ಕಾಂಗ್ರೆಸ್​ ಸಮಾವೇಶಕ್ಕೆ 25 ಕೋಟಿ ರೂ. ಖರ್ಚು; ರಾಧಾ ಮೋಹನ್ ದಾಸ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 10, 2024 | 3:26 PM

ಮುಡಾ ಹಗರಣ ಖಂಡಿಸಿ ಬಿಜೆಪ-ಜೆಡಿಎಸ್ ಹಮ್ಮಿಕೊಂಡಿದ್ದ ಮೈಸೂರು ಚಲೋ ಪಾದಯಾತ್ರೆಗೆ ಇಂದು(ಆ.10)ತೆರೆ ಬಿಳಲಿದೆ . ಈ ಹಿನ್ನಲೆ ​ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ದಾಸ್ ಅಗರ್ವಾಲ್ ಕಾಂಗ್ರೆಸ್​ ವಿರುದ್ದ ಕಿಡಿಕಾರಿದರು.

ಕಾಂಗ್ರೆಸ್​ ಸಮಾವೇಶಕ್ಕೆ 25 ಕೋಟಿ ರೂ. ಖರ್ಚು; ರಾಧಾ ಮೋಹನ್ ದಾಸ್
ರಾಧಾ ಮೋಹನ್‌ ದಾಸ್ ಅಗರ್ವಾಲ್
Follow us on

ಮೈಸೂರು, ಆ.10: ಕಾಂಗ್ರೆಸ್​ ಸಮಾವೇಶಕ್ಕೆ 25 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್‌ ದಾಸ್ ಅಗರ್ವಾಲ್(Radha Mohan Das Agarwal) ಕಿಡಿಕಾರಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಿನ್ನೆ(ಶುಕ್ರವಾರ) ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಒಂದು ಸಾವಿರ ಒಬ್ಬರಿಗೆ ಕೊಟ್ಟು ಜನರನ್ನು ಕರೆಸಲಾಗಿತ್ತು. ನಮ್ಮ‌ ಪಾದಯಾತ್ರೆಗೆ ಹೆದರಿ ದುಡ್ಡು ಖರ್ಚು ಮಾಡಿ ಸಮಾವೇಶ ಮಾಡುವ ಅಗತ್ಯ ಕಾಂಗ್ರೆಸ್​ಗೆ ಇತ್ತಾ ಎಂದು ಪ್ರಶ್ನಿಸಿದ್ದಾರೆ.

ನಿನ್ನೆ ಕಾಂಗ್ರೆಸ್ ಲೂಟಿ ರ್‍ಯಾಲಿ, ನಮ್ಮದು ಜನತಾ ರ್‍ಯಾಲಿ

ಕಾಂಗ್ರೆಸ್ ಯಾವಾಗಲೂ ಲೂಟಿ ಮಾಡುವುದು, ಆ ಲೂಟಿ ಮಾಡಿದ ಹಣವನ್ನು ಹೀಗೆ ಖರ್ಚು ಮಾಡುವುದು ಅಭ್ಯಾಸ. ನಿನ್ನೆಯ ಕಾಂಗ್ರೆಸ್ ರ್‍ಯಾಲಿ ಲೂಟಿ ರ್‍ಯಾಲಿ, ನಮ್ಮದು ಜನತಾ ರ್‍ಯಾಲಿ. ಸಿದ್ದರಾಮಯ್ಯ ತಮ್ಮ ಸ್ಥಾನ ಖಾಲಿ ಮಾಡುವವರೆಗೂ ಜನರ ಜೊತೆ ಸೇರಿ ಹೋರಾಟ ಮಾಡುತ್ತೇವೆ. ಬಿಜೆಪಿ-ಜೆಡಿಎಸ್​ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಈಗ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಬಿಜೆಪಿ-ಜೆಡಿಎಸ್‌ ಪಾದಯಾತ್ರೆಯಲ್ಲೂ ಸುಳಿವಿಲ್ಲ: ರಾಜಕೀಯ ನೇಪಥ್ಯಕ್ಕೆ ಸರಿದ ಸುಮಲತಾ ಅಂಬರೀಶ್?

ರಾಜಕೀಯಕ್ಕೆ ಬಂದ ಬಳಿಕ ಡಿ.ಕೆ ಶಿವಕುಮಾರ್​ ಆಸ್ತಿ ಹೆಚ್ಚಾಗಿದೆ

ಡಿಕೆ ಶಿವಕುಮಾರ್ ಇತಿಹಾಸ ಯಾರಿಗೆ ಗೊತ್ತಿಲ್ಲ ಹೇಳಿ? ಅವರ ಆಸ್ತಿ ಮೊದಲು ಎಷ್ಟಿತ್ತು? ಈಗ ಎಷ್ಟಾಗಿದೆ?. ರಾಜಕೀಯಕ್ಕೆ ಬಂದ ಬಳಿಕ ಅವರ​ ಆಸ್ತಿ ಹೆಚ್ಚಾಗಿದೆ. ಡಿಕೆಶಿಗೆ ಇಷ್ಟು ಹಣ ಎಲ್ಲಿಂದ ಬಂತು? ಕರ್ನಾಟಕವನ್ನು ಅವರು ಲೂಟಿ ಮಾಡುತ್ತಿದ್ದಾರೆ. ಭ್ರಷ್ಟಾಚಾರದಿಂದ ಡಿಸಿಎಂ​ ಸಂಪತ್ತು ಹೆಚ್ಚಾಗಿದೆ ಎಂದು ಡಿಕೆಶಿ ವಿರುದ್ದ ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ