Mysuru Lalitha Mahal Palace Hotel: ಮೈಸೂರಿನ 2ನೇ ದೊಡ್ಡ ಅರಮನೆ ಲಿಲಿತ್ ಮಹಲ್ ಖಾಸಗೀಕರಣಕ್ಕೆ ಚಿಂತನೆ

ಮೈಸೂರು ಸಂಸ್ಥಾನದ ರಾಜಾಳ್ವಿಕೆ ಕಾಲದಲ್ಲಿ ನಿರ್ಮಿಸಲಾಗಿದ್ದ ಲಲಿತ ಮಹಲ್‌ ಅರಮನೆ 1975ರಲ್ಲೇ ಪಾರಂಪರಿಕ ಹೋಟೆಲ್‌ ಆಗಿ ಪರಿವರ್ತನೆಗೊಂಡಿತ್ತು. 2017-18ರವರೆಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಇದರ ನಿರ್ವಹಣೆ ಮಾಡಿಕೊಂಡು ಬಂದಿತ್ತು

Mysuru Lalitha Mahal Palace Hotel: ಮೈಸೂರಿನ 2ನೇ ದೊಡ್ಡ ಅರಮನೆ ಲಿಲಿತ್ ಮಹಲ್ ಖಾಸಗೀಕರಣಕ್ಕೆ ಚಿಂತನೆ
ಮೈಸೂರಿನ ಲಲಿತ ಮಹಲ್‌ ಹೋಟೆಲ್
Follow us
TV9 Web
| Updated By: ಆಯೇಷಾ ಬಾನು

Updated on: Jun 14, 2022 | 6:38 PM

ಮೈಸೂರು: ಮೈಸೂರಿನ ಲಲಿತ ಮಹಲ್‌ ಹೋಟೆಲ್(Mysuru Lalitha Mahal Palace Hotel) ಖಾಸಗೀಕರಣಕ್ಕೆ ಚಿಂತನೆ ನಡೆದಿದೆ. ಶತಮಾನೋತ್ಸವ ಆಚರಿಸಿಕೊಂಡಿರುವ ಮೈಸೂರಿನ 2ನೇ ದೊಡ್ಡ ಅರಮನೆ ಲಿಲಿತ್ ಮಹಲ್ ಹೋಟೆಲನ್ನು ತಾಜ್‌ ಗ್ರೂಪ್‌ ಆಫ್‌ ಕಂಪನಿಗೆ(Taj Group of Companies) ಗುತ್ತಿಗೆ ನೀಡಲು ಚಿಂತಿಸಲಾಗಿದೆ.

ಮೈಸೂರು ಸಂಸ್ಥಾನದ ರಾಜಾಳ್ವಿಕೆ ಕಾಲದಲ್ಲಿ ನಿರ್ಮಿಸಲಾಗಿದ್ದ ಲಲಿತ ಮಹಲ್‌ ಅರಮನೆ 1975ರಲ್ಲೇ ಪಾರಂಪರಿಕ ಹೋಟೆಲ್‌ ಆಗಿ ಪರಿವರ್ತನೆಗೊಂಡಿತ್ತು. 2017-18ರವರೆಗೂ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಇದರ ನಿರ್ವಹಣೆ ಮಾಡಿಕೊಂಡು ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಇಎ) ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿತ್ತು. ಆ ಸಂದರ್ಭದಲ್ಲೇ ಲಲಿತ ಮಹಲ್‌ ಖಾಸಗಿ ಸಂಸ್ಥೆಗೆ ನೀಡುವ ಪ್ರಸ್ತಾವನೆ ಇಡಲಾಗಿತ್ತು. ಬರೋಬ್ಬರಿ 50 ವರ್ಷಗಳ ಕಾಲ ಕಟ್ಟಡ ಮಾತ್ರವಲ್ಲದೆ ಅದಕ್ಕೆ ಹೊಂದಿಕೊಂಡ 52.15 ಎಕರೆ ಗುತ್ತಿಗೆ ನೀಡಲು ಪ್ರಸ್ತಾಪಿಸಲಾಗಿತ್ತು. ಆದ್ರೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಪ್ರವಾಸೋದ್ಯಮ ಅಧೀನದಲ್ಲಿರುವ ಜಂಗಲ್‌ ಲಾಡ್ಜ್‌ & ರೆಸಾರ್ಟ್‌ಗೆ ವರ್ಗಾವಣೆ ಮಾಡಲಾಯಿತು. ನಷ್ಟದಲ್ಲಿದ್ದ ಹೋಟೆಲ್‌ ಈಗ ಮಾಸಿಕ 1.50 ಕೋಟಿಯಿಂದ 2 ಕೋಟಿ ಆದಾಯ ತಂದುಕೊಡುತ್ತಿದೆ. ಸದ್ಯ ಮೈಸೂರಿನ ಲಲಿತ ಮಹಲ್‌ ಜೆಎಲ್‌ಆರ್‌ ಸುಪರ್ದಿಯಲ್ಲಿದೆ. ಇದನ್ನೂ ಓದಿ: ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸದಿದ್ದಕ್ಕೆ ಪಿಡಿಓ ಮತ್ತು ಗ್ರಾಮ ಪಂಚಾಯತಿ ‌ಸದಸ್ಯರನ್ನು ದೇವಸ್ಥಾನದಲ್ಲಿ ಕೂಡಿಹಾಕಿದ ಗ್ರಾಮಸ್ಥರು

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ