ಅನುದಾನ ಬಳಕೆಗಾಗಿ ಬೇಕಾಬಿಟ್ಟಿ ಖರ್ಚು: ದಾವಣಗೆರೆಯಲ್ಲಿ ಇದುವರೆಗೂ ಬಳಕೆಯಾಗದ ಇ ಶೌಚಾಲಯಗಳು

ಸ್ಮಾರ್ಟ್​ ಸಿಟಿ ಅಧಿಕಾರಿಗಳು ಮೊದಲ ಹಂತದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ 9 ಇ-ಶೌಚಾಲಯಗಳನ್ನ ನಿರ್ಮಿಸಲಾಗಿತ್ತು. ಆ 9 ಶೌಚಾಲಯಗಳು ಬಳಕೆ ಆಗದೆ ಪಾಳು ಬಿದ್ದಿದ್ದವು. ಆದರೂ 2ನೇ ಹಂತದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ 20 ಕಡೆ 40 ಇ-ಶೌಚಾಲಯಗಳನ್ನ ನಿರ್ಮಿಸಿದ್ದಾರೆ. ಇಷ್ಟು ದೊದ್ದ ಮೊತ್ತವನ್ನು ಖರ್ಚು ಮಾಡಿ ಇ-ಶೌಚಾಲಯಗಳನ್ನು ನಿರ್ಮಿಸಿದರೂ ಸಾರ್ವಜನಿಕರು ಬಳಸಲು ಆಗುತ್ತಿಲ್ಲ.

ಅನುದಾನ ಬಳಕೆಗಾಗಿ ಬೇಕಾಬಿಟ್ಟಿ ಖರ್ಚು: ದಾವಣಗೆರೆಯಲ್ಲಿ ಇದುವರೆಗೂ ಬಳಕೆಯಾಗದ ಇ ಶೌಚಾಲಯಗಳು
ಇ-ಶೌಚಾಲಯಗಳು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Dec 07, 2023 | 10:47 PM

ದಾವಣಗೆರೆ, ಡಿಸೆಂಬರ್​ 07: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ಮಾರ್ಟ್ ಸಿಟಿ ಯೋಜನೆ (Smart City) ಅಡಿಯಲ್ಲಿ 6.5 ಕೋಟಿ ರೂ. ವೆಚ್ಚದಲ್ಲಿ ನಗರದಲ್ಲಿ ಒಟ್ಟು 49 ಇ-ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಇದುವರೆಗೂ ಒಂದೇ ಒಂದು ಶೌಚಾಲಯವು ಸಾರ್ವಜನಿಕರಿಂದ ಬಳಕೆ ಆಗಿಲ್ಲ. ಕೇಂದ್ರ ನೀಡುತ್ತಿರುವ ಹಣವನ್ನು ಹೇಗೆ ಖರ್ಚು ಮಾಡಬೇಕೆಂಬ ಜ್ಞಾನ ಇಲ್ಲದ ಅಧಿಕಾರಿಗಳು ಕೋಟ್ಯಂತರ ರೂಪಾಯಿ ಅನುದಾನ ಅಪವ್ಯಯ ಮಾಡಿದ್ದಾರೆ.

ಸ್ಮಾರ್ಟ್​ ಸಿಟಿ ಅಧಿಕಾರಿಗಳು ಮೊದಲ ಹಂತದಲ್ಲಿ 1.5 ಕೋಟಿ ರೂ. ವೆಚ್ಚದಲ್ಲಿ 9 ಇ-ಶೌಚಾಲಯಗಳನ್ನ ನಿರ್ಮಿಸಲಾಗಿತ್ತು. ಆ 9 ಶೌಚಾಲಯಗಳು ಬಳಕೆ ಆಗದೆ ಪಾಳು ಬಿದ್ದಿದ್ದವು. ಆದರೂ 2ನೇ ಹಂತದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ 20 ಕಡೆ 40 ಇ-ಶೌಚಾಲಯಗಳನ್ನ ನಿರ್ಮಿಸಿದ್ದಾರೆ. ಇಷ್ಟು ದೊದ್ದ ಮೊತ್ತವನ್ನು ಖರ್ಚು ಮಾಡಿ ಇ-ಶೌಚಾಲಯಗಳನ್ನು ನಿರ್ಮಿಸಿದರೂ ಸಾರ್ವಜನಿಕರು ಬಳಸಲು ಆಗುತ್ತಿಲ್ಲ. ಶೌಚಾಲಯ ಬಳಸಲು ಕಾಯಿನ್​ ಹಾಕಿದರೆ ಡೋರ್​ ಓಪನ್​ ಆಗುತ್ತಿಲ್ಲ. ಇಷ್ಟೆಲ್ಲ ಅವ್ಯವಸ್ಥೆ ಆಗಿದ್ದರೂ ಸ್ಮಾರ್ಟ್​ ಸಿಟಿ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ.

ಇದನ್ನೂ ಓದಿ: ದಾವಣಗೆರೆ​ ರಿಂಗ್​ ರೋಡ್​​ ಕಾಮಗಾರಿಗಾಗಿ ತೆರವು ಕಾರ್ಯಾಚರಣೆ; 144 ನಿಷೇಧಾಜ್ಞೆ ಜಾರಿ, ಪಾಲಿಕೆ ಆಯುಕ್ತೆ ವಿರುದ್ಧ ಆಕ್ರೋಶ

ಸ್ಮಾರ್ಟ್​ ಸಿಟಿಯ ಈ ಯೋಜನೆ ಬಗ್ಗೆ ಸಾರ್ವಜನಿಕರು ಮೊದಲೇ ಹಂತದಲ್ಲೇ ವಿರೋಧ ಮಾಡಿದರು. ಇ-ಶೌಚಾಲಯ ಬೇಡ ಸುಲಭ ಶೌಚಾಲಯ ನಿರ್ಮಾಣ ಮಾಡಿ ಅಂತ ಮನವಿ ಮಾಡಿದರೂ ಸ್ಮಾರ್ಟ್​ ಸಿಟಿ ಅಧಿಕಾರಿಗಳು ಏಕ ಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು 2ನೇ ಹಂತದಲ್ಲಿ ಮತ್ತೆ 5 ಕೋಟಿ ರೂಪಾಯಿ ಖರ್ಚು ಮಾಡಿ ಮತ್ತೆ ಇ-ಶೌಚಾಲಯ ನಿರ್ಮಾಣ ಮಾಡಿದ್ದಾರೆ. ಇದು ಅನುದಾನ ಖರ್ಚು ಮಾಡೋದು ಮತ್ತು ಕಮಿಷನ್​ ಆಸೆಗಾಗಿ ಮಾಡ್ತಿರೋ ಕಾಮಗಾರಿ ಒಂದು ತಿಳಿಯದಂತಾಗಿದೆ.

ಇದನ್ನೂ ಓದಿ: ಬಿಇಓ ಅಧಿಕಾರಿಗಳ ಲಂಚಾವತಾರ ಅನಾವರಣ, ಇದು ಹೊನ್ನಾಳಿಯ ಶಿಕ್ಷಕ ಗೋಣೆಪ್ಪ ಅವರ ತಬರನ ಕಥೆ!

ಒಂದೊಂದು ಇ-ಶೌಚಾಲಯಕ್ಕೆ ಬರೊಬ್ಬರಿ 15 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಇದು ಯಾವ ಪುರುಷಾರ್ಥಕ್ಕಾಗಿ ಮಾಡುತ್ತಿರುವ ಕಾಮಗಾರಿ ಅಂತ ಗೊತ್ತಾಗ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾರ್ವಜನಿಕರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಪೋಲಾಗುತ್ತಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ತಮ್ಮ ಪಾಲಿನ ಕಮಿಷನ್​ ತೆಗೆದುಕೊಂಡು ಸುಮ್ಮನಾಗುತ್ತಿದ್ದಾರೆ. ಯಾವುದೇ ಸಾರ್ವಜನಿಕರ ಕಾಮಗಾರಿ ಮಾಡೋದಕ್ಕಿಂತ ಮುಂಚೆ ಜನರ ಅಭಿಪ್ರಾಯಕ್ಕೆ ಮನ್ನಣೆಕೊಟ್ಟರೆ ಇಂತಹ ಯಡವಟ್ಟುಗಳು ಆಗ್ತಿರಲಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.