AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಅರಮನೆ ಪ್ರವೇಶಿಸುತ್ತಿದ್ದಂತೆ ಜನರನ್ನ ಕಂಡು ಗಾಬರಿಗೊಂಡ ಶ್ರೀರಾಮ ಆನೆ

ಮೈಸೂರು: ಅರಮನೆ ಪ್ರವೇಶಿಸುತ್ತಿದ್ದಂತೆ ಜನರನ್ನ ಕಂಡು ಗಾಬರಿಗೊಂಡ ಶ್ರೀರಾಮ ಆನೆ

ರಾಮ್​, ಮೈಸೂರು
| Edited By: |

Updated on:Aug 28, 2026 | 6:51 PM

Share

ಮೈಸೂರು ದಸರಾ 2026ಕ್ಕಾಗಿ ಅರಮನೆಗೆ ಆಗಮಿಸಿದ ಗಜಪಡೆಯ ಶ್ರೀರಾಮ ಆನೆಯು ಜನದಟ್ಟಣೆ ಮತ್ತು ನಾದಸ್ವರದ ಸದ್ದಿಗೆ ಗಾಬರಿಗೊಂಡಿತು. ಅರಮನೆ ಪ್ರವೇಶಿಸುವಾಗ ಬ್ಯಾರಿಕೇಡ್ ಬೀಳಿಸಿ ಆನೆ ಗಾಬರಿಯಾದ ಸಂದರ್ಭದಲ್ಲಿ ಮಾವುತರು ಅದನ್ನು ಯಶಸ್ವಿಯಾಗಿ ನಿಯಂತ್ರಿಸಿದರು. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮೈಸೂರು, ಆಗಸ್ಟ್​ 28: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕಾಗಿ ಅರಮನೆಗೆ ಆಗಮಿಸಿದ ಗಜಪಡೆಗೆ ವಿವಿಧ ಕಲಾತಂಡಗಳು ಹಾಗೂ ಗಣ್ಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಸಚಿವರಾದ ರಾಮಲಿಂಗಾರೆಡ್ಡಿ, ಯತೀಂದ್ರ ಸಿದ್ದರಾಮಯ್ಯ ಹಾಗೂ ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಆನೆಗಳನ್ನು ಬರಮಾಡಿಕೊಳ್ಳುತ್ತಿದ್ದ ವೇಳೆ ಅನಾಹುತವೊಂದು ನಡೆದಿದೆ. ಅರಮನೆ ಪ್ರವೇಶಿಸುವಾಗ ನಾದಸ್ವರದ ಭಾರಿ ಶಬ್ದ ಹಾಗೂ ನೆರೆದಿದ್ದ ಜನರ ಗದ್ದಲಕ್ಕೆ ಶ್ರೀರಾಮ ಆನೆ ಒಮ್ಮೆಲೆ ಹೆದರಿ ಬ್ಯಾರಿಕೇಡ್ ಬೀಳಿಸಿ ಗಾಬರಿಗೊಂಡಿದೆ. ಕೂಡಲೇ ಮಾವುತರು ಹಾಗೂ ಕಾವಾಡಿಗಳು ಸಮಯಪ್ರಜ್ಞೆ ಮೆರೆದು ಶ್ರೀರಾಮನನ್ನು ಕ್ಷಣಾರ್ಧದಲ್ಲಿ ನಿಯಂತ್ರಣಕ್ಕೆ ತಂದರು. ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Aug 28, 2026 06:50 PM

Follow Us