ಲೋಕಸಭೆ ಭದ್ರತಾ ಲೋಪ: ಮೈಸೂರಿನಲ್ಲಿ ಬಾಡಿಗೆಗೆ 2 ರೂಮ್ ಮಾಡಿಕೊಂಡಿದ್ದ ಆರೋಪಿ ಮನೋರಂಜನ್!

Parliment Security Breach: ಮನೋರಂಜನ್ ಮೈಸೂರಿನಲ್ಲಿ ಎರಡು ರೂಮ್ ಮಾಡಿಕೊಳ್ಳುವ ಅಗತ್ಯ ಏನಿತ್ತು? ಸಾಕಷ್ಟು ಸಮಯ ಹಿಂದಿನಿಂದಲೇ ಸಂಸತ್ ಭವನದ ಮೇಲೆ ದಾಳಿಗೆ ಸಂಚು ಹೂಡಲಾಗಿತ್ತೇ ಎಂಬ ಅನುಮಾನ ಇದೀಗ ವ್ಯಕ್ತವಾಗಿದ್ದು ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಲೋಕಸಭೆ ಭದ್ರತಾ ಲೋಪ: ಮೈಸೂರಿನಲ್ಲಿ ಬಾಡಿಗೆಗೆ 2 ರೂಮ್ ಮಾಡಿಕೊಂಡಿದ್ದ ಆರೋಪಿ ಮನೋರಂಜನ್!
ಲೋಕಸಭೆ ಭದ್ರತಾ ಲೋಪ: ಮೈಸೂರಿನಲ್ಲಿ ಬಾಡಿಗೆಗೆ 2 ರೂಮ್ ಮಾಡಿಕೊಂಡಿದ್ದ ಆರೋಪಿ ಮನೋರಂಜನ್!
Edited By:

Updated on: Dec 23, 2023 | 12:07 PM

ಮೈಸೂರು, ಡಿಸೆಂಬರ್ 23: ಸಂಸತ್ ಭವನದಲ್ಲಿ (Parliment Security Breach) ಸ್ಮೋಕ್ ಬಾಂಬ್ ದಾಳಿ ನಡೆಸಿದ ಆರೋಪಿ ಮನೋರಂಜನ್ (Manoranjan) ಮೈಸೂರಿನಲ್ಲಿ (Mysuru) ಬಾಡಿಗೆಗೆ ಎರಡು ರೂಮ್ ಮಾಡಿಕೊಂಡಿದ್ದ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಮನೋರಂಜನ್ ಸ್ನೇಹಿತರು ಈ ವಿಚಾರವನ್ನು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ. ಇದೀಗ ಮನೋರಂಜನ್ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮನೋರಂಜನ್ ಮೈಸೂರಿನಲ್ಲಿ ಬಾಡಿಗೆಗೆ ಎರಡು ರೂಮ್ ಮಾಡಿಕೊಂಡಿದ್ದ ವಿಚಾರದ ಬಗ್ಗೆ ಆತನ ಪೋಷಕರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಮ್ಮ ಬಳಿ ಅಷ್ಟೊಂದು ಹಣವನ್ನೇ ಪಡೆಯುತ್ತಿರಲಿಲ್ಲ. ಅದಕ್ಕೆ ಹೇಗೆ ಹಣ ಹೊಂದಿಸುತ್ತಿದ್ದ ಎಂಬುದು ತಿಳಿದಿಲ್ಲ ಎಂದು ಆತನ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.

ಮನೋರಂಜನ್ ಮೈಸೂರಿನಲ್ಲಿ ಎರಡು ರೂಮ್ ಮಾಡಿಕೊಳ್ಳುವ ಅಗತ್ಯ ಏನಿತ್ತು? ಸಾಕಷ್ಟು ಸಮಯ ಹಿಂದಿನಿಂದಲೇ ಸಂಸತ್ ಭವನದ ಮೇಲೆ ದಾಳಿಗೆ ಸಂಚು ಹೂಡಲಾಗಿತ್ತೇ ಎಂಬ ಅನುಮಾನ ಇದೀಗ ವ್ಯಕ್ತವಾಗಿದ್ದು ಈ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮನೋರಂಜನ್ ಆಗಾಗ ದೆಹಲಿಗೆ ತೆರಳಲು ಆತನಿಗೆ ಹಣ ಎಲ್ಲಿಂದ ಬರುತ್ತಿತ್ತು ಎಂಬ ಬಗ್ಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಇತ್ತೀಚೆಗಷ್ಟೇ ತನಿಖೆ ಆರಂಭಿಸಿದ್ದರು. ಆದರೆ ಈ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ಅವರು ಬಹಿರಂಗಪಡಿಸಿರಲಿಲ್ಲ. ಇದೀಗ, ಮನೋರಂಜನ್ ಮೈಸೂರಿನಲ್ಲಿ ರೂಮ್ ಬಾಡಿಗೆಗೆ ಪಡೆಯಲು ಹಣ ಹೇಗೆ ಹೊಂದಿಸುತ್ತಿದ್ದ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಮನೋರಂಜನ್ ಪೋಷಕರ ಸುದೀರ್ಘ ವಿಚಾರಣೆ: ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದ ದೆಹಲಿ ಪೊಲೀಸ್​

ಡಿಸೆಂಬರ್ ಮೂರರಂದು ಮನೋರಂಜನ್, ಸಾಗರ್ ಶರ್ಮಾ ಮತ್ತು ಇತರ ಆರೋಪಿಗಳು ಸಂಸತ್ ಭವನದ ಮೇಲೆ ಸ್ಮೋಕ್ ಬಾಂಬ್ ದಾಳಿ ನಡೆಸಿದ್ದರು. ಕೆಲ ಆರೋಪಿಗಳು ಸಂಸತ್ ಭವನದ ಹೊರಗೆ ಪ್ರತಿಭಟನೆ ಮತ್ತು ದಾಳಿ ನಡೆಸಿದ್ದರೆ, ಮನೋರಂಜನ್ ಮತ್ತು ಸಾಗರ್ ಶರ್ಮಾ ಲೋಕಸಭೆಯ ಒಳ ನುಗ್ಗಿ ಸ್ಮೋಕ್ ಬಾಂಬ್ ದಾಳಿ ನಡೆಸಿದ್ದರು. ಘಟನೆಯ ದೇಶದಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದಿಲೀಪ್​, ಚೌಡಹಳ್ಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸಿದ್ದೇನೆ. ಸಧ್ಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Loading...
Unable to load recommendations.
Follow Us