AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಜರನ್ನೇ ರಾಜಕೀಯಕ್ಕೆ ತಂದ ಪಕ್ಷದ ಮುಖಂಡರಿಗೆ ನಮೋ! ಯದುವೀರ್​​ ರಾಜಕೀಯ ಪ್ರವೇಶ ಬಗ್ಗೆ ಪ್ರತಾಪ್​ ಸಿಂಹ ಟಾಂಗ್

ಲೋಕಸಭೆ ಚುನಾವಣೆಯಲ್ಲಿ ರಾಜವಂಶಸ್ಥರಾದ ಯದುವೀರ್ ಒಡೆಯರ್​ಗೆ ಬಿಜೆಪಿ ಟಿಕೆಟ್ ಕೊಟ್ಟರೆ ಸಾಮಾನ್ಯ ಕಾರ್ಯಕರ್ತನಾಗಿ ಅವರ ಪರ ಕೆಲಸ ಮಾಡುವೆ ಎಂದು ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು. ಆದರೆ, ಅದೇ ರೀತಿ ಅವರು ಯದುವೀರ್​ ಹಾಗೂ ಪಕಷದ ನಾಯಕತ್ವಕ್ಕೆ ಪರೋಕ್ಷವಾಗಿ ಟಾಂಗ್ ನೀಡುವುದನ್ನು ಮರೆಯಲಿಲ್ಲ! ಪಕ್ಷದ ನಾಯಕರಿಗೆ ಪರೋಕ್ಷವಾಗಿ ಪ್ರತಾಪ್ ಸಿಂಹ ಚುಚ್ಚಿ ಮಾತನಾಡಿದ್ದು ಹೇಗೆ? ಇಲ್ಲಿದೆ ನೋಡಿ.

ಮಹಾರಾಜರನ್ನೇ ರಾಜಕೀಯಕ್ಕೆ ತಂದ ಪಕ್ಷದ ಮುಖಂಡರಿಗೆ ನಮೋ! ಯದುವೀರ್​​ ರಾಜಕೀಯ ಪ್ರವೇಶ ಬಗ್ಗೆ ಪ್ರತಾಪ್​ ಸಿಂಹ ಟಾಂಗ್
ಪ್ರತಾಪ್​ ಸಿಂಹ
TV9 Web
| Updated By: Ganapathi Sharma|

Updated on:Mar 12, 2024 | 2:12 PM

Share

ಮೈಸೂರು, ಮಾರ್ಚ್​ 12: ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಈ ಬಾರಿ ಪ್ರತಾಪ್ ಸಿಂಹ (Pratap Simha) ಬದಲು ರಾಜವಂಶಸ್ಥರಾದ ಯದುವೀರ್ ಒಡೆಯರ್​ಗೆ ಬಿಜೆಪಿ (BJP) ಟಿಕೆಟ್ ನೀಡಲಿದೆ ಎಂಬ ಬಗ್ಗೆ ವರದಿಗಳಾಗಿವೆ. ಈ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ, ಯದುವೀರ್​ಗೆ ಟಿಕೆಟ್ ಕೊಟ್ಟರೆ ಸ್ವಾಗತ. ಕಾರ್ಯಕರ್ತನಾಗಿ ಅವರ ಪರ ಕೆಲಸ ಮಾಡುತ್ತೇನೆ. ಅರಮನೆಯ ದರ್ಬಾರಿನಲ್ಲಿರುವ ಬದಲು ಸಾಮಾನ್ಯ ಪ್ರಜೆಗಳಂತೆ ಬದುಕಲು ಬಂದರೆ ಸ್ವಾಗತಿಸದಿರಲು ಆಗುತ್ತದೆಯೇ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ರಾಜ-ಪ್ರಜೆ ನಡುವಣ ವ್ಯತ್ಯಾಸ ಬದಿಗಿಟ್ಟು ಬಂದರೆ ಅವರಿಗೆ ಸ್ವಾಗತ. ರಾಜರೇ ಪ್ರಜೆಗಳ ಜೊತೆ ಇರಲು ಬಂದರೆ ನನ್ನ ಸ್ವಾಗತ. ಅರಮನೆ ಆಸ್ತಿ ವಿಚಾರದಲ್ಲಿ ಸರ್ಕಾರದ ನಡುವೆ ವ್ಯಾಜ್ಯಗಳಿವೆ. ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿವೆ. ಯದುವೀರ್ ಜನಪ್ರತಿನಿಧಿ ಆಗಿ ಆ ಆಸ್ತಿಗಳನ್ನು ಜನರಿಗೆ ಬಿಟ್ಟು ಕೊಡಿಸುತ್ತಾರೆ. ಅರಮನೆಯಲ್ಲಿ ಅರಾಮವಾಗಿದ್ದ ವ್ಯಕ್ತಿ ಹೋರಾಟಕ್ಕೆ ಬರುತ್ತಿದ್ದಾರೆ. ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಹೋರಾಡಲು ಬೀದಿಗೆ ಬಂದ್ರೆ ಸಂತೋಷ. ಅರಮನೆ ವೈಭೋಗ ಬೇಡ, ಹೋರಾಟಕ್ಕೆ ಬರುತ್ತೇನೆ ಅಂದರೆ ಸ್ವಾಗತ. ಠಾಣೆಗೆ ಬಂದು ರಾಜರು ಸಮಸ್ಯೆ ಬಗೆಹರಿಸಿದರೆ ಸಂತೋಷ ಅಲ್ವಾ ಎಂದು ಅವರು ಹೇಳಿದರು.

ಸುಖದ ಸುಪತ್ತಿಗೆಯಲ್ಲಿದ್ದವರನ್ನು ರಾಜಕೀಯಕ್ಕೆ ತಂದವರಿಗೆ ಧನ್ಯವಾದ. ಮಹಾರಾಜರನ್ನೇ ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೆ ಧನ್ಯವಾದ ಎಂದು ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.

ನನ್ನಷ್ಟು ಹಿಂದುತ್ವಕ್ಕೆ ಬದ್ಧತೆಯುಳ್ಳ ಸಂಸದರು ಇನ್ಯಾರಿದ್ದಾರೆ: ಸಿಂಹ ಪ್ರಶ್ನೆ

ಚುನಾವಣಾ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಭೇಟಿ ಮಾಡುವಂತೆ ಕರೆದಿದ್ದಾರೆ. ಇಂದು ಮಧ್ಯಾಹ್ನ ಬೆಂಗಳೂರಿಗೆ ತೆರಳುತ್ತೇನೆ. ನನಗೆ ಈ ಕ್ಷಣಕ್ಕೂ ವಿಶ್ವಾಸವಿದೆ. ಸಂಘಟನೆ, ಸಿದ್ಧಾಂತಕ್ಕೆ ಗಟ್ಟಿಯಾಗಿ ನಿಂತಿರುವ ನನಗೆ ಟಿಕೆಟ್ ಸಿಗುತ್ತದೆ. 25 ಸಂಸದರಲ್ಲಿ ಹಿಂದುತ್ವದ ಬಗ್ಗೆ ನನ್ನಷ್ಟು ಬದ್ಧತೆ ಇರುವವರು ಇನ್ಯಾರಿದ್ದಾರೆ? ಹಿಂದುತ್ವದ ವಿಚಾರದಲ್ಲಿ ನನ್ನನ್ನು ಯಾರ ಜತೆಗೂ ಹೋಲಿಕೆ ಮಾಡಲು ಆಗಲ್ಲ.

ಇದನ್ನೂ ಓದಿ: ಟಿಕೆಟ್ ಕೈತಪ್ಪುವ ಆತಂಕದಲ್ಲಿ ಸಂಸದ ಪ್ರತಾಪ್ ಸಿಂಹ: ನಡುರಾತ್ರಿ ಫೇಸ್​​ಬುಕ್​ ಲೈವ್​ನಲ್ಲಿ ಕಣ್ಣೀರು!

ಪ್ರಧಾನಿ ಮೋದಿ ಬಗ್ಗೆ ಸಿದ್ದರಾಮಯ್ಯ ಬಾಯಿಗೆ ಬಂದ ರೀತಿ ಟೀಕಿಸಿದಾಗ ಅವರ ಮಾತನ್ನು ದೊಡ್ಡ ಮಟ್ಟದಲ್ಲಿ ಖಂಡಿಸುವ ವ್ಯಕ್ತಿ ಈ ಪ್ರತಾಪ್ ಸಿಂಹ. ಇದು ನನ್ನ ದೌರ್ಬಲ್ಯವಾ? ಮೈಸೂರು, ಕೊಡಗು ಅಭಿವೃದ್ಧಿಗೆ ಅತಿ ಹೆಚ್ಚಿನ ಕೆಲಸ ಮಾಡಿದ್ದು ನನ್ನ ದೌರ್ಬಲ್ಯವಾ? ನನಗೆ ಪಕ್ಷ ನಿಷ್ಠೆ ಇದೆ. ಬ್ಯಾನರ್, ಬಂಟಿಂಗ್ ಕಟ್ಟಲು ನಾನು ಸಿದ್ಧ. ನನಗಾಗಿ ಪಕ್ಷ, ಕಾರ್ಯಕರ್ತರು ದುಡಿದಿದ್ದಾರೆ. ನಾನು ಮುಂದೆ ಅವರಂತೆಯೇ ದುಡಿಯುತ್ತೇನೆ. ಯದುವೀರ್​ಗೆ ಟಿಕೆಟ್ ಕೊಡುವುದು ನಿಜವಾದದರೆ ಅದನ್ನು ಸ್ವಾಗತಿಸುತ್ತೇನೆ. ಕಾರ್ಯಕರ್ತನಾಗಿ ಅವರ ಪರ ಕೆಲಸ ಮಾಡುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:59 pm, Tue, 12 March 24

ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?
ಸೇತುವೆ ಲೋಕಾರ್ಪಣೆಗೊಂಡು ಎರಡು ಗಂಟೆಯಲ್ಲೇ ಮುಚ್ಚಿದ್ದೇಕೆ?
ಲಿಫ್ಟ್​ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ
ಲಿಫ್ಟ್​ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ
Daily Devotional: ಹುತ್ತವಿರುವ ನಿವೇಶನ ಖರೀದಿಸಿದರೆ ಲಾಭವೋ ನಷ್ಟವೋ?
Daily Devotional: ಹುತ್ತವಿರುವ ನಿವೇಶನ ಖರೀದಿಸಿದರೆ ಲಾಭವೋ ನಷ್ಟವೋ?
Daily horoscope: ಈ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ವಾಹನ ಖರೀದಿ ಯೋಗ
Daily horoscope: ಈ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ವಾಹನ ಖರೀದಿ ಯೋಗ
ಶಿಥಿಲಾವಸ್ಥೆಗೆ ತಲುಪಿದ 1937ರಲ್ಲಿ ನಿರ್ಮಾಣವಾದ ಸರ್ಕಾರಿ ಶಾಲೆ
ಶಿಥಿಲಾವಸ್ಥೆಗೆ ತಲುಪಿದ 1937ರಲ್ಲಿ ನಿರ್ಮಾಣವಾದ ಸರ್ಕಾರಿ ಶಾಲೆ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯ ಸುರಂಗ ನಿರ್ಮಾಣ ಪೂರ್ಣ
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ದೇವೇಗೌಡರನ್ನು ಪಕ್ಷ ಯಾವತ್ತೂ ನಿರ್ಲಕ್ಷಿಸಿಲ್ಲ: ನಿಖಿಲ್ ಕುಮಾರಸ್ವಾಮಿ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್
ದಲೈಲಾಮಾ ಹುಟ್ಟುಹಬ್ಬಕ್ಕೆ ವಿಶೇಷ ಹಾಡು ನಿರ್ಮಿಸಿದ ವಿಐಪಿ ಮೋಷನ್ ಪಿಕ್ಚರ್ಸ್