ಕಟೀಲ್ ನಕಲಿ ಆಡಿಯೋ ಹಿಂದಿರುವ ಕಾಣದ ಕೈ ಕಾಂಗ್ರೆಸ್ ಮಹಾ ನಾಯಕನದ್ದೋ, ಮೀರ್ ಸಾದಿಕ್‌ನದ್ದೋ? ಕರ್ನಾಟಕ ಬಿಜೆಪಿ ಟ್ವೀಟ್‌

Nalin Kumar Kateel Audio Episode: ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ಸೃಷ್ಟಿಯಾದ ನಕಲಿ ಆಡಿಯೋ ಹಿಂದಿರುವ ಹಸ್ತ, ಕಾಂಗ್ರೆಸ್ ಪಕ್ಷದ ಮಹಾನಾಯಕನದ್ದೋ ಅಥವಾ ಮೀರ್ ಸಾದಿಕ್‌ನದ್ದೋ? ಮಹಾನಾಯಕನ ಪ್ರಭಾವ ಕಡಿಮೆ ಮಾಡಲು ಮತ್ತು ದೆಹಲಿಯ ಮಹಾನಾಯಕಿಯನ್ನು ಮೆಚ್ಚಿಸಲು ಮೀರ್‌ ಸಾದಿಕ್‌ನಿಂದ ಈ ಆಡಿಯೋ ತಂತ್ರವೇ? - ಕರ್ನಾಟಕ ಬಿಜೆಪಿ ಟ್ವೀಟ್‌

ಕಟೀಲ್ ನಕಲಿ ಆಡಿಯೋ ಹಿಂದಿರುವ ಕಾಣದ ಕೈ ಕಾಂಗ್ರೆಸ್ ಮಹಾ ನಾಯಕನದ್ದೋ, ಮೀರ್ ಸಾದಿಕ್‌ನದ್ದೋ? ಕರ್ನಾಟಕ ಬಿಜೆಪಿ ಟ್ವೀಟ್‌
ಕಟೀಲ್ ನಕಲಿ ಆಡಿಯೋ ಹಿಂದಿರುವ ಕಾಣದ ಕೈ ಕಾಂಗ್ರೆಸ್ ಮಹಾನಾಯಕನದ್ದು? ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ಬಿಜೆಪಿ
TV9kannada Web Team

| Edited By: sadhu srinath

Jul 19, 2021 | 5:20 PM

ನಾಯಕತ್ವ ಬದಲಾವಣೆ ವಿಚಾರದ ಒಂದಷ್ಟು ಟೆನ್ಷನ್ ಮಧ್ಯೆಯೇ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೆಸರಿನಲ್ಲಿ ಸೃಷ್ಟಿಯಾಗಿದೆ ಎನ್ನಲಾದ ಆಡಿಯೋ ಬಗ್ಗೆ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ಪಾಳಯ ಕಸಿವಿಸಿಗೊಂಡಿದೆ. ಆದರೆ ಇದು ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ಸೃಷ್ಟಿಯಾದ ನಕಲಿ ಆಡಿಯೋ. ಇದರ ಹಿಂದೆ ಕಾಣದ ಕೈವಾಡಗಳು ಇವೆ ಎಂದು ಆಡಿಯೋ ಹಿಂದಿರುವ ಹಸ್ತ ಕಾಂಗ್ರೆಸ್ ಮಹಾನಾಯಕನದ್ದೋ, ಅಥವಾ ಕಾಂಗ್ರೆಸ್ ಪಕ್ಷದಲ್ಲಿರುವ ಮೀರ್ ಸಾದಿಕ್‌ನದ್ದೋ? ಎಂದು ಪ್ರಶ್ನಿಸಿ ರಾಜ್ಯ ‘ಕೈ’ ನಾಯಕರ ವಿರುದ್ಧ ಟ್ವೀಟ್‌ ಮಾಡಿ BJP ಆಕ್ರೋಶ ಹೊರಹಾಕಿದೆ.

ಕರ್ನಾಟಕ ಬಿಜೆಪಿ ಟ್ವೀಟ್‌ ಸಾರಾಂಶ ಹೀಗಿದೆ:

ನಕಲಿ ದಾಖಲೆ ಸೃಷ್ಟಿಸುವವರಿಗೆ @INCKarnataka ಪಕ್ಷದಲ್ಲಿ ಉತ್ತಮವಾದ ವೇದಿಕೆ ದೊರೆಯುತ್ತದೆ. ನಕಲಿ ಸಿಡಿ ತಯಾರಿಸಿದ ನರೇಶ್ ಗೌಡನಿಗೆ ತುಮಕೂರಿನಲ್ಲಿ ಕಾಂಗ್ರೆಸ್ ಯುವ ನಾಯಕನ ಪಟ್ಟ ಕಟ್ಟಲಾಗಿದೆ. ಇದೇ ರೀತಿ, ಈ ನಕಲಿ ಆಡಿಯೋ ಜನಕನಿಗೆ ಕಾಂಗ್ರೆಸ್ ಪಕ್ಷ ಭರ್ಜರಿ ಉಡುಗೊರೆ ನೀಡಬಹುದು.

ಕಾಂಗ್ರೆಸ್ ಪಕ್ಷದಲ್ಲಿರುವ ಈ ಮೀರ್ ಸಾದಿಕ್ ಯಾರ ವಿರುದ್ಧ ಬೇಕಾದರೂ ಸಂಚು ರೂಪಿಸಬಲ್ಲ. 2013 ರ ವಿಧಾನಸಭಾ ಚುನಾವಣೆಯಲ್ಲಿ ಕೊರಟಗೆರೆಯಲ್ಲಿ‌ ದಲಿತ ನಾಯಕ ಪರಮೇಶ್ವರ್ ಅವರನ್ನು ಮೋಸದಿಂದ ಸೋಲಿಸಿದ ಈ ವ್ಯಕ್ತಿಯ ಮೀರ್ ಸಾದಿಕತನ ಎಲ್ಲಿ ಹೋಗುತ್ತದೆ?

ಮಹಾನಾಯಕನ ವಿರುದ್ಧ ತೊಡೆ ತಟ್ಟುತ್ತಿರುವ ಮೀರ್ ಸಾದಿಕ್‌ ಈಗ ಕಾಂಗ್ರೆಸ್ ಮಹಾನಾಯಕಿಯ ಮೆಚ್ಚುಗೆ ಪಡೆಯಲು ಕುತಂತ್ರದ ಮೊರೆ ಹೋಗಿದ್ದಾರೆ. ಮಹಾನಾಯಕನ ಮಟ್ಟ ಹಾಕುವುದಕ್ಕೆ ಸೆಟೆದು ನಿಂತಿರುವ ಮೀರ್‌ ಸಾದಿಕ್‌ ದೆಹಲಿ ಪ್ರವಾಸದ ಮುನ್ನಾ ದಿನ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ನಕಲಿ ಆಡಿಯೋ ಹರಿಬಿಟ್ಟಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ ಸೃಷ್ಟಿಯಾದ ನಕಲಿ ಆಡಿಯೋ ಹಿಂದಿರುವ ಹಸ್ತ, ಕಾಂಗ್ರೆಸ್ ಪಕ್ಷದ ಮಹಾನಾಯಕನದ್ದೋ ಅಥವಾ ಮೀರ್ ಸಾದಿಕ್‌ನದ್ದೋ? ಮಹಾನಾಯಕನ ಪ್ರಭಾವ ಕಡಿಮೆ ಮಾಡಲು ಮತ್ತು ದೆಹಲಿಯ ಮಹಾನಾಯಕಿಯನ್ನು ಮೆಚ್ಚಿಸಲು ಮೀರ್‌ ಸಾದಿಕ್‌ನಿಂದ ಈ ಆಡಿಯೋ ತಂತ್ರವೇ? #ಮಹಾನಾಯಕVsಮೀರ್‌ಸಾದಿಕ್‌

ಆ ಆಡಿಯೋ ನಳಿನ್ ಕುಮಾರ್ ಅವರದ್ದೇ; ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವ್ಯಂಗ್ಯ (Nalin Kumar Kateel Audio Episode Karnataka BJP tweets and suspects karnataka congress leaders hand)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada