AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿಯೋದೇ ಇವರ ವೀಕನೆಸ್​: ಕುಡಿಯೋದಕ್ಕಾಗಿ ಬೈಕ್​ ಕದಿಯುತ್ತಿದ್ದ ಇಬ್ಬರು ಆಸಾಮಿಗಳು ಅಂದರ್

ಮಗಳನ್ನ ಕೊಂದು ತಾಯಿ ಆತ್ಮಹತ್ಯೆ ಪ್ರಕರಣ ಸಂಬಂಧ ಮರಣೋತ್ತರ ಪರೀಕ್ಷಾ ವರದಿಗಾಗಿ ಬನಶಂಕರಿ ಪೊಲೀಸರು ಕಾಯುತ್ತಿದ್ದಾರೆ.

ಕುಡಿಯೋದೇ ಇವರ ವೀಕನೆಸ್​: ಕುಡಿಯೋದಕ್ಕಾಗಿ ಬೈಕ್​ ಕದಿಯುತ್ತಿದ್ದ ಇಬ್ಬರು ಆಸಾಮಿಗಳು ಅಂದರ್
ಬಂಧಿತ ಆರೋಪಿಗಳು
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on:Aug 11, 2022 | 11:04 AM

Share

ಮೈಸೂರು: ಕುಡಿತದ ಚಟಕ್ಕಾಗಿ ಬೈಕ್​ ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿದ್ದು, ಐದು ಬೈಕ್ ವಶಕ್ಕೆ ಪಡೆಯಲಾಗಿದೆ. ಹುಣಸೂರು ನಗರ ಠಾಣಾ ಪೊಲೀಸರ ಕಾರ್ಯಾಚರಣೆ ಮಾಡಿ, ತಾಲೂಕಿನ ತಟ್ಟೆಕೆರೆ ಹೊಸಕೋಟೆ ಗ್ರಾಮದ ರಾಮಸ್ವಾಮಿ (32) ಅಂಗಟಹಳ್ಳಿ ಗ್ರಾಮದ ಗಿರೀಶ (28) ಬಂಧಿತ ಆರೋಪಿಗಳು. ನಗರ ಠಾಣಾ ವ್ಯಾಪ್ತಿಯಲ್ಲಿ 4 ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ 1 ಬೈಕ್ ಕಳ್ಳತನ ಮಾಡಿದ್ದರು. ಸದ್ಯ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಆನ್​ಲೈನ್ ಗೇಮ್​ನಲ್ಲಿ 11 ಕೋಟಿ ಗೆದ್ದಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಅಪಹರಣ ಸುಖಾಂತ್ಯ; 1 ಕೋಟಿಗೆ ಬೇಡಿಕೆ, 7 ಮಂದಿ ಅರೆಸ್ಟ್

ಕಾಲು ಜಾರಿ ಹೊಳೆಗೆ ಬಿದ್ದು ಬಾಲಕಿ ಸಾವು: ಇಂದು ಅಂತ್ಯಕ್ರಿಯೆ

ಉಡುಪಿ: ಕಾಲು ಜಾರಿ ಹೊಳೆಗೆ ಬಿದ್ದು ಬಾಲಕಿ ಸನ್ನಿಧಿ ಮೃತಪಟ್ಟ ಹಿನ್ನೆಲೆ ಮನೆಯ ಸಮೀಪವೇ ಸನ್ನಿಧಿ (೦೭)ಅಂತ್ಯಕ್ರಿಯೆ ನಡೆಯಲಿದೆ. ಸರ್ಕಾರಿ‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಬಾಲಕಿ ಅಂತ್ಯಕ್ರಿಯೆ ನಡೆಯಲಿದೆ. ಕಳೆದ ಸೋಮವಾರ ಸಂಜೆ ಸನ್ನಿಧಿ ನೀರುಪಾಲಾಗಿದ್ದಳು. ಕಾಲು ಸಂಕ(ಸೇತುವೆ) ದಾಟುವ ವೇಳೆ ಕಾಲು ಜಾರಿ ಹೊಳೆಗೆ ಬಿದ್ದು ಘಟನೆ ನಡೆದಿತ್ತು. ನಲವತ್ತೆಂಟು ಗಂಟೆಗಳ ಕಾಲ ಹುಡುಕಾಟ ಬಳಿಕ ಬಿದ್ದ ಸ್ಥಳದಿಂದ ಕೆಲವೇ ದೂರದ ಮೃತದೇಹ ಪತ್ತೆಯಾಗಿತ್ತು.

ವಿಷಸೇವಿಸಿ ಆತ್ಮಹತ್ಯೆ; ಅಪರಿಚಿತ ವ್ಯಕ್ತಿ ಶವ ಪತ್ತೆ

ಚಿಕ್ಕಬಳ್ಳಾಪುರ: ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಅಪರಿಚಿತ ವ್ಯಕ್ತಿ ಶವ ಹೊನ್ನೇನಹಳ್ಳಿ ಬಳಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ಜೇಬಿನಲ್ಲಿ ಪತ್ನಿ ಹಾಗೂ ಮಗಳ ಫೋಟೊ ಪತ್ತೆಯಾಗಿದ್ದು, ಚಿಕ್ಕಬಳ್ಳಾಫುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Shocking News: ಅಕ್ರಮ ಸಂಬಂಧಕ್ಕೆ ವಿರೋಧ; ಗಂಡನನ್ನೇ ಬೆಂಕಿ ಹಚ್ಚಿ ಕೊಂದ ಹೆಂಡತಿ

ಮಗಳನ್ನ ಕೊಂದು ತಾಯಿ ಆತ್ಮಹತ್ಯೆ ಪ್ರಕರಣ: ಮರಣೋತ್ತರ ಪರೀಕ್ಷೆಗೆ ಕಾದುಕುಳಿತ ಪೊಲೀಸ್

ಬೆಂಗಳೂರು: ಮಗಳನ್ನ ಕೊಂದು ತಾಯಿ ಆತ್ಮಹತ್ಯೆ ಪ್ರಕರಣ ಸಂಬಂಧ ಮರಣೋತ್ತರ ಪರೀಕ್ಷಾ ವರದಿಗಾಗಿ ಬನಶಂಕರಿ ಪೊಲೀಸರು ಕಾಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯಿಂದ ನಿಖರವಾಗಿ ಯಾರ ಸಾವು ಮೊದಲು ಅಗಿದೆ ಅನ್ನೋ ವಿಚಾರ ತಿಳಿಯಲಿದೆ. ಮಗುವನ್ನ ಸಾಯಿಸುವ ಮುನ್ನ ಯಾವುದೋ ಸಿರಫ್ ಕುಡಿಸಿ ಪ್ರಜ್ಞೆ ತಪ್ಪಿಸಿರುವ ಶಂಕೆ ವ್ಯಕ್ತವಾಗಿದೆ. ಶೈಮಾ ಸಹೋದರ ನೀಡಿರುವ ದೂರಿನ ಮೇರೆಗೆ ಸದ್ಯ ಎಫ್ಐಆರ್ ದಾಖಲು ಮಾಡಲಾಗಿದೆ. ಆತ್ಮಹತ್ಯೆಗೆ ಕಾರಣವೇನು ಎಂದು  ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ಶೈಮಾ ಅವರ ಫೇಸ್‍ಬುಕ್ ಖಾತೆ ಶೈಮಾ ಪತಿ ನಾರಾಯಣ್​ರ ಮೊಬೈಲ್ ಪರಿಶೀಲನೆ ಮಾಡಲಾಗಿದೆ. ಕುಟುಂಬಸ್ಥರ ಬಳಿಯೂ ಪೊಲೀಸರು ಸಂಪೂರ್ಣ ಮಾಹಿತಿ ಕಲೆ ಹಾಕಿದ್ದು, ಇಬ್ಬರ ಮಧ್ಯೆ ಯಾವುದೇ ವೈಮನಸ್ಸು ಇರಲಿಲ್ಲ ಅನ್ಯೋನ್ಯವಾಗಿಯೇ ಇದ್ರೂ ಎಂದು ಕುಟುಂಬಸ್ಥರು ಹೇಳಿದ್ದಾರೆ. ಆತ್ಮಹತ್ಯೆಗೆ ಕಾರಣ ಪತ್ತೆ ಹಚ್ಚಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 10:17 am, Thu, 11 August 22