AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರುಪಾಲಾಗಿದ್ದ ಮೂವರು ಮಾಲಾಧಾರಿಗಳಲ್ಲಿ ಓರ್ವನ ರಕ್ಷಣೆ, ಮತ್ತೋರ್ವನ ಮೃತದೇಹ ಪತ್ತೆ

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಪಿಲಾ ನದಿಯಲ್ಲಿ ಮುಳುಗಿದ್ದ ಮೂವರು ಅಯ್ಯಪ್ಪ ಮಾಲಾಧಾರಿಗಳಲ್ಲಿ ಓರ್ವನನ್ನು ರಕ್ಷಣೆ ಮಾಡಿದ್ದು, ಮತ್ತೋರ್ವನ ಮೃತ ದೇಹ ಪತ್ತೆಯಾಗಿದೆ. ಇನ್ನು ಮಗದೋರ್ವನಿಗಾಗಿ ಹುಡುಕಾಟ ಮುಂದುವರೆದಿದೆ.

ನೀರುಪಾಲಾಗಿದ್ದ ಮೂವರು ಮಾಲಾಧಾರಿಗಳಲ್ಲಿ ಓರ್ವನ ರಕ್ಷಣೆ, ಮತ್ತೋರ್ವನ ಮೃತದೇಹ ಪತ್ತೆ
ಶೋಧಕಾರ್ಯ
Follow us
ದಿಲೀಪ್​, ಚೌಡಹಳ್ಳಿ
| Updated By: ವಿವೇಕ ಬಿರಾದಾರ

Updated on:Jan 19, 2024 | 12:30 PM

ಮೈಸೂರು, ಜನವರಿ 19: ಕಪಿಲಾ ನದಿಯಲ್ಲಿ (Kapila River) ಮುಳುಗಿದ್ದ ಮೂವರು ಅಯ್ಯಪ್ಪ (Ayyappa) ಮಾಲಾಧಾರಿಗಳಲ್ಲಿ ಓರ್ವನನ್ನು ರಕ್ಷಣೆ ಮಾಡಿದ್ದು, ಮತ್ತೋರ್ವನ ಮೃತ ದೇಹ ಪತ್ತೆಯಾಗಿದೆ. ಇನ್ನು ಮಗದೋರ್ವನಿಗಾಗಿ ಹುಡುಕಾಟ ಮುಂದುವರೆದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗವಿರಂಗ, ರಾಕೇಶ್ (19), ಅಪ್ಪು (16) ನೀರು ಪಾಲಾಗಿದ್ದರು. ಇದೀಗ ಗವಿರಂಗ ಎಂಬುವರನ್ನು ರಕ್ಷಣೆ ಮಾಡಲಾಗಿದೆ. ಬಾಲಕ ಅಪ್ಪು ಮೃತ ದೇಹ ಪತ್ತೆಯಾಗಿದೆ. ಇವರನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಂಟು ಜನ ಅಯ್ಯಪ್ಪ ಮಾಲಾಧಾರಿಗಳು ಕಳೆದ ಮೂರು ದಿನಗಳ ಹಿಂದೆ ಶಬರಿ ಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಮುಗಿಸಿಕೊಂಡು ಮಾಲಧಾರಿಗಳು ನಂಜನಗೂಡಿಗೆ ಬಂದಿದ್ದಾರೆ. ಇಲ್ಲೇ ಮಾಲೆ ತೆಗೆದಯಲು ನಿಶ್ಚಯಿಸಿದ್ದರು. ಹೀಗಾಗಿ ಐವರು ಕಪಿಲಾ ನದಿಯ ಹೆಜ್ಜಿಗೆ ಸೇತುವೆ ಬಳಿ ಸ್ನಾನಕ್ಕೆ ಹೋಗಿದ್ದರು. ಸ್ನಾನ ಮಾಡುವಾಗ ಮೂವರು ನೀರು ಪಾಲಾಗಿದ್ದಾರೆ. ಇಬ್ಬರು ಈಜಿ ದಡ ಸೇರಿದ್ದಾರೆ. ಬಳಿಕ ಅಗ್ನಿಶಾಮಕದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ.

ಪದವಿ ವಿದ್ಯಾರ್ಥಿನಿ‌ ನೇಣು ಬಿಗಿದುಕೊಂಡು ಆತ್ಮಹತ್ಯೆ

ಶಿವಮೊಗ್ಗ: ಪದವಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ  ತೀರ್ಥಹಳ್ಳಿ ತಾಲೂಕಿನ ಬಿಳುಕೊಪ್ಪ ಗ್ರಾಮದಲ್ಲಿ ನಡೆದಿದೆ. ಅಧೀಕ್ಷಾ (20) ನೇಣಿಗೆ ಶರಣಾದ ವಿದ್ಯಾರ್ಥಿನಿ. ನಿನ್ನೆ (ಜ.17)ರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತೀರ್ಥಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:15 pm, Fri, 19 January 24