AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಜೆಡಿಎಸ್ ಆಗ್ರಹ; ಧೈರ್ಯ ಇದ್ರೆ ರೋಹಿಣಿರನ್ನು ಮತ್ತೆ ಡಿಸಿ ಮಾಡಿ ಎಂದ ವಾಟಾಳ್ ನಾಗರಾಜ್

Mysuru News: ಮೈಸೂರು ಡಿಸಿ ಆಗಿದ್ದಾಗ ರೋಹಿಣಿ ಕಿಕ್​ಬ್ಯಾಕ್ ಪಡೆದಿದ್ದಾರೆ. 6 ಕೋಟಿ ರೂಪಾಯಿ ಕಿಕ್​ಬ್ಯಾಕ್​ ಪಡೆದಿದ್ದಾರೆಂದು ಜೆಡಿಎಸ್ ಆರೋಪ ಮಾಡಿದೆ. ಬಟ್ಟೆ ಬ್ಯಾಗ್​ ಖರೀದಿ ಹಣ ಬಿಡುಗಡೆ ಮಾಡದಂತೆ ಒತ್ತಾಯ ಕೇಳಿಬಂದಿದೆ.

ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಜೆಡಿಎಸ್ ಆಗ್ರಹ; ಧೈರ್ಯ ಇದ್ರೆ ರೋಹಿಣಿರನ್ನು ಮತ್ತೆ ಡಿಸಿ ಮಾಡಿ ಎಂದ ವಾಟಾಳ್ ನಾಗರಾಜ್
ರೋಹಿಣಿ ಸಿಂಧೂರಿ
TV9 Web
| Updated By: ganapathi bhat|

Updated on: Sep 08, 2021 | 5:15 PM

Share

ಮೈಸೂರು: ಬಟ್ಟೆ, ಬ್ಯಾಗ್ ಖರೀದಿಯಲ್ಲಿ ಸಿಂಧೂರಿಗೆ ಕಿಕ್​ಬ್ಯಾಕ್​ ಆರೋಪಕ್ಕೆ ಸಂಬಂಧಿಸಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ. ಸಚಿವ ಎಸ್.ಟಿ. ಸೋಮಶೇಖರ್​ಗೆ ಜೆಡಿಎಸ್​ನಿಂದ ಮುತ್ತಿಗೆ ಹಾಕಲಾಗಿದೆ. ಮೈಸೂರು ಜಿಲ್ಲಾ ಪಂಚಾಯತ್ ಕಚೇರಿ ಬಳಿ ಎಸ್​ಟಿ ಸೋಮಶೇಖರ್​​ಗೆ ಮುತ್ತಿಗೆ ಹಾಕಲಾಗಿದೆ. ಮೈಸೂರು ಡಿಸಿ ಆಗಿದ್ದಾಗ ರೋಹಿಣಿ ಕಿಕ್​ಬ್ಯಾಕ್ ಪಡೆದಿದ್ದಾರೆ. 6 ಕೋಟಿ ರೂಪಾಯಿ ಕಿಕ್​ಬ್ಯಾಕ್​ ಪಡೆದಿದ್ದಾರೆಂದು ಜೆಡಿಎಸ್ ಆರೋಪ ಮಾಡಿದೆ. ಬಟ್ಟೆ ಬ್ಯಾಗ್​ ಖರೀದಿ ಹಣ ಬಿಡುಗಡೆ ಮಾಡದಂತೆ ಒತ್ತಾಯ ಕೇಳಿಬಂದಿದೆ. ಧರಣಿ ನಿರತರ ಮನವಿಯನ್ನು ಸಚಿವ ಸೋಮಶೇಖರ್​ ಸ್ವೀಕರಿಸಿದ್ದಾರೆ.

ಸಾ.ರಾ. ಮಹೇಶ್, ರೋಹಿಣಿ ಸಿಂಧೂರಿ ಜಟಾಪಟಿ ವಿಚಾರವಾಗಿ ಸರ್ಕಾರಕ್ಕೆ ಧೈರ್ಯ ಇದ್ರೆ ರೋಹಿಣಿರನ್ನ ಮತ್ತೆ ಡಿಸಿ ಮಾಡಿ. ರೋಹಿಣಿ ಸಿಂಧೂರಿಯವರನ್ನ ಮತ್ತೆ ಮೈಸೂರು ಜಿಲ್ಲಾಧಿಕಾರಿ ಮಾಡಿ ಎಂದು ಮೈಸೂರಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳು ಪ್ರಾಮಾಣಿಕರಾಗಿದ್ದರೆ ತನಿಖೆಗೆ ನೇಮಿಸಿ. ಭೂ ಒತ್ತುವರಿ ತನಿಖೆಗೆ ಸಿಂಧೂರಿಯವರನ್ನ ನೇಮಿಸಬೇಕು. ರೋಹಿಣಿ ಸಿಂಧೂರಿ ರಾಜ್ಯದ ದಕ್ಷ ಅಧಿಕಾರಿ ಎಂದು ವಾಟಾಳ್​​ ಹೇಳಿದ್ದಾರೆ.

ಸರಳವಾಗಿ ಮೈಸೂರು ದಸರಾ ಆಚರಣೆಗೆ ನಿರ್ಧಾರ ಕೈಗೊಂಡಿರುವ ಬಗ್ಗೆ ವಾಟಾಳ್ ನಾಗರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಇದರಿಂದ ಮೈಸೂರಿನ ಇತಿಹಾಸ ಮರೆಯಾಗಿ ಹೋಗುತ್ತೆ. ಬನ್ನಿಮಂಟಪ ಹೂ, ತರಕಾರಿ ಮಾರಲು ಕೊಡಬೇಕಾಗುತ್ತೆ. ಅದ್ಧೂರಿ ದಸರಾ ನಿಲ್ಲಿಸುತ್ತಿರುವುದು ಅಧಿಕಾರಿಗಳು ಎಂದು ಕಿಡಿ ಕಾರಿದ್ದಾರೆ. ಸರ್ಕಾರವನ್ನು ಹೆದರಿಸಿ ಸರಳ ದಸರಾ ಮಾಡಿಸುತ್ತಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳ ಮಾತು ಕೇಳಬಾರದಿತ್ತು. ಇದು ಸರ್ಕಾರಕ್ಕೆ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಅಗೌರವ‌. ಅದ್ಧೂರಿ ದಸರಾ ಕೈಬಿಟ್ಟಿರುವುದು ಖಂಡನೀಯ ಎಂದು ವಾಟಾಳ್ ತಿಳಿಸಿದ್ದಾರೆ.

ಮೈಸೂರು ದಸರಾ ಸಾಮಾನ್ಯ ಜನರ ದಸರಾ ಆಗಬೇಕು. ಇಡೀ ಮೈಸೂರು ನಗರಕ್ಕೆ ಸ್ಯಾನಿಟೈಸ್ ಮಾಡಿ. ಎಲ್ಲರಿಗೂ ಕೊರೊನಾ ಸೋಂಕು ಬಗ್ಗೆ ಜಾಗೃತಿ ಮೂಡಿಸಿ. ಅದ್ಧೂರಿಯಾಗಿ ಮೈಸೂರು ದಸರಾ ಆಚರಿಸುವಂತೆ ಮನವಿ ಮಾಡಿದ್ದಾರೆ. ದಸರಾ‌ ಮಹೋತ್ಸವಕ್ಕೆ ತನ್ನದೇ ಆದ ಇತಿಹಾಸ ಇದೆ. ಆ ಇತಿಹಾಸಕ್ಕೆ ಅಪಚಾರ ಮಾಡಬೇಡಿ ಎಂದು ರಾಜ್ಯ ಬಿಜೆಪಿ ಸರ್ಕಾರಕ್ಕೆ ವಾಟಾಳ್ ನಾಗರಾಜ್ ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ಆರೋಪಕ್ಕೆ ಮರುಜೀವ; ಸಾ.ರಾ ಮಹೇಶ್ ಒಡೆತನದ ಜಾಗಗಳ ಮರು ಸರ್ವೇ ಮಾಡಲು ಆದೇಶ

ಇದನ್ನೂ ಓದಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿಕ್​ಬ್ಯಾಕ್ ಅರೋಪ; ಅಮಾನತಿಗೆ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಆಗ್ರಹ