿನ ಕೈಲಾಸಪುರ ಗ್ರಾಮದಲ್ಲಿ ನಡೆದಿದೆ.  ಎಚ್.ಬಿ.ಬಸವರಾಜು ಅವರ ಮಾಹಿತಿ ಮೇರೆಗೆ ಸ್ಥಳಕ್ಕೆ ತಹಶೀಲ್ದಾರ್ ಶ್ರೀನಿವಾಸ್, ಸಿಡಿಪಿಒ ಆಶಾ, ಸಮಾಜ ಕಲ್ಯಾಣ ಇಲಾಖೆ ರಾಮಸ್ವಾಮಿ, ಗಿರಿಜನ ಅಭಿವೃದ್ದಿ ಇಲಾಖೆ ನಾರಾಯಣಸ್ವಾಮಿ ಭೇಟಿ ನೀಡಿ ರೈತ ಈರೇಗೌಡರ ಜಮೀನಿನಲ್ಲಿದ್ದ ಮಹಿಳೆ ಮತ್ತು ಮಕ್ಕಳ ರಕ್ಷಣೆ ಮಾಡಿ ಸಿಡಿಪಿಒ ವಶಕ್ಕೆ ನೀಡಲಾಗಿದೆ.

ಜಮೀನಿನಲ್ಲಿ ಪುಟಾಣಿ ಮಕ್ಕಳೊಟ್ಟಿಗೆ ದನ ಕಾಯುತ್ತಿದ್ದ ನೇಪಾಳ ಮೂಲದ ಮಹಿಳೆ ನಿರ್ಮಲಾ, ಅಧಿಕಾರಿಗಳ ತಂಡ ಕಂಡು ಭಯಭೀತರಾಗಿದ್ದಾರೆ. ಮಧ್ಯವರ್ತಿಯೊಬ್ಬರ ಮೂಲಕ ಪತಿ ಗೋಪಾಲ್ ಇಬ್ಬರು ಮಕ್ಕಳೊಂದಿಗೆ ಈರೇಗೌಡ ಎಂಬುವವರ ಜಮೀನಿನ ತೋಟದ ಮನೆಯಲ್ಲಿ ಒಂದುವರೆ ವರ್ಷದಿಂದ ಕೆಲಸ ಮಾಡುದ್ದರು.

ಇದನ್ನೂ ಓದಿ: ಮುರಿದ ಗುಡಿಸಿಲಿನಲ್ಲಿದೆ ಆ ಅಂಗನವಾಡಿ, ಹೆಗ್ಗಣಗಳು ಅಲ್ಲಲ್ಲಿ ಕೊರೆದು ಹಾಕಿವೆ, ಆದರೂ ಮೈಸೂರು ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ!

ಪತ್ನಿ 200ರೂ, ಪತಿಗೆ 300 ರೂ. ದಿನಕ್ಕೆ ಕೂಲಿ ಆಧಾರದ ಮೇಲೆ ಜಮೀನಿನ ಕೆಲಸಕ್ಕೆ ಸೇರಿಸಿಕೊಂಡಿದ್ದ ಈರೇಗೌಡ, ಬೆಳಗ್ಗೆ ನಾಲ್ಕು ಗಂಟೆಯಿಂದ ರಾತ್ರಿ 8 ಗಂಟೆ ತನಕ ವಿವಿಧ ಕಾಯಕದಲ್ಲಿ ದುಡಿಸಿಕೊಳ್ಳುತ್ತಿದ್ದ ಎಂಬ ಆರೋಪ ಮಾಡಲಾಗಿದೆ. ಹೆಚ್ಚಿನ ಸಮಯದ ಕೆಲಸ ವಿರೋಧಿಸಿದ್ದಕ್ಕೆ ನಾಲ್ಕು ತಿಂಗಳಿಂದ ದಂಪತಿಯನ್ನು ಬೇರ್ಪಡಿಸಿ ಪತಿಯನ್ನು ಕೊಡಗಿನಲ್ಲಿರಿಸಿದ್ದ. ಪತಿ, ಪತ್ನಿ ಭೇಟಿ ಮತ್ತು ಮೊಬೈಲ್ ಮಾತುಕತೆಗೂ ಅವಕಾಶ ಕಲ್ಪಿಸದ ಆರೋಪ ಮಾಡಲಾಗಿದೆ.

ಇದನ್ನೂ ಓದಿ: ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಆಯುಷ್ಮಾನ್‌ ಭಾರತ್ ಯೋಜನೆಯಡಿ ಪ್ರತಿದಿನ 50ಕ್ಕೂ ಅಧಿಕ ಜನರಿಗೆ ಹೃದಯ ಚಿಕಿತ್ಸೆ

ಇಡೀ ದಿನ ಕೂಲಿ ಕೆಲಸ ಮಾಡುವ ಮಹಿಳೆಗೆ ಹಲವು ಭಾರಿ ಹಲ್ಲೆ ನಡೆಸಿ ಊಟಕ್ಕೂ ನೀಡದೆ ಉಪವಾಸ ಇರಿಸಲಾಗಿದೆ. ಅಲ್ಲದೇ ಪುಟಾಣಿ ಮಕ್ಕಳಿಂದಲೂ ದುಡಿಸಿಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ. ಸ್ವಗ್ರಾಮಕ್ಕೆ ತೆರಳಲು ಬಿಡದೆ ಬಲವಂತವಾಗಿ ಕೆಲಸ ಮಾಡಿಸುತ್ತಿದ್ದ. ಸದ್ಯ ವಾಸ ಇದ್ದ ತೋಟದ ಮನೆಯಿಂದ ಮಹಿಳೆ ಮತ್ತು ಇಬ್ಬರು ಮಕ್ಕಳ ರಕ್ಷಣೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ