ಮೈಸೂರಿನಲ್ಲಿ ನಡೆಯುತ್ತಿದೆಯಾ ಲವ್ ಜಿಹಾದ್? ಮ್ಯಾರೇಜ್ ರಿಜಿಸ್ಟರ್​​ಗಾಗಿ ತಪ್ಪು ಮಾಹಿತಿ ಕೊಟ್ಟ ಅನ್ಯಕೋಮಿನ ಯುವಕ, ಯುವತಿ​​

ಮೈಸೂರಿನಲ್ಲೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಮುಸ್ಲಿಂ ಯುವಕ ಹಾಗೂ ಹಿಂದು ಯುವತಿ ತಪ್ಪು ವಿಳಾಸ ಕೊಟ್ಟು ಮದುವೆಯಾಗಲು ಮುಂದಾಗಿರುವಂತಹ ಘಟನೆ ನಡೆದಿದೆ. ಹಾಗಾಗಿ ಸಾಂಸ್ಕೃತಿಕ ನಗರಿಯಲ್ಲಿ ಲವ್ ಜಿಹಾದ್ ನಡೆಯುತ್ತಿದ್ದೆಯಾ ಎಂಬ ಅನುಮಾನಗಳು ವ್ಯಕ್ತವಾಗುತ್ತಿದೆ. ಪೊಲೀಸರು ತನಿಖೆ ನಡೆಸಬೇಕೆಂದು ಒತ್ತಾಯ ಕೇಳಿಬಂದಿದೆ.

ಮೈಸೂರಿನಲ್ಲಿ ನಡೆಯುತ್ತಿದೆಯಾ ಲವ್ ಜಿಹಾದ್? ಮ್ಯಾರೇಜ್ ರಿಜಿಸ್ಟರ್​​ಗಾಗಿ ತಪ್ಪು ಮಾಹಿತಿ ಕೊಟ್ಟ ಅನ್ಯಕೋಮಿನ ಯುವಕ, ಯುವತಿ​​
ಮೈಸೂರಿನಲ್ಲಿ ನಡೆಯುತ್ತಿದೆಯಾ ಲವ್ ಜಿಹಾದ್? ಮ್ಯಾರೇಜ್ ರಿಜಿಸ್ಟರ್​​ಗಾಗಿ ತಪ್ಪು ಮಾಹಿತಿ ಕೊಟ್ಟ ಅನ್ಯಕೋಮಿನ ಯುವಕ, ಯುವತಿ​​
Edited By:

Updated on: Mar 08, 2025 | 5:03 PM

ಮೈಸೂರು, ಮಾರ್ಚ್​ 08: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಲವ್ ಜಿಹಾದ್ (Love Jihad) ನಡೆಯುತ್ತಿದೆಯಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಅಂತಹದೊಂದು ಅನುಮಾನವನ್ನು ಇತ್ತೀಚಿಗೆ ಮ್ಯಾರೇಜ್ ರಿಜಿಸ್ಟರ್ (Marriage Registration) ಕಚೇರಿಯಲ್ಲಿ ಅಂಟಿಸಿದ್ದ ನೋಟಿಸ್ ಕಾರಣವಾಗಿದೆ. ವಯಸ್ಸಿಗೆ ಬಂದ ಮುಸ್ಲಿಂ ಯುವಕ, ಹಿಂದೂ ಯುವತಿ ಮಾಡಿರುವ ಎಡವಟ್ಟಿನಿಂದ ಪ್ರಕರಣ ಸಾಕಷ್ಟು ಚರ್ಚೆಗೆ, ಘರ್ಷಣೆಕ್ಕೆ ಕಾರಣವಾಗಿದೆ.

ಹೌದು.. ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತಾರೆ. ಆದರೆ ಇಲ್ಲಿ ಮುಸ್ಲಿಂ ಯುವಕ, ಹಿಂದೂ ಯುವತಿ ಮದುವೆಯಾಗಲು ಪ್ರಮಾಣ ಪತ್ರಗಾಗಿ ಸುಳ್ಳು ಮಾಹಿತಿ ನೀಡಿದ್ದಾರೆ. ಯಾರದೋ ಮನೆಯ ವಿಳಾಸವನ್ನು ತನ್ನ ಮನೆಯ ವಿಳಾಸ ಎಂದು ಹೇಳಿ ಹಿಂದೂ ಯುವತಿಯನ್ನ ಮದುವೆಯಾಗಲು ಮುಸ್ಲಿಂ ಯುವಕ ಮುಂದಾಗಿದ್ದಾನೆ. ಬೆಂಗಳೂರಿನ ಯುವಕ ಸಲ್ಮಾನ್ ಹಾಗೂ ಹಾಸನ ಮೂಲದ ಯುವತಿ ಪೂರ್ಣಿಮಾ ಇಬ್ಬರ ವಿಳಾಸವು ಬೇರೆಯಾಗಿದ್ದು, ವಿಷಯ ತಿಳಿದ ಮನೆ ಮಾಲೀಕ ಈಗ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ಮನೆ ಕೆಲಸ ಮಾಡುತ್ತಿದ್ದಾಕೆ ಜೊತೆ ಸರ್ಕಾರಿ ವೈದ್ಯ ಅಸಭ್ಯ ವರ್ತನೆ: ಅಮಾನತು ಮಾಡುವಂತೆ ಧರಣಿ

ಇದನ್ನೂ ಓದಿ
ದುಬೈಯಿಂದ ಚಿನ್ನ ಕಳ್ಳಸಾಗಣೆ: ರನ್ಯಾ ಬಂಧನ ಮರುದಿನವೇ ಅಂಧ ವ್ಯಕ್ತಿ ಅರೆಸ್ಟ್
33 ಸೆಕೆಂಡ್​ಲ್ಲಿ 33 ಲಕ್ಷ ರೂ ಎಗರಿಸಿದ ಖತರ್ನಾಕ್ ಕಳ್ಳರು ಬೆಚ್ಚಿಬಿದ್ದ ಜನ
ಮನೆ ಕೆಲಸ ಮಾಡುತ್ತಿದ್ದಾಕೆ ಜೊತೆ ಸರ್ಕಾರಿ ವೈದ್ಯ ಅಸಭ್ಯ ವರ್ತನೆ
ತಲೆಕೂದಲು ಜೋಪಾನ: ಬೆಂಗಳೂರಲ್ಲಿ ಅದನ್ನೂ ಬಿಡದೆ ಕದ್ದೊಯ್ದ ಕಳ್ಳರು

ಮನೆ ಮಾಲೀಕ ರವೀಂದ್ರ ಅವರು ಸಿಪಿಐ(ಎಂ) ಕಚೇರಿಗೆ ಮನೆಯ ಕಟ್ಟಡ ಬಾಡಿಗೆ ನೀಡಿದ್ದಾರೆ. ಇಲ್ಲಿ ಕಚೇರಿ ಕೆಲಸಗಳು ನಡೆಯುತ್ತವೆ. ಮೈಸೂರಿನ ಚಾಮರಾಜ ಮೊಹಲ್ಲಾದ ಮಡಿವಾಳ ಬೀದಿಯಲ್ಲಿರುವ ಮನೆ ನಂ130 ರ ಈ ಮನೆಯನ್ನೇ ಸಲ್ಮಾನ್ ತನ್ನ ಮನೆ ಎಂದು ಮ್ಯಾರೇಜ್ ರಿಜಿಸ್ಟರ್ ಮಾಡಿಸಲು ನೀಡಿದ್ದಾನೆ. ಇದಕ್ಕೆ ಮನೆ ಮಾಲೀಕ ರವೀಂದ್ರ ತಕರಾರು ಸಲ್ಲಿಸಿದ್ದಾರೆ.

ಇಡೀ ಬೀದಿಯಲ್ಲಿ ಒಂದು ಮುಸ್ಲಿಂ ಕುಟುಂಬಗಳು ವಾಸ ಇಲ್ಲ. ಆದರೆ ರವೀಂದ್ರ ಅವರ ಮನೆಯನ್ನೇ ತಾನು ವಾಸ ಇದ್ದೇನೆ ಎಂದು ಸಬ್ ರಿಜಿಸ್ಟ್ರಾರ್​​ಗೆ ಸಲ್ಲಿಕೆ ಮಾಡಿರುವ ಎಂ.ಸಲ್ಮಾನ್ ವಿರುದ್ಧ ಲವ್ ಜಿಹಾದ್‌ನ ಅನುಮಾನ ವ್ಯಕ್ತವಾಗಿದೆ.

ವಯಸ್ಸಿಗೆ ಬಂದ ಯುವಕ, ಯುವತಿ ಮದುವೆಯಾಗಲು ನಮ್ಮ ಅಭ್ಯಂತರವಿಲ್ಲ. ಆದರೆ ವಿಳಾಸಗಳನೇ ತಪ್ಪಾಗಿ ಕೊಟ್ಟು ಮದುವೆಯಾಗುತ್ತಿರುವುದಕ್ಕೆ ಅನುಮಾನಗಳು ಹುಟ್ಟಿಕೊಂಡಿವೆ. ಇದರ ಹಿಂದೆ ಎಸ್​​​ಡಿಪಿಐ ಪಿಎಫ್​​ಐ ಸಂಘಟನೆಗಳ ಕೈವಾಡದ ಶಂಕೆ ವ್ಯಕ್ತವಾಗಿದೆ. ಎಸ್​​ಎಫ್ಐ ಸಂಘಟನೆಗೆ ಹಿಂದೂ ಮಕ್ಕಳನ್ನ ಸೇರಿಸುವ ಮುನ್ನ ಪೋಷಕರು ಎಚ್ಚರವಹಿಸಬೇಕು. ಒಮ್ಮೆ ಇಲ್ಲಿಗೆ ಸೇರಿದವರು ಈ ರೀತಿಯಾಗಿ ದಾರಿ ತಪ್ಪುತ್ತಿರುವುದು ಗೊತ್ತಾಗುತ್ತಿದೆ ಎಂದು ಹಿಂದೂ ಮುಖಂಡ ಪ್ರೇಮ್‌ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ಮದುವೆಗೆ ಮೈಸೂರಿನ ಪ್ರಗತಿಪರರ ಎನ್ನುವವರು ಸಹಿ ಹಾಕಿರೋದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ತಲೆಕೂದಲು ಜೋಪಾನ: ಬೆಂಗಳೂರಲ್ಲಿ ಅದನ್ನೂ ಬಿಡದೆ ಕದ್ದೊಯ್ದ ಕಳ್ಳರು

ಇಲ್ಲಿ ಯುವಕ ಯುವತಿ ಮದುವೆಗೆ ಸುಳ್ಳು ಸುಳ್ಳು ದಾಖಲಾತಿಯನ್ನ ಕೊಟ್ಟು ಅಫಿಡವೀಟ್ ಹಾಕಿರೋದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಇದು ಶಿಕ್ಷರ್ಹ ಅಪರಾದವೂ ಆಗಿದ್ದು, ತಕ್ಷಣ ಪೊಲೀಸರು ಮಧ್ಯ ಪ್ರವೇಶ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:02 pm, Sat, 8 March 25