AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಷ ದಸರಾ-ಚಾಮುಂಡಿ ಬೆಟ್ಟ ಚಲೋ ಜಟಾಪಟಿ: ಮೈಸೂರು ನಗರ ಆಯುಕ್ತರು ಏನಂದ್ರು?

ಮಹಿಷ ದಸರಾ ಆಚರಣೆಗೆ ದಲಿತ ಸಂಘಟನೆಗಳು ಮುಂದಾಗಿವೆ. ಇದನ್ನು ವಿರೋಧಿಸಿ ಸಂಸದ ಪ್ರತಾಪ್​​ ಸಿಂಹ್​ ಚಾಮುಂಡಿ ಬೆಟ್ಟ ಚಲೋ ಜಾಥಾಗೆ ಕರೆ ಕೊಟ್ಟಿದ್ದಾರೆ. ಈ ಬಗ್ಗೆ ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾತನಾಡಿದ್ದಾರೆ.

ಮಹಿಷ ದಸರಾ-ಚಾಮುಂಡಿ ಬೆಟ್ಟ ಚಲೋ ಜಟಾಪಟಿ: ಮೈಸೂರು ನಗರ ಆಯುಕ್ತರು ಏನಂದ್ರು?
ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್
TV9 Web
| Edited By: |

Updated on:Oct 10, 2023 | 5:47 PM

Share

ಮೈಸೂರು ಅ.10: ಮಹಿಷ ದಸರಾ (Mahisha Dasara) ಆಚರಿಸಿಯೇ ತೀರುತ್ತೇವೆ ಎಂದು ದಲಿತ ಸಂಘಟನೆಗಳು ಮತ್ತು ಮಹಿಷ ದಸರಾ ಸಮಿತಿಯವರು ಪಟ್ಟು ಹಿಡಿದಿದ್ದಾರೆ. ಇದನ್ನು ವಿರೋಧಿಸಿ ಕೊಡಗು-ಮೈಸೂರು ಕ್ಷೇತ್ರ ಸಂಸದ ಪ್ರತಾಪ್​ ಸಿಂಹ್ (Pratap Simha)​​ ಚಾಮುಂಡಿ ಬೆಟ್ಟ ಚಲೋ (Chamundi betta Chalo) ಜಾಥಾಗೆ ಕರೆಕೊಟ್ಟಿದ್ದಾರೆ. ಈ ಸಂಬಂಧ ಬಿಜೆಪಿ (BJP) ನಾಯಕ ಪ್ರತಾಪ್​ ಸಿಂಹ್​​ ಇಂದು (ಅ.10) ಪೂರ್ವಭಾವಿ ಸಭೆ ನಡೆಸಿದರು. ಇನ್ನು ಮಹಿಷ ದಸರಾ ಆಚರಣೆಗೆ ಮತ್ತು ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನೀಡುವಂತೆ ಎರಡೂ ಕಡೆಯವರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಮೈಸೂರು ನಗರ ಆಯುಕ್ತ ರಮೇಶ್ ಬಾನೋತ್ (Ramesh Banoth) ಮಾತನಾಡಿ ಈವರಗೆ ನಾವು ಇಬ್ಬರಿಗೂ ಅನುಮತಿ‌ ನೀಡಿಲ್ಲ ಎಂದು ಹೇಳಿದರು.

ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅನುಮತಿಗಾಗಿ ಎರಡೂ ಕಡೆಯವರು ನಮಗೆ ಅರ್ಜಿ ನೀಡಿದ್ದಾರೆ. ಮಹಿಷ ದಸರಾಗೆ ಪುಷ್ಪಾರ್ಚನೆಗೆ ಅವಕಾಶ ಅನುಮತಿ ಕೋರಿದ್ದಾರೆ. ಇನ್ನು 5000 ಮಂದಿ ಮೆರವಣಿಗೆ ನಡೆಸಲು ಚಾಮುಂಡಿ ಬೆಟ್ಟ ಚಲೋಗೆ ಕೂಡ ಅನುಮತಿ‌ ಕೇಳಿದ್ದಾರೆ. ದಸರಾ ಉದ್ಘಾಟನೆ ಇರುವ ಕಾರಣ ನಾವು ಅನುಮತಿ ನೀಡಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ. ಈ ಕುರಿತು ಅ.12 ರಂದು ತೀರ್ಮಾನ ತೆಗೆದುಕೊಳ್ಳುತ್ತೇವೆ. ಕಾನೂನು ಸುವ್ಯವಸ್ಥೆ ಕುರಿತು ಇಂದು ಸಂಜೆ ಸಭೆ ಕರೆದಿದ್ದೇವೆ. ಮೈಸೂರಿಗೆ ಧಕ್ಕೆ ಬಾರದ ರೀತಿ ಕ್ರಮಕೈಗೊಳ್ಳುತ್ತೇವೆ ಎಂದರು.

ಇದನ್ನೂ ಓದಿ: ಮಹಿಷ ದಸರಾಗೆ ವಿರೋಧ: ಬರಿಗಾಲಲ್ಲಿ ಬೆಟ್ಟ ಹತ್ತಿ, ದುಷ್ಟರನ್ನು ಶಿಕ್ಷಿಸು ಎಂದು ಚಾಮುಂಡೇಶ್ವರಿಗೆ ಪಾರ್ಥನೆ

ಚಾಮುಂಡಿ ಬೆಟ್ಟ ಚಲೋ: ಪ್ರತಾಪ ಸಿಂಹ್​ ಪ್ರತಿಕ್ರಿಯೆ

ಅಕ್ಟೋಬರ್​ 13 ರಂದು 144 ಸೆಕ್ಷನ್ ಜಾರಿ ಮಾಡಿ ಮಹಿಷ ದಸರಾ ಬಂದ್ ಮಾಡಿಸಿದರೆ ಅದಕ್ಕೆ ನಮ್ಮ ಸ್ವಾಗತ ಇದೆ. ನಾವಂತು ಚಾಮುಂಡಿ ಬೆಟ್ಟ ಚಲೋ ವಿಚಾರವಾಗಿ ಎಲ್ಲಾ ವಾರ್ಡ್​ಗಳಲ್ಲೂ ಸಭೆ ನಡೆಸುತ್ತಿದ್ದೇವೆ‌. ಐದು ಸಾವಿರಕ್ಕೂ ಹೆಚ್ಚು ಜನ ಜಾಥದಲ್ಲಿ ಭಾಗವಹಿಸುತ್ತಾರೆ. ಜಾಥಕ್ಕೆ ಪೊಲೀಸರ ಅನುಮತಿ ಕೇಳಿದ್ದೇವೆ. ಪೊಲೀಸರು ಇನ್ನೂ ನಮಗೂ ಅನುಮತಿ ಕೊಟ್ಟಿಲ್ಲ, ಮಹಿಷ ದಸರಾಗೂ ಅನುಮತಿ‌ ಕೊಟ್ಟಿಲ್ಲ. ಅನುಮತಿ ವಿಚಾರದಲ್ಲಿ ಮತ್ತೆ ಪೊಲೀಸರ ಜೊತೆ ಮಾತನಾಡುತ್ತೇನೆ ಎಂದು ಸಂಸದ ಪ್ರತಾಪ ಸಿಂಹ್​ ಹೇಳಿದರು

ಪ್ರತಾಪ್ ಸಿಂಹ ಬಂಧಿಸಿ ಗಡಿಪಾರು ಮಾಡಿ

ಚಾಮರಾಜನಗರ: ಮಹಿಷ ದಸರಾ ವಿರೋಧಿಸಿದ ಪ್ರತಾಪ್ ಸಿಂಹ ಬಂಧಿಸಿ ಗಡಿಪಾರು ಮಾಡಿ. ಮೈಸೂರಿನಲ್ಲಿ ಸಂಸದರು ಆಗಸ್ಟ್ 13 ರಂದು ಗಲಭೆ ಸೃಷ್ಟಿಸುವ ಸಾಧ್ಯತೆ ಇದೆ. ಸಂಘರ್ಷಕ್ಕೂ ರೆಡಿ ಅನ್ನೋ ಮೂಲಕ ಗೂಂಡಾ ವರ್ತನೆ ತೋರುತ್ತಿದ್ದಾರೆ. ಜನರನ್ನು ಪ್ರಚೋದಿಸುವ ಕೆಲಸಕ್ಕೆ ಪ್ರತಾಪ್ ಸಿಂಹ ಮುಂದಾಗಿದ್ದಾರೆಂದು ದಲಿತಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:22 pm, Tue, 10 October 23

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ