ಜೈಲು ಸೇರಿದ ತಂದೆ, ಮಗ; ಮನನೊಂದು ತಾಯಿ ಆತ್ಮಹತ್ಯೆ, ಜೈಲಿನಲ್ಲೇ ಪತಿಗೆ ಹೃದಯಾಘಾತ

ಮೈಸೂರಿನ ವಿದ್ಯಾನಗರದಲ್ಲಿ ನಡೆದಿದ್ದ ಬಾಲರಾಜ್‌ ಕೊಲೆ ಪ್ರಕರಣದಲ್ಲಿ ತಂದೆ ಮತ್ತು ಮಗ ಜೈಲು ಸೇರಿದ್ದಾರೆ. ಇತ್ತ ಮನನೊಂದ ತಾಯಿ ಆತ್ಮಹತ್ಯೆಗೆ ಶರಣಾಗಿದ್ದು, ವಿಚಾರ ತಿಳಿದು ಹೃದಯಾಘಾತಕ್ಕೆ ಒಳಗಾದ ಪತಿ ಸಾವನ್ನಪ್ಪಿದ್ದಾರೆ.

ಜೈಲು ಸೇರಿದ ತಂದೆ, ಮಗ; ಮನನೊಂದು ತಾಯಿ ಆತ್ಮಹತ್ಯೆ, ಜೈಲಿನಲ್ಲೇ ಪತಿಗೆ ಹೃದಯಾಘಾತ
ಮೃತ ದಂಪತಿ ಸಾಮ್ರಾಟ್ ಮತ್ತು ಇಂದ್ರಾಣಿ ಹಾಗೂ ಇವರ ಮಗ ತೇಜಸ್
Edited By: Rakesh Nayak Manchi

Updated on: Aug 22, 2023 | 10:36 AM

ಮೈಸೂರು, ಆಗಸ್ಟ್ 22: ಕೊಲೆ ಪ್ರಕರಣದಲ್ಲಿ ತಂದೆ ಮತ್ತು ಮಗ ಜೈಲು ಸೇರಿದರೆ, ಇತ್ತ ಮನನೊಂದ ತಾಯಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು (Mysuru) ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ತೇಜಸ್ ತಾಯಿ ಇಂದ್ರಾಣಿ (35) ನೇಣಿಗೆ ಶರಣಾದವರು. ಈ ವಿಚಾರ ತಿಳಿದು ಜೈಲಿನಲ್ಲೇ ಇಂದ್ರಾಣಿ ಪತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೈಸೂರಿನ ವಿದ್ಯಾನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಬಾಲರಾಜ್‌ ಜೊತೆ ಸ್ನೇಹಿತ ತೇಜಸ್, ಈತನ ತಂದೆ, ಮತ್ತಿಬ್ಬರು ಸೇರಿ ಜಗಳ ಮಾಡಿಕೊಂಡು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು. ಪ್ರಕರಣ ಸಂಬಂಧ ಆರೋಪಿಗಳಾದ ತೇಜಸ್, ಈತನ ತಂದೆ ಸಾಮ್ರಾಟ್, ಕಿರಣ್ ಸಂಜಯ್ ಎಂಬವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು.

ಇದನ್ನೂ ಓದಿ: ಮೈಸೂರು: ಹೂವಿನ ಗಿಡಗಳ ಜೊತೆ ಗಾಂಜಾ ಗಿಡ ಬೆಳೆದ ಆರೋಪಿ ಅರೆಸ್ಟ್​

ತನ್ನ ಪತಿ ಮತ್ತು ಮಗ ಈ ರೀತಿ ಕೃತ್ಯ ಎಸಗಿ ಜೈಲು ಸೇರಿದರಲ್ಲಾ ಎಂದು ಆಘಾತಕ್ಕೆ ಒಳಗಾದ ಇಂದ್ರಾಣಿ, ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿನ ಸುದ್ದಿ ತಿಳಿದು ಆರೋಪಿಯೂ ಆಗಿರುವ ಇಂದ್ರಾಣಿ ಪತಿ ಸಾಮ್ರಾಟ್​ಗೆ ಜೈಲಿನಲ್ಲೇ ಹೃದಯಾಘಾತವಾಗಿದೆ. ಪ್ರಕರಣ ಸಂಬಂಧ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us