ಬೆಂಗಳೂರು: ನಗರದ ಹೇಸರಘಟ್ಟ ರಸ್ತೆಯ ಕುಂಬಾರಹಳ್ಳಿಯ ಶ್ರೀ ಸದ್ಗುರು ಗೋಶಾಲೆಯಲ್ಲಿ ಶಿವರಾತ್ರಿ ದಿನ ಹುಟ್ಟಿದ ಕರುವಿಗೆ ನಿನ್ನೆ (ಏಪ್ರಿಲ್ 4) ನಾಮಕರಣ ಮಾಡಲಾಯಿತು. ರೈತಾಪಿ ವರ್ಗದ ಜನರಿಗೆ ಕೃಷಿ ಭೂಮಿ, ಸಾಕು ಪ್ರಾಣಿಗಳೆಂದರೆ ಒಂದು ಬಾಂಧವ್ಯ. ಅದರಲ್ಲೂ ಹಸು, ಕರುಗಳೆಂದರೆ ಅಚ್ಚುಮೆಚ್ಚು, ಅವುಗಳನ್ನ ಮನೆ ಸದಸ್ಯರಂತೆ ಕಾಣುತ್ತಾ, ಅವುಗಳಿಗೆ ಹೆಸರಿಡಿದು ಕರೆಯುವುದು ಸರ್ವೇ ಸಾಮಾನ್ಯ. ಇದೇ ರೀತಿ ಶಿವರಾತ್ರಿ ದಿನದಂದು ಜನಿಸಿದ ಕರುವಿಗೆ ಹೆಸರಿಟ್ಟು ಶಾಸ್ತ್ರೋಕ್ತವಾಗಿ ನಾಮಕರಣ ಮಾಡಿ ಕುಟುಂಬ ವರ್ಗದ ಜೊತೆಗೆ ಊರಿನವರು ಸಂಭ್ರಮಿಸಿದ್ದಾರೆ.
ಕುಂಬಾರಹಳ್ಳಿಯ ಸದಾನಂದ ಹೆಗ್ಡೆಯವರು ತಮ್ಮ ಗೋಶಾಲೆಗೆ ಗುಜರಾತ್ನಿಂದ ಗಿರ್ ತಳಿಯ ಕೃಷ್ಣ ,ರುಕ್ಮಿಣಿ ಎಂಬ ಜೋಡಿ ಹಸುಗಳನ್ನು ತಂದಿದ್ದರು. ಅವುಗಳಿಗೆ ಶಿವರಾತ್ರಿ ದಿನದಂದು ಹುಟ್ಟಿದ ಮೂರನೇ ಕರುವಿಗೆ ಇದೀಗ ನಾಮಕರಣ ನೇರವೇರಿದೆ.
ತಾಯಿ ಮಡಿಲಲ್ಲಿ ಹಾಲು ಕುಡಿಯುತ್ತಾ, ಹಣ್ಣು ತಿನ್ನುತ್ತಾ ಸಂಭ್ರಮಿಸುತ್ತಿದ್ದ ಕರುವಿಗೆ ಲಗು ಬಗೆಯಿಂದ ಮುತ್ತೈದೆಯರು ತಿಲಕ ಇಟ್ಟು ಸಿಂಗರಿಸಿದ್ದರು. ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಆರತಿ ಬೆಳಗಿ, ಕರುವಿನ ಕಿವಿಯಲ್ಲಿ ‘ಸುರಭಿ..ಸುರಭಿ’ ಎಂದು ನಾಮೋಚ್ಚರಣೆ ಮಾಡಿ ಸಂಭ್ರಮಿಸಿದರು.
ಶಿವರಾತ್ರಿ ದಿನದಂದು ಜನಿಸಿದ ಕರುವಿಗೆ ಹೆಸರಿಡುತ್ತಿರುವ ದೃಶ್ಯ
ಒಟ್ಟಾರೆ ಮೂಕ ಪ್ರಾಣಿಯೊಂದಕ್ಕೆ ತಮ್ಮ ಮಕ್ಕಳಂತೆ ನಾಮಕರಣ ಮಾಡಿದ ಪಶುಪಾಲಕರು ಊರಿನ ಜನರದೊಂದಿಗೆ ಸಂಭ್ರಮಿಸಿದರು, ಅಲ್ಲದೆ ನಾಮಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಈ ಮುದ್ದಾದ ಕರುವಿಗೆ ಹಾರೈಸುವುದರೊಂದಿಗೆ ಗೋವಿನ ಆಶಿರ್ವಾದ ಪಡೆದು ಹರ್ಷಿತರಾದರು.
(ವರದಿ: ಮೂರ್ತಿ. ಬಿ)
ಇದನ್ನೂ ಓದಿ: ಸೌಂಡ್ ಸರಿಯಾಗಿ ಕೇಳಿಸಲ್ಲ ಎಂದು ಗಲಾಟೆ ಮಾಡಿದ ‘ಯುವರತ್ನ’ ಪ್ರೇಕ್ಷಕರು; ಹಣ ಮರಳಿಸಿದ ಊರ್ವಶಿ ಥಿಯೇಟರ್ ಮಾಲೀಕರು
ಲೈಟ್ಮನ್ಗಳಿಗೆ 1 ಕೋಟಿ ಹೆಚ್ಚು ಕೊಟ್ರೂ ಸರಿ.. ಹಸುವಿನ ಕತೆ ಹೇಳಿ ನಿರ್ಮಾಪಕರಿಗೆ ಕಂಡೀಷನ್ ಹಾಕಿದ ಡಿ ಬಾಸ್ ದರ್ಶನ್!