AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಡಾಡಲು ದೂರ ಆಗುತ್ತೆ ಎಂದ ಸಿದ್ದರಾಮಯ್ಯ: ಹೆಲಿಕಾಪ್ಟರ್ ಗಿಫ್ಟ್​ ನೀಡಲು ಮುಂದಾದ ಬಾದಾಮಿ ಜನ

ಶಾಸಕರಾದವರು 15 ದಿನಕ್ಕೊಮ್ಮೆಯಾದರೂ ಕ್ಷೇತ್ರಕ್ಕೆ ಬರಬೇಕು. ಹೀಗಾಗಿ ಬಾದಾಮಿ ಕ್ಷೇತ್ರದ ಜನರು ಹೆಲಿಕಾಪ್ಟರ್ ಕೊಡಿಸಲು ತೀರ್ಮಾನಿಸಿದ್ದು, ಚಂದಾ ವಸೂಲಿ ಕೂಡ ಮಾಡುತ್ತಿದ್ದಾರೆ.

ಓಡಾಡಲು ದೂರ ಆಗುತ್ತೆ ಎಂದ ಸಿದ್ದರಾಮಯ್ಯ: ಹೆಲಿಕಾಪ್ಟರ್ ಗಿಫ್ಟ್​ ನೀಡಲು ಮುಂದಾದ ಬಾದಾಮಿ ಜನ
ಮಾಜಿ ಸಿಎಂ ಸಿದ್ದರಾಮಯ್ಯ
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Dec 18, 2022 | 6:11 PM

Share

ಮೈಸೂರು: ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರದ ಜನರಿಂದ ಸಿದ್ದರಾಮಯ್ಯ (Siddaramaiah)ಗೆ ಹೆಲಿಕಾಪ್ಟರ್ ಗಿಫ್ಟ್ (helicopter gift)​ ನೀಡಲು ಜನರು ಚಂದಾ ವಸೂಲಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ಜಮೀರ್ ಅಹ್ಮದ್‌ ಖಾನ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ 60 ವರ್ಷದಲ್ಲಿ ಆಗದಷ್ಟು ಅಭಿವೃದ್ಧಿ 5 ವರ್ಷದಲ್ಲಿ ಆಗಿದೆ. ಹೀಗಾಗಿ ಸಿದ್ದರಾಮಯ್ಯ ಬಾದಾಮಿಯಲ್ಲೇ ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ. ಶಾಸಕರಾದವರು 15 ದಿನಕ್ಕೊಮ್ಮೆಯಾದರೂ ಕ್ಷೇತ್ರಕ್ಕೆ ಬರಬೇಕು. ನನಗೆ ಕ್ಷೇತ್ರಕ್ಕೆ ಬರಲು ಆಗಲ್ಲವೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಹೀಗಾಗಿ ಹೆಲಿಕಾಪ್ಟರ್ ಕೊಡಿಸಲು ಕ್ಷೇತ್ರದ ಜನ ತೀರ್ಮಾನಿಸಿದ್ದಾರೆ. 25 ಕೋಟಿ ಆಗಲಿ ಹೆಲಿಕಾಪ್ಟರ್‌ ಕೊಡಿಸಬೇಕು ಅಂದುಕೊಂಡಿದ್ದಾರೆ. ಇದಕ್ಕಾಗಿ ಬಾದಾಮಿ ತಾಲೂಕಿನ ಜನ ಚಂದಾ ವಸೂಲಿ ಮಾಡುತ್ತಿದ್ದಾರೆ ಎಂದು ಜಮೀರ್ ಅಹ್ಮದ್‌ ಖಾನ್ ತಿಳಿಸಿದರು.

2. ಪರೋಕ್ಷವಾಗಿ ಶಾಸಕ ತನ್ವೀರ್ ಸೇಠ್​ಗೆ ಟಾಂಗ್ ಕೊಟ್ಟ ಜಮೀರ್ ಅಹಮದ ಖಾನ್ 

ಹೈಕಮಾಂಡ್ ಹೇಳಿದರೆ ನಾನು ಎನ್.ಆರ್.ಕ್ಷೇತ್ರದಲ್ಲಿ ಸ್ವರ್ಧೆ ಮಾಡಲೇಬೇಕು ಎಂದು ಪರೋಕ್ಷವಾಗಿ ಶಾಸಕ ತನ್ವೀರ್ ಸೇಠ್​ಗೆ ಜಮೀರ್ ಅಹಮದ ಖಾನ್ ಟಾಂಗ್ ನೀಡಿದರು. ನಾನು ಈಗ ಚಾಮರಾಜಪೇಟೆ ಶಾಸಕ. ಮುಂದಿನ ಚುನಾವಣೆಯಲ್ಲಿ ಹೈಕಮಾಂಡ್ ಇಲ್ಲಿ ಸ್ಪರ್ಧೆ ಬೇಡ ಅಂದರೆ ನಾನು ಏನು ಮಾಡೋದಕ್ಕೆ ಆಗಲ್ಲ. ಒಂದು ವೇಳೆ ಮೈಸೂರಿನ ಎನ್.ಆರ್.ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಅಂದರೆ ನಾನು ಸ್ಪರ್ಧೆ ಮಾಡಲೇಬೇಕು ಎಂದು ಹೇಳಿದರು.

ಇದನ್ನೂ ಓದಿ: Kolar: ಹಾವು ಮುಂಗುಸಿಯಂತ್ತಿದ್ದವರು ಚುನಾವಣೆ ಹತ್ತಿರವಾಗುತ್ತಿದ್ದಂತೆ ಒಂದಾಗುವ ಮೂನ್ಸೂಚನೆ ಕೊಟ್ಟ ಕೈ ನಾಯಕರು

3. ಮುಸ್ಲಿಂ ಮೇಲೆ ಪ್ರೀತಿ ಇದ್ದರೆ ನನ್ನನ್ನೇ ಸಿಎಂ ಅಭ್ಯರ್ಥಿ ಅಂತ ಘೋಷಿಸಲಿ       

ಎಚ್.ಡಿ.ಕುಮಾರಸ್ವಾಮಿಯಿಂದ ಮುಸ್ಲಿಂ ಮುಖ್ಯಮಂತ್ರಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕುಮಾರಸ್ವಾಮಿ ಮುಸಲ್ಮಾನರನ್ನೇ ಸಿಎಂ ಮಾಡುತ್ತೇವೆ ಅಂತ ಘೋಷಣೆ ಮಾಡಬೇಕು. ಅವರಿಗೆ ಮುಸ್ಲಿಂ ಮೇಲೆ ಪ್ರೀತಿ ಇದ್ದರೆ ಸಿ.ಎಂ.ಇಬ್ರಾಹಿಂ ಅವರನ್ನೇ ಸಿಎಂ ಅಭ್ಯರ್ಥಿ ಅಂತ ಘೋಷಿಸಲಿ. ಜೆಡಿಎಸ್​ಗೆ 18, 20, 23 ಸ್ಥಾನ ಬರುತ್ತದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಅವರಿಗೆ 100 ಸೀಟ್ ಬರೋದಕ್ಕೆ ಸಾಧ್ಯವಿಲ್ಲ. ಮುಸ್ಲಿಂ ಮತ ಸೆಳಯಲು ಈ ರೀತಿಯ ಹೇಳಿಕೆ‌ ನೀಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಮತ್ತೊಂದು ಕ್ಷೇತ್ರದ ವರದಿ ತರಿಸಿಕೊಂಡ ಸಿದ್ದರಾಮಯ್ಯಗೆ ಆಪ್ತರಿಂದ ಮಹತ್ವದ ಸಲಹೆ: ಕೋಲಾರದಿಂದ ವಿಮುಖರಾದ್ರಾ ಸಿದ್ದರಾಮಯ್ಯ?

4. ನನ್ನ ಬೆಂಬಲಿಗರಿಗೆ ನಾನು ಟಿಕೆಟ್ ಕೇಳಿದ್ದೇನೆ

ನನ್ನ ಬೆಂಬಲಿಗರಿಗೆ ನಾನು ಟಿಕೆಟ್ ಕೇಳಿದ್ದೇನೆ. ಸುಮಾರು 24 ಮಂದಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೇನೆ‌. ನಾನು ಸಹ ಕಾಂಗ್ರೆಸ್​ನಲ್ಲಿ ಪ್ರಬಲ ನಾಯಕ. ನನಗೂ ಆಪ್ತರು ಟಿಕೆಟ್ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ ಈ ವಿಚಾರವನ್ನು ನಾನು ಸಹ ಹೈಕಮಾಂಡ್​​ಗೆ ತಿಳಿಸಿದ್ದೇನೆ. ಹೈಕಮಾಂಡ್ ತೆಗೆದುಕೊಳ್ಳಲು ನಿರ್ಧಾರಕ್ಕೆ ನಾನು ಬದ್ಧ ಎಂದು ಹೇಳಿದರು.

5. 224 ಕ್ಷೇತ್ರದಿಂದಲೂ ಸಿದ್ದರಾಮಯ್ಯಗೆ ಒತ್ತಡವಿದೆ

ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದು, 224 ಕ್ಷೇತ್ರದಿಂದಲೂ ಸಿದ್ದರಾಮಯ್ಯಗೆ ಒತ್ತಡವಿದೆ. ನಾನು ಸಹ ಚಾಮರಾಜಪೇಟೆಗೆ ಬನ್ನಿ ಅಂತ ಹೇಳುತ್ತಿದ್ದೇನೆ. ಅವರು ಇನ್ನೂ ಎಲ್ಲಿ ಸ್ಪರ್ಧೆ ಮಾಡಬೇಕು ಅಂತ ಸಿದ್ಧತೆ ನಡೆಸಿಲ್ಲ. ಬಾದಾಮಿಯಲ್ಲಿ ನಾನು ಸಹ ಪ್ರವಾಸ ಮಾಡಿ ಜನರ ಜತೆ ಮಾತನಾಡಿದ್ದೇನೆ. ಅಲ್ಲಿ ದಾರಿಯುದ್ದಕ್ಕೂ ಜನರು ಸಿದ್ದರಾಮಯ್ಯ ಅವರೇ ಬರಬೇಕು ಅನ್ನುತ್ತಿದ್ದಾರೆ. ನಮ್ಮ‌ ಕ್ಷೇತ್ರ ‌ನಾಲ್ಕು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಇಷ್ಟು ವರ್ಷದಲ್ಲಿ ಆಗದ ಅಭಿವೃದ್ಧಿ ನಾಲ್ಕು ವರ್ಷದಲ್ಲಿ ಆಗಿದೆ ಅಂತಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.