AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಂದಿಗಿರಿಧಾಮದತ್ತ ಹರಿದು ಬಂದ ಪ್ರವಾಸಿಗರ ದಂಡು; ಜನರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸಿಬ್ಬಂದಿಗಳ ಹರಸಾಹಸ

ಮಾಸ್ಕ್ ಧರಿಸಿದ್ದಾರಾ, ಕಾರು ಬೈಕ್​ಗೆ ದಾಖಲೆಗಳು ಇವೆಯಾ ಎಂಬುವುದನ್ನು ನೋಡಿ, ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಮುಲಾಜಿಲ್ಲದೆ ದಂಡ ವಿಧಿಸಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಸಂಚಾರಿ ಠಾಣೆಯ ಪಿಎಸ್ಐ ವೇಣುಗೋಪಾಲ ಹೇಳಿದ್ದಾರೆ.

ನಂದಿಗಿರಿಧಾಮದತ್ತ ಹರಿದು ಬಂದ ಪ್ರವಾಸಿಗರ ದಂಡು; ಜನರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸಿಬ್ಬಂದಿಗಳ ಹರಸಾಹಸ
ನಂದಿಗಿರಿಧಾಮದತ್ತ ಹರಿದು ಬಂದ ಪ್ರವಾಸಿಗರ ದಂಡು
Follow us
TV9 Web
| Updated By: preethi shettigar

Updated on: Jul 11, 2021 | 8:52 AM

ಚಿಕ್ಕಬಳ್ಳಾಪುರ: ಕಳೆದ ಎರಡು ತಿಂಗಳಿಂದ ಕೊರೊನಾ ಸೋಂಕಿನ ಭೀತಿಯಲ್ಲೆ ಬದುಕುತ್ತಿದ್ದ ಜನ, ಮನೆಯಿಂದ ಆಚೆ ಕಾಲಿಡಲು ಆಗದೆ, ಮನೆಯಲ್ಲಿ ಇದ್ದು ಬೇಸರಗೊಂಡಿದ್ದರು. ಆದರೆ ಈಗ ಲಾಕ್​ಡೌನ್​ ಮುಕ್ತಾಯಗೊಂಡಿದ್ದು, ಹಲವು ಪ್ರವಾಸಿ ತಾಣಗಳು ಕೂಡ ಓಪನ್​ ಆಗಿವೆ. ಅದರಂತೆ ವಿಶ್ವವಿಖ್ಯಾತ ನಂದಿಗಿರಿಧಾಮ ಕೂಡ ಸಂಪೂರ್ಣವಾಗಿ ಓಪನ್ ಆಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಜನ ಮುಗಿಬಿದ್ದು ನಂದಿಗಿರಿಧಾಮದತ್ತ ಆಗಮಿಸಿ ಪ್ರಕೃತಿ ಸೌಂದರ್ಯದಲ್ಲಿ ಮೈಮರೆಯುತ್ತಿದ್ದಾರೆ. ಅದರಲ್ಲೂ ವಿಕೆಂಡ್​ ಆಗಿರುವುದರಿಂದ ನಂದಿಗಿರಿಧಾಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ನಂದಿಗಿರಿಧಾಮದ ರಸ್ತೆಗಳಲ್ಲಿ ಟ್ರಾಫೀಕ್ ಜಾಮ್ ಆಗಿದೆ.ಇನ್ನು ಪ್ರವಾಸಿಗರು ಸಮರ್ಪಕ ಮಾಸ್ಕ್ ಧರಿಸಿದೆ, ದೈಹಿಕ ಅಂತರ ಕಾಪಾಡದೆ ಕೊವಿಡ್​ ನಿಯಮವನ್ನು ಗಾಳಿಗೆ ತೂರಿದ್ದು, ಪ್ರವಾಸಿಗರನ್ನು ನಿಯಂತ್ರಿಸಲು ಪೊಲೀಸರು ಹಾಗೂ ಸಿಬ್ಬಂದಿಗಳು ಹರಸಾಹಸ ಪಡುವಂತಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದಲ್ಲಿ ಪ್ರಕೃತಿ ಪ್ರೀಯರಿಗೆ ಸ್ವರ್ಗವೇ ಧರೆಗಿಳಿದ ಅನುಭವವಾಗುತ್ತಿದೆ. ಕೊರೊನಾ ಎರಡನೇ ಅಲೆಯ ನಂತರ ನಂದಿಗಿರಿಧಾಮ ಇದೆ ಮೊದಲ ಬಾರಿಗೆ ಸಂಪೂರ್ಣವಾಗಿ ಓಪನ್ ಆಗಿದೆ. ಇದರಿಂದ ಬೆಳಿಗ್ಗೆ ಆರು ಗಂಟೆಯಿಂದಲೇ ಜನ ಮುಗಿಬಿದ್ದು ಗಿರಿಧಾಮದತ್ತ ಆಗಮಿಸುತ್ತಿದ್ದಾರೆ. ಆದರೆ ಮೂರನೇ ಅಲೆಯ ಭೀತಿಯನ್ನು ಮರೆತು ಇಲ್ಲಿ ಓಡಾಡುತ್ತಿರುವುದು ಮತ್ತು ಅವರನ್ನು ಮಾಸ್ಕ್​ ಹಾಕುವಂತೆ ತಿಳಿಸುವುದು ಸ್ವಲ್ಪ ಕಷ್ಟವಾಗಿದೆ ಎಂದು ನಂದಿಗಿರಿಧಾಮ ಸಿಬ್ಬಂದಿ ವೇಣು ತಿಳಿಸಿದ್ದಾರೆ.

ನಂದಿಗಿರಿಧಾಮ ಪ್ರವಾಸಿಗರ ಪ್ರವೇಶಕ್ಕೆ ಮುಕ್ತ ಅವಕಾಶ ಇರುವುದನ್ನು ಅರಿತ ಬೆಂಗಳೂರಿನ ಜನ, ಬೆಳಂಬೇಳಿಗ್ಗೆ ಕಾರುಗಳಲ್ಲಿ, ಬೈಕ್​ಗಳಲ್ಲಿ ಗಿರಿಧಾಮಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ಇಲ್ಲಿ ಟ್ರಾಫಿಕ್​ ಜಾಮ್​ ಆಗಿದ್ದು, ಚೆಕ್ ಪೋಸ್ಟ್​ನಲ್ಲಿ ಪ್ರತಿಯೊಂದು ಬೈಕ್ ಕಾರುಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಮಾಸ್ಕ್ ಧರಿಸಿದ್ದಾರಾ, ಕಾರು ಬೈಕ್​ಗೆ ದಾಖಲೆಗಳು ಇವೆಯಾ ಎಂಬುವುದನ್ನು ನೋಡಿ, ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಮುಲಾಜಿಲ್ಲದೆ ದಂಡ ವಿಧಿಸಲಾಗುತ್ತಿದೆ ಎಂದು ಚಿಕ್ಕಬಳ್ಳಾಪುರ ಸಂಚಾರಿ ಠಾಣೆಯ ಪಿಎಸ್ಐ ವೇಣುಗೋಪಾಲ ಹೇಳಿದ್ದಾರೆ.

ದೊಡ್ಡಬಳ್ಳಾಪುರ ಮೂಲದ ಪವನ್ ಎನ್ನುವ ವ್ಯಕ್ತಿ ಚಿಕ್ಕಬಳ್ಳಾಪುರದ ನಂದಿಗಿರಿಧಾಮಕ್ಕೆ ತನ್ನ ಬೈಕ್​ನಲ್ಲಿ ರೈಡ್​ಗಾಗಿ ಬಂದಿದ್ದು, ಗಿರಿಧಾಮದ ಅಂಕು ಡೊಂಕಿನ ರಸ್ತೆಯಲ್ಲಿ ಅತಿ ವೇಗವಾಗಿ ಬೈಕ್ ಚಲಿಸುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ, ತನ್ನ ಎಡಗಾಲನ್ನು ಮುರಿದುಕೊಂಡ ಪ್ರಕರಣವು ನಡೆಯಿತು. ಹೀಗಾಗಿ ಗಿರಿಧಾಮ ನೋಡುವ ಅಬ್ಬರದಲ್ಲಿ ವೇಗವಾಗಿ ಚಲಿಸುವುದು, ಮಾಸ್ಕ್​ ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಇರುವುದು ಸರಿಯಲ್ಲ. ಮೂರನೇ ಅಲೆಯ ಅಪಾಯದ ಬಗ್ಗೆ ಪ್ರತಿಯೊಬ್ಬರು ಮುನ್ನೆಚ್ಚರಿಕೆ ವಹಿಸಬೇಕು.

ಇದನ್ನೂ ಓದಿ: ನಂದಿಗಿರಿಧಾಮದ ಪ್ರಕೃತಿ ಸೌಂದರ್ಯ ಸವಿಯಲು ಬರೋ ಸವಾರರ ಬಳಿ ದುಪ್ಪಟ್ಟು ಹಣ ವಸೂಲಿ, ಗುತ್ತಿಗೆದಾರನ ಆಟಟೋಪಕ್ಕೆ ಇಲ್ವಾ ಬ್ರೇಕ್?

ಕಪ್ಪತ್ತಗುಡ್ಡ ಸೆರಗಿನಲ್ಲಿ ರೋಮಾಂಚನಕಾರಿ ಅನುಭವ ನೀಡುವ ಜಿಪ್ ಲೈನ್; ಮನಸೋತ ಪ್ರವಾಸಿಗರು

ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್
ಒಳ್ಳೆಯ ಕೆಲಸ ಮಾಡಿದವರನ್ನು ಅಭಿನಂದಿಸಲೇಬೇಕು: ಬಸನಗೌಡ ಯತ್ನಾಳ್