2ನೇ ದಿನದ ಭಾರತ್​ ಜೋಡೋ ಯಾತ್ರೆ ಮೈಸೂರು ಜಿಲ್ಲೆಗೆ ಎಂಟ್ರಿ, ಉತ್ಸಾಹದಿಂದ ಹೆಜ್ಜೆ ಹಾಕುತ್ತಿರುವ ರಾಹುಲ್​, ಡಿಕೆಶಿ, ಸಿದ್ದರಾಮಯ್ಯ

ಭಾರತ್​ ಜೋಡೋ ಯಾತ್ರೆ ಮೈಸೂರು ಜಿಲ್ಲೆ ಪ್ರವೇಶ ಮಾಡಿದ್ದು ಕಾಂಗ್ರೆಸ್​ ನಾಯಕರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ರಾಹುಲ್​ ಗಾಂಧಿ, ಡಿಕೆಶಿ, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಸೇರಿ ಹಲವು ನಾಯಕರು ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದಾರೆ.

2ನೇ ದಿನದ ಭಾರತ್​ ಜೋಡೋ ಯಾತ್ರೆ ಮೈಸೂರು ಜಿಲ್ಲೆಗೆ ಎಂಟ್ರಿ, ಉತ್ಸಾಹದಿಂದ ಹೆಜ್ಜೆ ಹಾಕುತ್ತಿರುವ ರಾಹುಲ್​, ಡಿಕೆಶಿ, ಸಿದ್ದರಾಮಯ್ಯ
ಭಾರತ್​ ಜೋಡೋ ಯಾತ್ರೆ
Follow us
TV9 Web
| Updated By: ಆಯೇಷಾ ಬಾನು

Updated on:Oct 01, 2022 | 10:38 AM

ಮೈಸೂರು: ಜಿಟಿಜಿಟಿ ಮಳೆಯಿಂದ(Karnataka Rains) ಎರಡನೇ ದಿನದ ಕಾಂಗ್ರೆಸ್​ ಜೋಡೋ ಯಾತ್ರೆ(Bharat Jodo Yatra) ಕೊಂಚ ವಿಳಂಬವಾಗಿದ್ದು ಸದ್ಯ ಗುಂಡ್ಲುಪೇಟೆಯ ತೊಂಡವಾಡಿ ಗೇಟ್​​ನಿಂದ ಆರಂಭವಾಗಿದೆ. ಇಂದು ಬೆಳಗ್ಗೆ 6.30ಕ್ಕೆ ಆರಂಭವಾಗಬೇಕಿದ್ದ ಯಾತ್ರೆ ಸುಮಾರು ಒಂದು ಗಂಟೆ ತಡವಾಗಿ ಆರಂಭವಾಗಿದೆ. ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್​ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕೆಜೆ ಜಾರ್ಜ್, ಎಂಬಿ ಪಾಟೀಲ್ ಭಾಗಿಯಾಗಿದ್ದಾರೆ.

ಭಾರತ್​ ಜೋಡೋ ಯಾತ್ರೆ ಮೈಸೂರು ಜಿಲ್ಲೆಗೆ ಎಂಟ್ರಿ

ಭಾರತ್​ ಜೋಡೋ ಯಾತ್ರೆ ಮೈಸೂರು ಜಿಲ್ಲೆ ಪ್ರವೇಶ ಮಾಡಿದ್ದು ಕಾಂಗ್ರೆಸ್​ ನಾಯಕರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ರಾಹುಲ್​ ಗಾಂಧಿ, ಡಿಕೆಶಿ, ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಸೇರಿ ಹಲವು ನಾಯಕರು ಉತ್ಸಾಹದಿಂದ ಹೆಜ್ಜೆ ಹಾಕುತ್ತಿದ್ದಾರೆ. ಇದನ್ನೂ ಓದಿ: ನ್ಯಾಟೋ ಪ್ರದೇಶದ ಪ್ರತಿ ಇಂಚನ್ನೂ ನಾವು ಕಾಪಾಡಿಕೊಳ್ಳುತ್ತೇವೆ; ಪುಟಿನ್​ಗೆ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಎಚ್ಚರಿಕೆ

ಪಾದಯಾತ್ರೆಯಿಂದ ವಿಶ್ರಾಂತಿಗೆ ತೆರಳಿದ ಸಿದ್ದರಾಮಯ್ಯ

ಇನ್ನು ಇದರ ನಡುವೆ ಪಾದಯಾತ್ರೆಯಿಂದ ವಿಶ್ರಾಂತಿ ಪಡೆಯಲು ಸಿದ್ದರಾಮಯ್ಯ ರಾಹುಲ್ ಗಾಂಧಿಗೆ ತಿಳಿಸಿ ತೆರಳಿದ್ದಾರೆ. ಪ್ರತಿದಿನ ಬೆಳಗ್ಗೆ & ಸಂಜೆ ಸಿದ್ದರಾಮಯ್ಯ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ. ಇದೇ ವೇಳೆ ಪೇಸಿಎಂ ಅಭಿಯಾನಕ್ಕೆ ಮಠಾಧೀಶರ ವಿರೋಧ ವಿಚಾರಕ್ಕೆ ಟಿವಿ9ಗೆ ಮಾತನಾಡಿದ ಸಿದ್ದರಾಮಯ್ಯ, ಭ್ರಷ್ಟಾಚಾರಕ್ಕೆ ಜಾತಿಯ ಬಣ್ಣ ಹಚ್ಚುವುದು ತಪ್ಪು. ಭ್ರಷ್ಟಾಚಾರಕ್ಕೆ ಜಾತಿ ಇದೆಯಾ? ನನ್ನ ಜಾತಿಯವರು ಭ್ರಷ್ಟಾಚಾರ ಮಾಡಿ ಅಂತ ಹೇಳಿಕೊಟ್ಟಿದ್ದಾರಾ. ಅಥವಾ ನಾನು ಭ್ರಷ್ಟಾಚಾರ ಮಾಡಿದರೆ ನನ್ನ ಜಾತಿಯವರೆಲ್ಲ ಭ್ರಷ್ಟ ಅನ್ನೋಕಾಗತ್ತಾ? ಮೋದಿ ಏನು ಹೇಳ್ತಾರೆ‌ ಖಾವೂಂಗಾ ನಾ ಖಾನೆ ದೂಂಗಾ. ಈಗ ಇವರು ಮಾಡಿದ ಭ್ರಷ್ಟಾಚಾರ ಸಮರ್ಥನೆ ಮಾಡಿಕೊಳ್ತಾರಾ? ಅತಿ ಕೆಟ್ಟ ರಾಜಕಾರಣ ಮಾಡುವವರು ಮಾಡೋದು ಇದು ಎಂದರು. ಹಾಗೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಎಐಸಿಸಿ ಅಧ್ಯಕ್ಷರಾಗುವ ಎಲ್ಲ ಅರ್ಹತೆ ಇದೆ. ಎಲ್ಲ ಸಮಾಜದ ಬಗ್ಗೆಯೂ ಅರಿವು ಇರುವವರು ಅವರು. 50 ವರ್ಷ ಕಾಂಗ್ರೆಸ್ ನಲ್ಲಿಯೇ ಇದ್ದವರು. ಸಮಾಜದ ಆಗುಹೋಗುಗಳ ಬಗ್ಗೆ ಖರ್ಗೆಯವರಿಗೆ ಬಹಳ ಚೆನ್ನಾಗಿ ಅರಿವಿದೆ. ಖರ್ಗೆ ಅಧ್ಯಕ್ಷರಾಗುವುದನ್ನು ನಾನು ಸ್ವಾಗತ ಮಾಡ್ತೇನೆ ಎಂದರು.

ಎರಡನೇ ದಿನದ ಭಾರತ್ ಜೋಡೋ ಪಾದಯಾತ್ರೆ ರೂಟ್

ತೊಂಡವಾಡಿ ಗೇಟ್ ಗುಂಡ್ಲುಪೇಟೆಯಿಂದ ಪಾದಯಾತ್ರೆ ಪ್ರಾರಂಭವಾಗಿ ಬೆಳಗ್ಗೆ 11.00ಕ್ಕೆ ವಿರಾಮ ಸಿಗಲಿದೆ. ಮಧ್ಯಾಹ್ನ 4.00 ಗಂಟೆಗೆ ಕಳಲೆ ಗೇಟ್ ನಿಂದ ಪಾದಯಾತ್ರೆ ಪ್ರಾರಂಭವಾಗಿ ಸಂಜೆ 7.00ಕ್ಕೆ ಚಿಕ್ಕಯ್ಯನ ಛತ್ರ ಗೇಟ್ ಬಳಿ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ. ತಾಂಡವಪುರ ಎಂಐಟಿ ಕಾಲೇಜ್ ಗೇಟ್ ಬಳಿ ಕಾಂಗ್ರೆಸ್ ನಾಯಕರು ರಾತ್ರಿ ಹಾಲ್ಟ್ ಆಗಲಿದ್ದಾರೆ. ಇದನ್ನೂ ಓದಿ: ನಟ ಯಶ್​ ಯಶೋಮಾರ್ಗದ ಕನಸು ನನಸು: ಕೋಡಿ ತುಂಬಿ ಹರಿದ ತಲ್ಲೂರು ಕೆರೆ, ರೈತರ ಮೊಗದಲ್ಲಿ ಮಂದಹಾಸ

23 ದಿನದ ಹಿಂದೆ ತಮಿಳುನಾಡಿನಿಂದ ಆರಂಭವಾಗಿದ್ದ ಯಾತ್ರೆ, ಕೇರಳದಲ್ಲಿ 355 ಕಿಲೋ ಮೀಟರ್‌ ಕ್ರಮಿಸಿ ಸೆಂ.30ರಂದು ಕರ್ನಾಟಕಕ್ಕೆ ಎಂಟ್ರಿಯಾಗಿತ್ತು. ನಿನ್ನೆ ಚಾಮರಾಜನಗರ ಜಿಲ್ಲೆಯಲ್ಲಿ ಪಾದಯಾತ್ರೆ ಆಗಿದ್ದು ಇಂದು ಮೈಸೂರಿನಲ್ಲಿ ಪಾದಯಾತ್ರೆ ನಡೆಯುತ್ತಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:52 am, Sat, 1 October 22

ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್