AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು: ಪರಿಹಾರದ ಹಣಕ್ಕಾಗಿ ಪತಿಯನ್ನ ಕೊಲೆ ಮಾಡಿ ಹುಲಿ ಕೊಂದಿದೆ ಎಂದ ಪತ್ನಿ!

ಪರಿಹಾರದ ಹಣಕ್ಕಾಗಿ ತನ್ನ ಗಂಡನನ್ನೇ ಕೊಲೆ ಮಾಡಿ, ಬಳಿಕ ಹುಲಿ ಕೊಂದಿದೆ ಪತ್ನಿ ಕಥೆ ಕಟ್ಟಿದ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ. ಅನುಮಾನಗೊಂಡು ವಿಚಾರಣೆ ಮಾಡಿದ್ದು, ಈ ವೇಳೆ ಮಹಿಳೆ ಅಸಲಿ ಕಹಾನಿ ಬಾಯಿಬಿಟ್ಟಿದ್ದಾಳೆ. ಸದ್ಯ ಪೊಲೀಸರು ಮಹಿಳೆಯನ್ನು ಅರೆಸ್ಟ್​ ಮಾಡಿದ್ದಾರೆ.

ಮೈಸೂರು: ಪರಿಹಾರದ ಹಣಕ್ಕಾಗಿ ಪತಿಯನ್ನ ಕೊಲೆ ಮಾಡಿ ಹುಲಿ ಕೊಂದಿದೆ ಎಂದ ಪತ್ನಿ!
ಬಂಧಿತ ಪತ್ನಿ, ಕೊಲೆಯಾದ ಗಂಡ
ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ|

Updated on: Sep 12, 2025 | 9:10 AM

Share

ಮೈಸೂರು, ಸೆಪ್ಟೆಂಬರ್​ 12: ಪತಿಯನ್ನು (husband) ಕೊಲೆ (kill) ಮಾಡಿ ಹುಲಿ ಕೊಂದಿದೆ ಎಂದು ನಾಟಕವಾಡಿದ್ದ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹುಣಸೂರು ತಾಲೂಕಿನ ಚಿಕ್ಕಹೆಜ್ಜೂರಿನಲ್ಲಿ ಘಟನೆ ನಡೆದಿದ್ದು, ವಿಷ ಹಾಕಿ ವೆಂಕಟಸ್ವಾಮಿ(45)ರನ್ನು ಪತ್ನಿ ಸಲ್ಲಾಪುರಿ ಕೊಲೆ ಮಾಡಿದ್ದಾಳೆ. ಬಳಿಕ ನಾಟಕವಾಡಿದ್ದಾಳೆ. ಕಾಡುಪ್ರಾಣಿ ದಾಳಿಯಿಂದ ಮೃತಪಟ್ಟಿದ್ದಾರೆ ಅಂದರೆ ಪರಿಹಾರ ಸಿಗುತ್ತದೆ ಎಂದು ಕೃತ್ಯವೆಸಗಿರುವುದಾಗಿ ಪತ್ನಿ ಹೇಳಿದ್ದಾಳೆ. ಸದ್ಯ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

ದಂಪತಿ ಅಡಕೆ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ಏಕಾಏಕಿ ಪತಿ ಕೊಲೆಗೈದು ನಾಪತ್ತೆಯಾಗಿದ್ದಾರೆ ಎಂದು ಪತ್ನಿ ದೂರು ನೀಡಿದ್ದಳು. ಕಳೆದ ಸೋಮವಾರ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿತ್ತು. ಈ ವೇಳೆ ಮನೆಯಿಂದ ಹೊರಹೋಗಿದ್ದ ಪತಿ ನಾಪತ್ತೆಗಿದ್ದು, ಹುಲಿ‌ ಕೊಂದು ಎಳೆದುಕೊಂಡು ಹೋಗಿರಬಹುದೆಂದು ನಾಟಕವಾಡಿದ್ದಳು.

ತಿಪ್ಪೆಗುಂಡಿಯಲ್ಲಿ ಶವ ಪತ್ತೆ: ಪೊಲೀಸರೇ ಶಾಕ್!

ಈ ಬಗ್ಗೆ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಿಂಟಿ ಆಗಿ ಪರಿಶೀಲನೆ ಮಾಡಿದ್ದು, ಈ ವೇಳೆ ಯಾವುದೇ ಪ್ರಾಣಿ ಬಂದ ಕುರುಹು ಇರಲಿಲ್ಲ. ಅನುಮಾನಗೊಂಡು ಮನೆಯಲ್ಲಿ ಹುಡುಕಾಟ ನಡೆಸಿದ ಪೊಲೀಸರೇ ಒಂದು ಕ್ಷಣ ಶಾಕ್​ ಆಗಿದ್ದರು. ಏಕೆಂದರೆ ಮನೆಯ ಹಿಂದೆ ತಿಪ್ಪೆಗುಂಡಿಯಲ್ಲಿ ವೆಂಕಟಸ್ವಾಮಿ ಶವ ಪತ್ತೆ ಆಗಿದೆ.

ಇದನ್ನೂ ಓದಿ
Image
ಪ್ರೇಮಿ ಕೈಯಲ್ಲೇ ಪತಿಯ ಕೊಲೆಗೆ ಯತ್ನಿಸಿದ ಪತ್ನಿ, ರಹಸ್ಯ ಬಯಲಾಗಿದ್ದೇ ರೋಚಕ
Image
ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗುವನ್ನೇ ಕೊಲೆಗೈದ ತಾಯಿ, ಇಬ್ಬರ ಬಂಧನ
Image
ಚಿಕ್ಕಬಳ್ಳಾಪುರ: ತಮಾಷೆಯಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Image
ಪ್ರಿಯಕರನ ಜೊತೆ ಸದಾನಂದವಾಗಿರಲು ಗಂಡನ ಮರ್ಮಾಂಗ ಹಿಚುಕಿದ ಸುನಂದಾ!

ಇದನ್ನೂ ಓದಿ: ವಿಜಯಪುರ: ಅಕ್ರಮ ಸಂಬಂಧಕ್ಕಾಗಿ ಪ್ರೇಮಿಯ ಕೈಯಲ್ಲೇ ಪತಿಯ ಕೊಲೆ ಮಾಡಿಸಲೆತ್ನಿಸಿದ ಪತ್ನಿ, ರಹಸ್ಯ ಬಯಲಾಗಿದ್ದೇ ರೋಚಕ

ಇನ್ನು ವಿಚಾರಣೆ ವೇಳೆ ವೆಂಕಟಸ್ವಾಮಿ ಪತ್ನಿ ಸಲ್ಲಾಪುರಿ ಅಸಲಿ ಸತ್ಯ ಬಾಯಿಬಿಟ್ಟಿದ್ದಾರೆ. ಕಾಡುಪ್ರಾಣಿ ದಾಳಿಯಿಂದ ಮೃತಪಟ್ಟಿದ್ದಾರೆ ಅಂದರೆ ಲಕ್ಷಾಂತರ ರೂ ಪರಿಹಾರ ಸಿಗುತ್ತದೆ ಎಂದು ಕೃತ್ಯವೆಸಗಿದ್ದಾಗಿ ಆರೋಪಿ ಸಲ್ಲಾಪುರಿ ತಪ್ಪೊಪ್ಪಿಕೊಂಡಿದ್ದಾಳೆ.

ಅಪರಿಚಿತ ಶವ ಪತ್ತೆ: ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಶಂಕೆ

ಬೆಂಗಳೂರಿನ ಕೆಂಚನಪುರ ಬಳಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆ ಆಗಿದೆ. ಶವ ಸಿಕ್ಕ ಸ್ಥಳಕ್ಕೆ ಕುಂಬಳಗೂಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಧ್ಯ ವಯಸ್ಸಿನ ಪುರುಷನಾಗಿದ್ದು, ಮೃತನ ಗುರುತು ಪತ್ತೆಯಾಗಿಲ್ಲ.

ಇದನ್ನೂ ಓದಿ: ಹಾವೇರಿ: ಪ್ರಿಯಕರನೊಂದಿಗೆ ಸೇರಿ ಹೆತ್ತ ಮಗುವನ್ನೇ ಕೊಲೆಗೈದ ತಾಯಿ, ಇಬ್ಬರ ಬಂಧನ

ಖಾಲಿ ಜಮೀನಿನ ಪ್ರದೇಶದಲ್ಲಿ ವ್ಯಕ್ತಿಯ ಶವ‌ ಪತ್ತೆ ಆಗಿದೆ. ಮುಖದ ಮೇಲೆ ಕಲ್ಲು ಎತ್ತಿಹಾಕಿ, ಬೇರೆಡೆ ಕೊಲೆ ಮಾಡಿ ಇಲ್ಲಿ ತಂದು ಎಸೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿ ಕುಂಬಳಗೂಡು ಪೊಲೀಸರಿಂದ ತನಿಖೆ ಮುಂದುವರಿದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.