‘ಕ್ಷೀರ ಭಾಗ್ಯ’ ಯೋಜನೆಗೂ ದರ ಏರಿಕೆಯ ಬಿಸಿ!, ಹೆಚ್ಚುವರಿ 50 ಕೋಟಿ ರೂ. ಹೊರೆ?

ಕರ್ನಾಟಕದಲ್ಲಿ ನಂದಿನಿ ಹಾಲಿನ ದರ ಏರಿಕೆ ಬಿಸಿ ಶಾಲಾ ಮಕ್ಕಳಿಗೆ ನೀಡುವ ಹಾಲಿನ ಪುಡಿ ಕ್ಷೀರ ಭಾಗ್ಯ ಯೋಜನೆಗೂ ತಟ್ಟಿದೆ.

‘ಕ್ಷೀರ ಭಾಗ್ಯ' ಯೋಜನೆಗೂ ದರ ಏರಿಕೆಯ ಬಿಸಿ!, ಹೆಚ್ಚುವರಿ 50 ಕೋಟಿ ರೂ. ಹೊರೆ?
ಕ್ಷೀರ ಭಾಗ್ಯ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Aug 04, 2023 | 3:31 PM

ಬೆಂಗಳೂರು, (ಆಗಸ್ಟ್ 04): ರಾಜ್ಯದಲ್ಲಿ ಒಂದು ಲೀಟರ್ ಹಾಲಿನ ಮೇಲೆ ಮೂರು ರುಪಾಯಿ ಅರ್ಧ ಲೀಟರ್ ಮೇಲೆ ಎರಡು ರುಪಾಯಿ ದರ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಇದರಿಂದ ಕ್ಷೀರ ಭಾಗ್ಯ ಯೋಜನೆಗೂ ದರ ಏರಿಕೆಯ ಬಿಸಿ ತಟ್ಟಲಿದೆ. ಸದ್ಯ ಕೆಎಂಎಫ್ ಕ್ಷೀರ ಭಾಗ್ಯ ಯೋಜನೆಯ ಅಡಿಯಲ್ಲಿ ಸ್ಕೂಲ್ ಮಕ್ಕಳಿಗೆ ನೀಡುತ್ತಿರುವ ಒಂದು ಕೆಜಿ ಹಾಲಿನ ಪೌಡರ್ ಗೆ 300 ರುಪಾಯಿ ಇದ್ದು ಸದ್ಯ ಕೆಎಂಎಫ್ 74 ರುಪಾಯಿ ದರ ಹೆಚ್ಚಿಗೆ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಕ್ಷೀರಭಾಗ್ಯಕ್ಕೆ ಹೆಚ್ಚುವರಿ 50 ಕೋಟಿ ರೂ. ಹೊರೆ?

ಕ್ಷೀರ ಭಾಗ್ಯ ಯೋಜನೆಗೆ ಅಂದಾಜು ಹೆಚ್ಚುವರಿಯಾಗಿ 50 ಕೋಟಿ ರೂ. ಬೇಕಾಗಬಹುದು ‌ಎಂದು ಅಂದಾಜಿಸಲಾಗಿದೆ. ಈ ವರ್ಷದ ಮಾರ್ಚ್ ನಲ್ಲಿ ಕೆಎಂಎಫ್ ನಿಂದ ಹಾಲಿನ ಪುಡಿಯ ದರಕ್ಕೆ ಐವತ್ತು ರುಪಾಯಿ ದರ ಏರಿಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಆದರೆ ಅಂದಿನ ‌ಸರ್ಕಾರ 25 ರುಪಾಯಿ ‌ದರ ಏರಿಕೆ ಮಾಡಿತ್ತು ಈಗ ಮತ್ತೊಮ್ಮೆ ಸರ್ಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದ್ಯಂತೆ..

ಹಾಲಿನ ಪುಡಿಯ ದರವೂ ಹೆಚ್ಚಳ?

ಮಾರ್ಚ್ ನಲ್ಲಿ ಐವತ್ತು ರುಪಾಯಿ ದರ ಏರಿಕೆ ಪ್ರಸ್ತಾವನೆಯನ್ನ ತಿರಸ್ಕರಿಸಿದ್ದ ಸರ್ಕಾರ, ಈಗ ಮತ್ತೊಮ್ಮೆ ಕೆಎಂಎಫ್ 74 ರೂ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದೆ. 2023ರ ಮಾರ್ಚ್‌ನಲ್ಲಿ 25ರೂ. ಹೆಚ್ಚಳ ಮಾಡಿದ್ದ ಕೆಎಂಎಫ್ ಇದೀಗ ಮತ್ತೆ ಹೆಚ್ಚಳ ಮಾಡಿದರೆ, ಐದು ತಿಂಗಳ ಅವಧಿಯಲ್ಲಿ ಎರಡು ಬಾರಿ ಹೆಚ್ಚಿಸಿದಂತಾಗುತ್ತದೆ. 25 ರೂಪಾಯಿ ಹಾಲಿನ ಪುಡಿದರ ಹೆಚ್ಚಳ ಮಾಡಿದಾಗ 700 ಕೋಟಿ ರೂಪಾಯಿಗೆ ಬಜೆಟ್ ಹೆಚ್ಚಳವಾಗಿತ್ತು. ಆದರೆ ಮತ್ತೊಮ್ಮೆ ಮಕ್ಕಳಿಗೆ ನೀಡುತ್ತಿರುವ ಹಾಲಿನ ಪುಡಿ ದರ ವನ್ನು ಹೆಚ್ವಳ ಮಾಡಿದ್ರೆ, ಮಕ್ಕಳಿಗೆ ನೀಡುವ ಹಾಲಿನ ಪ್ರಮಾಣ ಕಡಿಮೆ ಆಗಬಹುದು ಅಂತಿದ್ದಾರೆ ಪೋಷಕರು.