Mysuru News: ತಂದೆ-ತಾಯಿ ಜೊತೆ ಶ್ರೀ ಕ್ಷೇತ್ರ ಕಪ್ಪಡಿಗೆ ಬಂದಿದ್ದ 13 ವರ್ಷದ ಬಾಲಕಿ ದುರಂತ ಅಂತ್ಯ

ಹೆತ್ತವರ ಜೊತೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಶ್ರೀ ಕ್ಷೇತ್ರ ಕಪ್ಪಡಿಗೆ ಬಂದಿದ್ದ 13 ವರ್ಷದ ಬಾಲಕಿ ದುರಂತ ಅಂತ್ಯ ಕಂಡಿದ್ದಾಳೆ.

Mysuru News: ತಂದೆ-ತಾಯಿ ಜೊತೆ ಶ್ರೀ ಕ್ಷೇತ್ರ ಕಪ್ಪಡಿಗೆ ಬಂದಿದ್ದ 13 ವರ್ಷದ ಬಾಲಕಿ ದುರಂತ ಅಂತ್ಯ
Edited By:

Updated on: Jul 17, 2023 | 2:02 PM

ಮೈಸೂರು, (ಜುಲೈ 17): ತಂದೆ-ತಾಯಿ ಜೊತೆ ದೇವಸ್ಥಾನಕ್ಕೆ ಬಂದಿದ್ದ 13 ವರ್ಷದ ಬಾಲಕಿ ಜಲಸಮಾಧಿಯಾಗಿರುವ ಘಟನೆ ಮೈಸೂರು(Mysuru) ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಕಪ್ಪಡಿ ಬಳಿ ನಡೆದಿದೆ. ಗಂಧನಹಳ್ಳಿಯ ಲೋಕೇಶ್ ಎಂಬುವರ ಪುತ್ರಿ 13 ವರ್ಷದ ಸ್ಫೂರ್ತಿ ಮೃತ ದುರ್ವೈವಿ. ತಂದೆ-ತಾಯಿ ಜೊತೆ ಕಪ್ಪಡಿ ಕ್ಷೇತ್ರಕ್ಕೆ ಬಂದಿದ್ದ ಸ್ಫೂರ್ತಿ, ಕೈ ತೊಳೆಯುವಾಗ ಕಾಲು ಜಾರಿ ಕಾವೇರಿ ನದಿಯಲ್ಲಿ ಬಿದ್ದಿದ್ದಾಳೆ. ಸ್ಫೂರ್ತಿ ಮೃತ ದೇಹ ಪತ್ತೆಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ.

ಇಂದು (ಜುಲೈ 17) ಅಮಾವಾಸ್ಯೆ ಹಿನ್ನೆಲೆಯಲ್ಲಿ ಗಂಧನಹಳ್ಳಿಯ ಸ್ಫೂರ್ತಿ, ತನ್ನ ತಂದೆ ತಾಯಿ ಜೊತೆ ಶ್ರೀ ಕ್ಷೇತ್ರ ಕಪ್ಪಡಿಗೆ ಬಂದಿದ್ದಳು. ಆದ್ರೆ, ದುರ್ವೈವ ದೇವಸ್ಥಾನಕ್ಕೆ ಹೋಗುವ ಮುನ್ನ ಕೈಕಾಲು ತೊಳೆದುಕೊಳ್ಳಲು ಹೋದಾಗ ಸ್ಫೂರ್ತಿ ಕಾವೇರಿ ನದಿ ಪಾಲಾಗಿದ್ದಾಳೆ. ದೇವಸ್ಥಾನಕ್ಕೆ ಬಂದು ಮಗಳನ್ನು ಕಳೆದುಕೊಂಡ ಲೋಕೇಶ್ ದಂಪತಿಯ ಆಕ್ರಂದನ ಮುಗಿಲು ಮುಟ್ಟಿದೆ.

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us