ಮೈಸೂರಿನಲ್ಲಿ ಬೆಳ್ಳಿ ಆಸೆಗೆ ಕೆಲಸ ಕೊಟ್ಟವನನ್ನೇ ಕೊಲೆಗೈದಿದ್ದ ಆರೋಪಿ ಬಂಧನ! ರಾಮನಗರದಲ್ಲಿ ಅಪಘಾತದಿಂದ ಯುವತಿಯ ಕೊಲೆ ರಹಸ್ಯ ಬಯಲು
ಮೈಸೂರಿನ ಹಳ್ಳದಕೇರಿ ಬಡಾವಣೆಯಲ್ಲಿ ಉಳಿದುಕೊಂಡಿದ್ದರು. ಜೈನಮಂದಿರದ ಕೆಲಸಕ್ಕಾಗಿ 14 ಕೆಜಿ ಬೆಳ್ಳಿ ಗಟ್ಟಿ ನೀಡಲಾಗಿತ್ತು. ಈ ಬೆಳ್ಳಿ ಮೇಲೆ ಕಣ್ಣಿಟ್ಟಿದ್ದ ಆರೋಪಿ ಗೋವಿಂದನನ್ನು ಕೊಂದು ಬೆಳ್ಳಿ ಗಟ್ಟಿ ಜತೆ ಪರಾರಿಯಾಗಿದ್ದ.
ಮೈಸೂರು: ಬೆಳ್ಳಿ (Silver) ಆಸೆಗಾಗಿ ಕೆಲಸ ಕೊಟ್ಟವನನ್ನೇ ಕೊಲೆ (Murder) ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅರ್ಜುನ್ ಕುಮಾರ(28), ಗೋವಿಂದ(30)ನನ್ನು ಕೊಲೆ ಮಾಡಿ ನಂತರ ರಾಜಸ್ಥಾನಕ್ಕೆ ಪರಾರಿಯಾಗಿದ್ದ. ಮೈಸೂರಿನ ಲಷ್ಕರ್ ಠಾಣೆ ಪೊಲೀಸರು ಬಂಧಿಸಿ, ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಗಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ. ಅರ್ಜುನ್ ಕುಮಾರ್, ಗೋವಿಂದ ಮೂಲತಃ ರಾಜಸ್ಥಾನದವರು. ಮೈಸೂರಿನ ಸುಮತಿನಾಥ ಜೈನಮಂದಿರದ ಬೆಳ್ಳಿ ಕೆಲಸಕ್ಕೆ ಬಂದಿದ್ರು. ಸಹಾಯಕ್ಕಾಗಿ ಗೋವಿಂದ ಅರ್ಜುನ್ ಕುಮಾರ್ನ ಕರೆತಂದಿದ್ದ.
ಮೈಸೂರಿನ ಹಳ್ಳದಕೇರಿ ಬಡಾವಣೆಯಲ್ಲಿ ಉಳಿದುಕೊಂಡಿದ್ದರು. ಜೈನಮಂದಿರದ ಕೆಲಸಕ್ಕಾಗಿ 14 ಕೆಜಿ ಬೆಳ್ಳಿ ಗಟ್ಟಿ ನೀಡಲಾಗಿತ್ತು. ಈ ಬೆಳ್ಳಿ ಮೇಲೆ ಕಣ್ಣಿಟ್ಟಿದ್ದ ಆರೋಪಿ ಗೋವಿಂದನನ್ನು ಕೊಂದು ಬೆಳ್ಳಿ ಗಟ್ಟಿ ಜತೆ ಪರಾರಿಯಾಗಿದ್ದ. 8 ಲಕ್ಷ ಮೌಲ್ಯದ 12 ಕೆಜಿ ಬೆಳ್ಳಿ ಗಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಅಪಘಾತದಿಂದ ಯುವತಿಯ ಕೊಲೆ ರಹಸ್ಯ ಬಯಲು: ರಾಮನಗರ: ಅಪಘಾತದಿಂದ ಕೊಲೆ ರಹಸ್ಯ ಬಯಲಾಗಿದೆ. ಕೊಲೆಗೈದು ಮೃತದೇಹ ಸಾಗಿಸುವ ವೇಳೆ ಅಪಘಾತ ನಡೆದಿದೆ. ರಾಮನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಈ ಘಟನೆ ನಡೆದಿದೆ. ಹಮ್ಸ್ ಹಾರಿಸುವ ವೇಳೆ ಆರೋಪಿಗಳು ಹಾಗೂ ಮೃತದೇಹ ಕೆಳಗೆ ಬಿದ್ದಿದೆ. ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದಾಗ ವೈದ್ಯರು ಮೃತದೇಹವನ್ನು ಗಮನಿಸಿದ್ದಾರೆ.
ಮಹಿಳೆ ಸಾವನ್ನಪ್ಪಿ ಬಹಳ ಸಮಯವಾಗಿದೆ. ಅಪಘಾತದಿಂದ ಸಾವು ಸಂಭವಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅನುಮಾನದಿಂದ ಪೊಲೀಸರು ತಪಾಸಣೆಗೆ ಮುಂದಾಗಿದ್ದಾರೆ. ಈ ವೇಳೆ ಕೊಲೆ ರಹಸ್ಯ ಬಯಲಾಗಿದೆ. ಆರೋಪಿಗಳು ಬೆಂಗಳೂರಿನ ಕೆಂಚೇನಹಳ್ಳಿಯ ಬಾಡಿಗೆ ಮನೆಯಲ್ಲಿ ಸೌಮ್ಯ ಎಂಬ ಯುವತಿಯನ್ನು ಕೊಲೆ ಮಾಡಿದ್ದಾರೆ. ಹಣಕಾಸಿನ ವಿಚಾರವಾಗಿ ಕೊಲೆ ನಡೆದಿದೆ. ರಘು ಹಾಗೂ ಆತನ ಪತ್ನಿ ದುರ್ಗಾ ಎಂಬಾಕೆ ಹತ್ಯೆ ಮಾಡಿದ್ದಾರೆ. ಮೃತದೇಹವನ್ನ ಮಧ್ಯದಲ್ಲಿ ಇಟ್ಟುಕೊಂಡು ನಾಗರಾಜ್ ಹಾಗೂ ವಿನೋದ್ ಹೋಗುತ್ತಿದ್ದರು. ಅಪಘಾತದಿಂದ ವಿನೋದ್‌ಗೆ ಗಂಭೀರ ಗಾಯವಾಗಿದೆ.
ಇದನ್ನೂ ಓದಿ
Published On - 8:33 am, Wed, 11 May 22