ಮೈಸೂರು ಅರಮನೆ ನೋಡಲು ಕ್ಯೂನಲ್ಲಿ ನಿಲ್ಲಬೇಕಿಲ್ಲ; ವಾಟ್ಸಾಪ್ ನಲ್ಲೇ ಸಿಗುತ್ತೆ ಟಿಕೆಟ್

ಮೈಸೂರು ಅರಮನೆ ಬೆಳಗ್ಗೆ 10ರಿಂದ ಸಂಜೆ 6 ಗಂಟೆ ವರೆಗೂ ಪ್ರವಾಸಿಗರಿಗೆ ತೆರೆದಿರುತ್ತೆ. ಆದರೆ ಇಲ್ಲಿ ಬಂದು ಟಿಕೆಟ್ ಖರೀದಿಸಿ ಅರಮನೆ ನೋಡುವುದು ಡೊಡ್ಡ ಸವಾಲಾಗಿತ್ತು. ಸದ್ಯ ಇದೀಗ ವಾಟ್ಸಾಪ್ ಮೂಲಕವೇ ಟಿಕೆಟ್ ಖರೀದಿಸಬಹುದು. ಅಲ್ಲದೆ ವಾಟ್ಸಾಪ್​​ನಲ್ಲಿ ಖರೀದಿಸಿದ ಟಿಕೆಟ್ 5 ದಿನದವರೆಗೆ ಮಾನ್ಯತೆ ಇರುತ್ತದೆ. ಇನ್ನು ಮೈಸೂರು ಝೂಗೂ ವಾಟ್ಸಾಪ್ ಟಿಕೆಟ್ ಲಭ್ಯವಿದೆ.

ಮೈಸೂರು ಅರಮನೆ ನೋಡಲು ಕ್ಯೂನಲ್ಲಿ ನಿಲ್ಲಬೇಕಿಲ್ಲ; ವಾಟ್ಸಾಪ್ ನಲ್ಲೇ ಸಿಗುತ್ತೆ ಟಿಕೆಟ್
ಮೈಸೂರು ಅರಮನೆ
Edited By:

Updated on: Aug 14, 2024 | 11:25 AM

ಮೈಸೂರು, ಆಗಸ್ಟ್​.14: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ (Mysuru Dasara) ಮಹೋತ್ಸವ ಅ.3 ರಿಂದ ಅ.12 ರ ವರೆಗೆ ಜರುಗಲಿದೆ. ಇದಕ್ಕಾಗಿ ಈಗಾಗಲೇ ತಯಾರಿ ಶುರುವಾಗಿದೆ. ಇನ್ನು ಮತ್ತೊಂದೆಡೆ ಇಂದಿನಿಂದ ಮೈಸೂರು ಅರಮನೆ ವೀಕ್ಷಣಗೆ ವಾಟ್ಸಾಪ್​​ ಟಿಕೆಟ್ ನೀಡಲಾಗುತ್ತಿದೆ. ಮೈಸೂರು ಅರಮನೆ (Mysuru Palace) ನೋಡಲು ಬರುವ ಪ್ರವಾಸಿಗರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ EDCS ಮೊಬೈಲ್ ಒನ್ ಯೋಜನೆಯ ಮೂಲಕ ಟಿಕೆಟ್ ಖರೀದಿಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ಪ್ರವಾಸಿಗರು ಸರ್ಕಾರದ ಇಡಿಸಿಎಸ್ ಮೊಬೈಲ್ ಒನ್ ಯೋಜನೆಯ ಮೂಲಕ ಮೊಬೈಲ್​ನಲ್ಲೆ ಅರಮನೆ ವೀಕ್ಷಣೆಗೆ ಟಿಕೆಟ್ ಖರೀದಿ ಮಾಡಬಹುದು. ವಾಟ್ಸಾಪ್​​ನಲ್ಲಿ 8884160088 ನಂಬರ್​ಗೆ ಎಜಿ ಎಂದು ಟೈಪ್ ಮಾಡಿ ಸಂದೇಶ ಕಳಿಸುವ ಮೂಲಕ ಟಿಕೆಟ್ ಪಡೆಯಬಹುದು. ವಾಟ್ಸಾಪ್​​ನಲ್ಲಿ ಖರೀದಿಸಿದ ಟಿಕೆಟ್ 5 ದಿನದವರೆಗೆ ಮಾನ್ಯತೆ ಇರುತ್ತದೆ. ಇದರಿಂದ ಸರತಿ ಸಾಲಿನಲ್ಲಿ ಬಂದು ಟಿಕೆಟ್ ಖರೀದಿಸುವ ಸಮಯ ಸೇವ್ ಆಗಲಿದೆ.

ಇದನ್ನೂ ಓದಿ: ಬೆಂಗಳೂರು: ಭಾರಿ ಮಳೆಯ ಮುನ್ಸೂಚನೆ, ವರ್ಕ್ ಫ್ರಂ ಹೋಮ್ ನೀಡುವಂತೆ ಕಂಪನಿಗಳಿಗೆ ಪೊಲೀಸರ ಮನವಿ!

ಮೈಸೂರು ದಸರಾಗೆ ಕ್ಷಣಗಣನೆ

ಅಕ್ಟೋಬರ್‌ 3 ರಂದು ದಸರಾ ಉದ್ಘಾಟನೆಯಾಗಲಿದ್ದು ಅ.12 ರಂದು ಜಂಬೂಸವಾರಿ ನಡೆಯಲಿದೆ. ಈ ಬಾರಿ ದಸರಾವನ್ನ ವಿಜೃಂಭಣೆಯಿಂದ, ಆಕರ್ಷಣೆಯಾಗಿ, ಅರ್ಥಪೂರ್ಣವಾಗಿ ಆಚರಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಇನ್ನು ಈ ಬಾರಿ ದೀಪಾಲಂಕಾರ 21 ದಿನಗಳ ಕಾಲ ಇರಲಿದೆ‌. ಜಂಬೂಸವಾರಿ ಮುಗಿದ ಬಳಿಕವೂ 11 ದಿನ ದೀಪಾಲಂಕಾರ ಇರಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಆಕರ್ಷಿತವಾಗಿ ಅಲಂಕಾರ ಮಾಡಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಪ್ರವಾಸಿಗರು ಬಂದಾಗ ಮಾರ್ಗದರ್ಶನ ಮಾಡಲು ಸೆಕ್ಯುರಿಟಿ, ಟ್ರಾಫಿಕ್ ಮ್ಯಾನೇಜ್ಮೆಂಟ್ ಮಾಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಗೋಲ್ಡ್ ಕಾರ್ಡ್ ವ್ಯವಸ್ಥೆ, ಉಚಿತವಾಗಿ ದಸರಾ ನೋಡಲು ಬರುವವರಿಗೆ ವ್ಯವಸ್ಥೆ ಬಗ್ಗೆ ತಯಾರಿ ನಡೆಸಲಾಗುತ್ತಿದೆ. ಇದು ನಾಡಹಬ್ಬ, ಜನಪರ ಉತ್ಸವದಂತೆ ಇರಬೇಕು. ಜನರ ಉತ್ಸವದಂತೆ ಆಚರಣೆ ಮಾಡ್ತೀವಿ. ದಸರಾ ವಿಜೃಂಭಣೆಯಿಂದ ಆಚರಣೆಗೆ ಎಷ್ಟು ಹಣ ಬೇಕೋ ಅಷ್ಟು ಕೊಡ್ತೀವಿ. ಗೋಲ್ಡ್ ಕಾರ್ಡ್ ದುರುಪಯೋಗ ಆಗದಂತೆ ನಾವು ಈ ಬಾರಿ ಕ್ರಮವಹಿಸುತ್ತೇವೆ‌ ಎಂದು ಸಚಿವ ಮಹದೇವಪ್ಪ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Follow Us