ಮೈಸೂರು ದಸರಾ: ಗಜಪಡೆಯ ತೂಕ ಮಾಪನ ಕಾರ್ಯ; ಮೊದಲ ಸ್ಥಾನ ಪಡೆದ ಶ್ರೀಕಂಠ

Mysuru Dasara: ಮೈಸೂರು ದಸರಾ ಮಹೋತ್ಸವಕ್ಕಾಗಿ ಆಗಮಿಸಿರುವ ಮೊದಲ ತಂಡದ ಗಜಪಡೆಯ ತೂಕ ಮಾಪನ ನಡೆದಿದೆ. ಒಟ್ಟು 9 ಆನೆಗಳಲ್ಲಿ 5,790 ಕೆಜಿ ತೂಗುವ ಮೂಲಕ ಶ್ರೀಕಂಠ ಆನೆ ಪ್ರಥಮ ಸ್ಥಾನ ಪಡೆದರೆ, ಏಕಲವ್ಯ ಹಾಗೂ ಧನಂಜಯ ನಂತರದ ಸ್ಥಾನ ಪಡೆದಿವೆ. ಆಗಸ್ಟ್​​ 26ರಂದು ವೀರನಹೊಸಳ್ಳಿಯಿಂದ ಈ ಗಜಪಡೆಗೆ ಫಲತಾಂಬೂಲ ನೀಡುವ ಮೂಲಕ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಬಳಿಕ ಆಗಸ್ಟ್​​ 28ರಂದು ದಸರಾ ಜಗಪಡೆಯು ಜಯಮಾರ್ತಾಂಡ ದ್ವಾರ ಮೂಲಕ ಮೈಸೂರು ಅರಮನೆ ಪ್ರವೇಶಿಸಿತ್ತು.

ಮೈಸೂರು ದಸರಾ: ಗಜಪಡೆಯ ತೂಕ ಮಾಪನ ಕಾರ್ಯ; ಮೊದಲ ಸ್ಥಾನ ಪಡೆದ ಶ್ರೀಕಂಠ
ಸಾಂದರ್ಭಿಕ ಚಿತ್ರ
Image Credit source: PTI
Edited By:

Updated on: Aug 30, 2026 | 2:09 PM

ಮುಖ್ಯಾಂಶಗಳು

  • ವಿಶ್ವ ವಿಖ್ಯಾತ ಮೈಸೂರು ದಸರಾಗೆ ಭರದ ಸಿದ್ಧತೆ
  • ಮೊದಲ ಬ್ಯಾಚ್​​ನ ಗಜಪಡೆಯ ತೂಕ ಪರೀಕ್ಷೆ
  • 5790 ಕೆಜಿ ಇರುವ ಶ್ರೀಕಂಠಗೆ ಮೊದಲ ಸ್ಥಾನ

ಮೈಸೂರು, ಆಗಸ್ಟ್​​ 30: ವಿಶ್ವ ವಿಖ್ಯಾತ ಮೈಸೂರು ದಸರಾಗೆ (Mysuru Dasara) ಭರದ ಸಿದ್ಧತೆಗಳು ಆರಂಭಗೊಂಡಿದ್ದು, ಹುಣಸೂರಿನ ವೀರನಹೊಸಳ್ಳಿಯಿಂದ ಹೊರಟು ಮೈಸೂರು ತಲುಪಿರುವ ಮೊದಲ ತಂಡದ ಗಜಪಡೆಯ ತೂಕ ಪರೀಕ್ಷೆ ಕಾರ್ಯ ನಡೆಸಲಾಗಿದೆ. ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಧನಂಜಯ, ಮಹೇಂದ್ರ, ಏಕಲವ್ಯ, ಪ್ರಶಾಂತ, ಗೋಪಿ, ಶ್ರೀರಾಮ, ಶ್ರೀಕಂಠ, ಲಕ್ಷ್ಮಿ ಹಾಗೂ ಕಾವೇರಿ ಸೇರಿ 9 ಆನೆಗಳ ತೂಕ ಪರೀಕ್ಷೆ ನಡೆದಿದ್ದು, ಬರೋಬ್ಬರಿ 5790 ಕೆಜಿ ತೂಗುವ ಮೂಲಕ ಶ್ರೀಕಂಠ ಆನೆ ತೂಕದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಆನೆಗಳ ತೂಕ ಎಷ್ಟು?

Mysore Dasara Elephants Weight Check: ದಸರಾ ಗಜಪಡೆಯ ಆನೆಗಳ ತೂಕ ಎಷ್ಟು ಇದೆ ಗೊತ್ತಾ? |#TV9D

  • ಮಹೇಂದ್ರ-5490 ಕೆಜಿ
  • ಲಕ್ಷ್ಮೀ – 3990 ಕೆಜಿ
  • ಪ್ರಶಾಂತ- 5205 ಕೆಜಿ
  • ಧನಂಜಯ- 5530 ಕೆಜಿ
  • ಶ್ರೀರಾಮ- 4820 ಕೆಜಿ
  • ಕಾವೇರಿ – 3075 ಕೆಜಿ
  • ಶ್ರೀಕಂಠ- 5790 ಕೆಜಿ
  • ಏಕಲವ್ಯ-5600 ಕೆಜಿ
  • ಗೋಪಿ- 5170 ಕೆಜಿ

ಇದನ್ನೂ ಓದಿ: ಮೈಸೂರು ಅರಮನೆ ಪ್ರವೇಶಿಸುತ್ತಿದ್ದಂತೆ ಜನರನ್ನ ಕಂಡು ಗಾಬರಿಗೊಂಡ ಶ್ರೀರಾಮ ಆನೆ

ಆಗಸ್ಟ್​​ 26ರಂದು ವೀರನಹೊಸಳ್ಳಿಯಿಂದ ಈ ಗಜಪಡೆಗೆ ಫಲತಾಂಬೂಲ ನೀಡುವ ಮೂಲಕ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಚಾಲನೆ ನೀಡಿದ್ದರು. ಬಳಿಕ ಆಗಸ್ಟ್​​ 28ರಂದು ದಸರಾ ಜಗಪಡೆಯು ಜಯಮಾರ್ತಾಂಡ ದ್ವಾರ ಮೂಲಕ ಮೈಸೂರು ಅರಮನೆ ಪ್ರವೇಶಿಸಿತ್ತು. ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ವಿವಿಧ ಕಲಾ ತಂಡಗಳ ಮೂಲಕ ಗಜಪಡೆಗೆ ಭರ್ಜರಿ ಸ್ವಾಗತ ಕೋರಲಾಗಿತ್ತು.

‘ಈ ಬಾರಿಯ ದಸರಾ ಉತ್ಸವ ವಿಭಿನ್ನ’

ಈ ಬಾರಿಯ ದಸರಾ ಉತ್ಸವ ವಿಭಿನ್ನವಾಗಿರುತ್ತೆ. ತುಂಬಾ ವಿಶೇಷ, ವಿಶಿಷ್ಟವಾಗಿ ದಸರಾ ಮಹೋತ್ಸವ ಆಚರಿಸ್ತೇವೆ ಎಂದು ಸಿಎಂ ಡಿಕೆ ಶಿವಕುಮಾರ್​​ ತಿಳಿಸಿದ್ದಾರೆ. ಹೊಸ ಸಂಪ್ರದಾಯದ ಅನಾವರಣ ಈ ಬಾರಿಯ ದಸರಾದಲ್ಲಿ ನಡೆಯಲಿದೆ. ಈ ಬಾರಿ ಸ್ಯಾಂಡಲ್​ವುಡ್ ಕೂಡ ದಸರಾದಲ್ಲಿ ಭಾಗಿಯಾಗಲಿದ್ದು, ಫಿಲ್ಮ್ ಚೇಂಬರ್ ಅಧ್ಯಕ್ಷೆ ಜಯಮಾಲ ಅವರ ಜೊತೆಗೆ ಮಾತನಾಡಿದ್ದೇನೆ. ಪೊಲೀಸ್ ಬ್ಯಾಂಡ್ ಜೊತೆ ಆರ್ಮಿ ಬ್ಯಾಂಡ್​ ಭಾಗಿಯಾಗಲು ಮನವಿ ಮಾಡಲಾಗಿದ್ದು, ಎಲ್ಲರ ಜೊತೆ ಚರ್ಚಿಸಿ ದಸರಾ ಉದ್ಘಾಟಕರ ಹೆಸರು ಘೋಷಣೆ ಮಾಡೋದಾಗಿ ಅವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 8:35 am, Sun, 30 August 26

ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us