ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಗೆ ಅನುಮತಿ ನೀಡಿದ ಪೊಲೀಸ್ ಇಲಾಖೆ: ಷರತ್ತು ಅನ್ವಯ

ರಾಜ್ಯದಲ್ಲಿ ಸುದ್ದಿಯಾಗುತ್ತಿರುವ ಮಹಿಷ ದಸರಾ(Mahisha Dasara) ಆಚರಣೆಗೆ ಇದೀಗ ಷರತ್ತುಬದ್ಧ ಅನುಮತಿಯನ್ನು ಮೈಸೂರು ಪೊಲೀಸ್ ಆಯುಕ್ತ ರಮೇಶ್​ ಬಾನೋತ್(Ramesh Banoth)​ ನೀಡಿದ್ದಾರೆ.

ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಗೆ ಅನುಮತಿ ನೀಡಿದ ಪೊಲೀಸ್ ಇಲಾಖೆ: ಷರತ್ತು ಅನ್ವಯ
ಮಹಿಷ ದಸರಾ
Follow us
ದಿಲೀಪ್​, ಚೌಡಹಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 12, 2023 | 4:20 PM

ಮೈಸೂರು, ಅ.12: ರಾಜ್ಯದಲ್ಲಿ ಸುದ್ದಿಯಾಗುತ್ತಿರುವ ಮಹಿಷ ದಸರಾ(Mahisha Dasara) ಆಚರಣೆಗೆ ಇದೀಗ ಷರತ್ತುಬದ್ಧ ಅನುಮತಿಯನ್ನು ಮೈಸೂರು ಪೊಲೀಸ್ ಆಯುಕ್ತ ರಮೇಶ್​ ಬಾನೋತ್(Ramesh Banoth)​ ನೀಡಿದ್ದಾರೆ. ಹೌದು, ಬಹಳ ದಿನಗಳಿಂದ ಮಹಿಷ ದಸರಾ ನಡೆಸಲು ಪರ-ವಿರೋಧ ನಡೆಯುತ್ತಲೆ ಇತ್ತು. ಒಂದೆಡೆ ದಲಿತ ಸಮಿತಿಗಳು ಹಾಗೂ ಮಹಿಷ ದಸರಾ ಸಮಿತಿಯವರು ನಡೆಸಬೇಕು ಎಂದರೆ, ಇತ್ತ ಸಂಸದ ಪ್ರತಾಪ್​ ಸಿಂಹ ನೇತೃತ್ವದಲ್ಲಿ ಇದನ್ನು ವಿರೋಧಿಸಿ ಚಾಮುಂಡಿ ಬೆಟ್ಟ ಚಲೋಗೆ ಕರೆ ಕೊಟ್ಟಿದ್ದರು. ಈ ಹಿನ್ನಲೆ ಮುಂಜಾಗೃತ ಕ್ರಮವಾಗಿ ಕಮಿಷನರ್​ ‘ಚಾಮುಂಡಿ ಬೆಟ್ಟ ಸೇರಿ (ಟೌನ್ ಹಾಲ್ ಹೊರತುಪಡಿಸಿ) ಮೈಸೂರು ನಗರದ ವ್ಯಾಪ್ತಿಯಲ್ಲಿ ಅ.12 ರ ಮಧ್ಯರಾತ್ರಿ 12-00 ಗಂಟೆಯಿಂದ ಅ.14 ರ ಬೆಳಿಗ್ಗೆ 06-00 ಗಂಟೆಯವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿಎ ಎಂದು ಮೈಸೂರು ಕಮಿಷನರ್​ ಹೇಳಿದರು.

ಮಹಿಷ ದಸರಾ ಆಚರಣೆಗೆ ಷರತ್ತುಬದ್ಧ ಅನುಮತಿ

ಇನ್ನು ಮೈಸೂರಿನ ಟೌನ್​​ಹಾಲ್​ನಲ್ಲಿ ಮಹಿಷ ದಸರಾ ಆಚರಣೆಗೆ ಅವಕಾಶ ಕೊಡಲಾಗಿದೆ. ಆದರೆ, ವೇದಿಕೆ ಕಾರ್ಯಕ್ರಮಕ್ಕಷ್ಟೇ ಅವಕಾಶ ನೀಡಲಾಗಿದೆ. ಮೈಸೂರಿನಲ್ಲಿ ಯಾವುದೇ ಮೆರವಣಿಗೆ, ಪ್ರತಿಭಟನೆಗೆ, ಸಂಭ್ರಮಾಚರಣೆ  ನಿಷೇಧವಾಗಿದೆ. ಜೊತೆಗೆ ಧಾರ್ಮಿಕ ಭಾವನೆ ಕೆಣಕುವ, ಪ್ರಚೋದನೆ ಭಾಷಣ ಮಾಡಬಾರದು ಹೀಗೆ ಇನ್ನಿತರ ನಿಬಂಧನೆಗಳನ್ವಯ ಮಹಿಷ ದಸರಾ ಆಚರಣೆಗೆ ಷರತ್ತುಬದ್ಧ ಅನುಮತಿ ನೀಡಲಾಗಿದೆ ಎಂದರು.

ಇದನ್ನೂ ಓದಿ:ಉಡುಪಿ: ಮಹಿಷ ದಸರಾಗೆ ಅವಕಾಶ ಕೊಟ್ಟರೆ ತಡೆಯುತ್ತೇವೆ: ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ

ಸಾಮಾಜಿಕ‌ ಜಾಲತಾಣದ ಮೇಲೆ ಹದ್ದಿನ ಕಣ್ಣು

ಸಾಮಾಜಿಕ‌ ಜಾಲತಾಣದಲ್ಲಿ ಅವಹೇಳನ ವಿಚಾರ ‘ಸಂಸದ ಪ್ರತಾಪಸಿಂಹ ಆದಿಯಾಗಿ ಎಲ್ಲರ ಟ್ವೀಟ್, ಜಾಲತಾಣಗಳ‌ ಮೇಲೆ‌ ಕಣ್ಣಿರಸಲಾಗಿದೆ. ಮಹಿಷೋತ್ಸವ ನೆಪದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮಾಧ್ಯಮ ಹೇಳಿಕೆ, ಸಾಮಾಜಿಕ ಜಾಲತಾಣಗಳ ಮೇಲೂ ನಿಗಾ ವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದರು. ‘ನಮಗೆ ಜನಪ್ರತಿನಿಧಿ, ಸಾಮಾನ್ಯ ವ್ಯಕ್ತಿ ಎಂಬ ವ್ಯತ್ಯಾಸ ಇಲ್ಲ. ಇದುವರೆಗೆ ಮಹಿಷ ದಸರಾ ನಡೆಸುವ, ತಡೆಯುವ ಬಗ್ಗೆ ಯಾರ‌್ಯಾರು ಏನು ಮಾತಾಡಿದ್ದಾರೆ ಎಲ್ಲವನ್ನೂ ಸಂಗ್ರಹಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್‌ಗಳಲ್ಲಿ ಕಾನೂನು ಉಲ್ಲಂಘನೆಯ ಅಂಶಗಳು ಕಂಡುಬಂದಿವೆ. ಎಲ್ಲವನ್ನೂ ಕಾನೂನು ತಜ್ಞರಿಗೆ ಕಳುಹಿಸಿದ್ದೇವೆ. ಸಂಜೆ ಹೊತ್ತಿಗೆ ಕಾನೂನು ತಜ್ಞರ ಅಭಿಪ್ರಾಯ ದೊರಯಲಿದೆ. ಅವರ ಸಲಹೆ ಆಧರಿಸಿ ಕ್ರಮ ವಹಿಸಲಾಗುವುದು ಎಂದರು.

ಮಹಿಷ ಉತ್ಸವ, ಚಾಮುಂಡಿ ಚಲೋಗೆ ಮಾತ್ರ ನಿಷೇಧಾಜ್ಞೆ ಅನ್ವಯ

ಇನ್ನ ಮುಂಜಾಗೃತವಾಗಿ ಕೈಗೊಂಡ ಕ್ರಮಗಳು ಮದುವೆ, ಸಭೆ, ಸಮಾರಂಭ, ಶಾಲಾ- ಕಾಲೇಜಿಗೆ ಅನ್ವಯ ಆಗಲ್ಲ. ಕೇವಲ ಮಹಿಷ ಉತ್ಸವ ಹಾಗೂ ಚಾಮುಂಡಿ ಚಲೋಗೆ ಮಾತ್ರ ನಿಷೇಧಾಜ್ಞೆ ಅನ್ವಯ ಎಂದರು. ‘ಕಾನೂನು ಮತ್ತು ಸುವ್ಯವಸ್ಥೆ ಕೆಡಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಚಾಮುಂಡಿ ಬೆಟ್ಟಕ್ಕೆ ನಾಲ್ಕು ರಸ್ತೆಗಳಿವೆ. ಎಲ್ಲ ಕಡೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿಕೊಳ್ಳುತ್ತೇವೆ. ಎಲ್ಲ ಕಡೆ ತಪಾಸಣೆ ನಡೆಸಿ ಮಾಡಿ ಬೆಟ್ಟಕ್ಕೆ ಬಿಡಲಾಗುತ್ತೆ. ಭಕ್ತರ ಪ್ರವೇಶಕ್ಕೆ ನಿರ್ಬಂಧ ಇರಲ್ಲ. ಪ್ರತಿಯೊಬ್ಬರನ್ನೂ ತಪಾಸಣೆ ಮಾಡುತ್ತೇವೆ. ಬೆಟ್ಟದಲ್ಲಿ ಮಹಿಷಾ ಪ್ರತಿಮೆ ಬಳಿಯು ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗುತ್ತದೆ. ಮಹಿಷಾ ಪ್ರತಿಮೆ‌ ಬಳಿ ಯಾರನ್ನು ಬಿಡುವುದಿಲ್ಲ ಎಂದರು.

ಇನ್ನು ಈ ಕುರಿತು ಮಾತನಾಡಿದ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವರು ‘ ಮಹಿಷ ದಸರಾ ಬದಲು ಮಹಿಷ ಉತ್ಸವ ಹೆಸರಿನಲ್ಲಿಆಚರಣೆ ಮಾಡುತ್ತೆವೆ. ಪುರಭವನದಲ್ಲಿ ಆಚರಣೆಗೆ ಅವಕಾಶ ನೀಡಿದ್ದನ್ನು ಸ್ವಾಗತಿಸುತ್ತೇವೆ.  ಈ ವೇಳೆ ಮಹಿಷ ಉತ್ಸವ & ಧಮ್ಮ ದೀಕ್ಷೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಮಹಿಷನಿಗೆ ಪುಷ್ಪಾರ್ಚನೆ ಮಾಡಲು ಅವಕಾಶ‌ ನೀಡುವಂತೆ ಮನವಿ ನೀಡಿದ್ದು, ಶಾಂತಿಯುತವಾಗಿ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ಮಾಡುತ್ತೇವೆ. ಇದರಿಂದ ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ಅವಮಾನ ಮಾಡುವುದಿಲ್ಲ. ನಮಗೆ ಇಷ್ಟವಾದ ಮಹಿಷನಿಗೆ ಗೌರವ ಸಲ್ಲಿಸುತ್ತೇವೆ ಅಷ್ಟೇ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:31 pm, Thu, 12 October 23