Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜ.4ರಂದು ನಂಜನಗೂಡು ಬಂದ್​ಗೆ ಕರೆ; ಬೆಂಬಲಿಸುವಂತೆ ಅಂಗಡಿಗಳಿಗೆ ಕರಪತ್ರ ಹಂಚಿದ ಭಕ್ತರು

ನಾಳೆ(ಜ.4) ಮೈಸೂರು ಜಿಲ್ಲೆಯ ನಂಜನಗೂಡು ಬಂದ್​(Nanjangud Bandh)ಗೆ ಕರೆ ನೀಡಿದ ವಿಚಾರ ‘ಬಂದ್​ಗೆ ಬೆಂಬಲಿಸುವಂತೆ ನಂಜುಂಡೇಶ್ವರ ಭಕ್ತರು ಅಂಗಡಿಗಳಿಗೆ ತೆರಳಿ ಕರಪತ್ರ ಹಂಚಿಕೆ ಚಳವಳಿ ನಡೆಸಿದ್ದಾರೆ.

ಜ.4ರಂದು ನಂಜನಗೂಡು ಬಂದ್​ಗೆ ಕರೆ; ಬೆಂಬಲಿಸುವಂತೆ ಅಂಗಡಿಗಳಿಗೆ ಕರಪತ್ರ ಹಂಚಿದ ಭಕ್ತರು
ಜ.4ರಂದು ನಂಜನಗೂಡು ಬಂದ್​ಗೆ ಕರೆ; ಬೆಂಬಲಿಸುವಂತೆ ಅಂಗಡಿಗಳಿಗೆ ಕರಪತ್ರ ಹಂಚಿದ ಭಕ್ತರು
Follow us
ರಾಮ್​, ಮೈಸೂರು
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 03, 2024 | 10:36 PM

ಮೈಸೂರು, ಜ.03: ನಾಳೆ(ಜ.4) ಮೈಸೂರು ಜಿಲ್ಲೆಯ ನಂಜನಗೂಡು ಬಂದ್​(Nanjangud Bandh)ಗೆ ಕರೆ ನೀಡಿದ ವಿಚಾರ ‘ಬಂದ್​ಗೆ ಬೆಂಬಲಿಸುವಂತೆ ನಂಜುಂಡೇಶ್ವರ ಭಕ್ತರು ಅಂಗಡಿಗಳಿಗೆ ತೆರಳಿ ಕರಪತ್ರ ಹಂಚಿಕೆ ಚಳವಳಿ ನಡೆಸಿದ್ದಾರೆ. ‘ಇದು ನಂಜನಗೂಡು ಜನರಿಗೆ ಆಗಿರುವ ಅವಮಾನ, ಆದ್ದರಿಂದ ಅದನ್ನು ಖಂಡಿಸಿ ಬಂದ್​ಗೆ ಕರೆ ನೀಡಿದ್ದೇವೆ. ನಂಜನಗೂಡು ಜನರು ಬಂದ್​ಗೆ ಸಹಕಾರ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಪೋಸ್ಟ್

ಇನ್ನು ನಾಳೆ ನಂಜನಗೂಡು ಬಂದ್‌ಗೆ ಕರೆಕೊಟ್ಟ ಹಿನ್ನೆಲೆ ಬಂದ್ ವಿಫಲಗೊಳಿಸಲು ಕೆಲವರು ಹುನ್ನಾರ ಮಾಡಿದ್ದಾರೆ ಎಂದು ನಂಜನಗೂಡು ಶ್ರೀಕಂಠೇಶ್ವರ ಭಕ್ತರು ಆರೋಪಿಸಿದ್ದು, ಯಾರಿಂದಲೂ ಬಂದ್ ವಿಫಲಗೊಳಿಸಲು ಸಾಧ್ಯವಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದು ವೈರಲ್ ಆಗಿದೆ. ಯಾರು ಎಷ್ಟೇ ರಾಜಕೀಯ ಹುನ್ನಾರ ಮಾಡಿ ತಪ್ಪಿತಸ್ಥರ ರಕ್ಷಣೆಗಾಗಿ ಬಂದ್ ವಿಫಲ ಮಾಡಲು ಇನ್ನಷ್ಟು ಹುನ್ನಾರ ಮಾಡಿದರು, ಬಂದ್ ಆಗುತ್ತೆ. ಯಾಕೆಂದರೆ ಬಂದ್ ಮಾಡುತ್ತಿರುವುದು ಯಾವುದೋ ಸಂಘ,ಸಂಸ್ಥೆ, ಪಕ್ಷವಲ್ಲ, ನಂಜುಂಡಪ್ಪನ ಭಕ್ತರು. ಅವನ ಹೆಸರಲ್ಲಿ ಅನ್ನ ತಿನ್ನುತ್ತಿರುವ ಭಕ್ತ ಗಣ ಎಂಬಂತಹ ಪೋಸ್ಟ್​ ವೈರಲ್​ ಆಗಿದೆ.

ಇದನ್ನೂ ಓದಿ:ಅಂದಕಾಸುರ ಸಂಹಾರ: ನಂಜುಂಡೇಶ್ವರ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿರುವ ಆರೋಪ

ನಾವು ಸರ್ಕಾರಿ ನೌಕರರು ಹೇಳಿದ ಕಡೆ ಸಹಿ ಹಾಕಿದ್ದೇವೆ ಅಷ್ಟೇ- ಅರ್ಚಕ

ಜ.4ರಂದು ಮೈಸೂರು ಜಿಲ್ಲೆ ನಂಜನಗೂಡು ಬಂದ್​ಗೆ ಕರೆ ವಿಚಾರ ‘ನಾವು ಸರ್ಕಾರಿ ನೌಕರರು ಹೇಳಿದ ಕಡೆ ಸಹಿ ಹಾಕಿದ್ದೇವೆ ಅಷ್ಟೇ. ಅದನ್ನು ಬಿಟ್ಟರೆ ನಮಗೆ ಬೇರೆ ಯಾವುದೇ ಮಾಹಿತಿ ಇಲ್ಲ ಎಂದು ನಂಜುಂಡೇಶ್ವರ ದೇವಸ್ಥಾನದ ಅರ್ಚಕರು ವಿಡಿಯೋ ಮೂಲಕ ನಂಜನಗೂಡು ಪ್ರಕರಣದ ಬಗ್ಗೆ ಜನರಿಗೆ ಗೊತ್ತಿದೆ, ಅರ್ಥೈಸಿಕೊಳ್ತಾರೆ ಎಂದಿದ್ದರು. ಅರ್ಚಕರ ಮಾಧ್ಯಮ ಪ್ರಕಟಣೆ ಬಗ್ಗೆ ಭಕ್ತರು ಅನುಮಾನ ವ್ಯಕ್ತಪಡಿಸಿದ್ದು, ಇದೀಗ ಮತ್ತಷ್ಟು ಅನುಮಾನಕ್ಕೆ ಅರ್ಚಕರ ಹೇಳಿಕೆ  ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:28 pm, Wed, 3 January 24