KSRTC: ದಸರಾ ಪ್ರಯುಕ್ತ ಧರ್ಮಸ್ಥಳ, ಶಿವಮೊಗ್ಗ, ತಿರುಪತಿ ಸೇರಿ ವಿವಿಧೆಡೆಗೆ 1,000 ಹೆಚ್ಚುವರಿ ಕೆಎಸ್​ಆರ್​ಟಿಸಿ ಬಸ್ ಸಂಚಾರ

Navaratri Special Buses | ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಮೈಸೂರು, ಮಡಿಕೇರಿ, ದಾವಣಗೆರೆ, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್‌ ಮುಂತಾದ ಸ್ಥಳಗಳಿಗೆ ಹೆಚ್ಚುವರಿ KSRTC ಬಸ್​ಗಳು ಸಂಚರಿಸಲಿವೆ.

KSRTC: ದಸರಾ ಪ್ರಯುಕ್ತ ಧರ್ಮಸ್ಥಳ, ಶಿವಮೊಗ್ಗ, ತಿರುಪತಿ ಸೇರಿ ವಿವಿಧೆಡೆಗೆ 1,000 ಹೆಚ್ಚುವರಿ ಕೆಎಸ್​ಆರ್​ಟಿಸಿ ಬಸ್ ಸಂಚಾರ
ಕೆಎಸ್​ಆರ್​ಟಿಸಿ
Follow us
ಸುಷ್ಮಾ ಚಕ್ರೆ
|

Updated on: Oct 08, 2021 | 2:25 PM

ಬೆಂಗಳೂರು: ನವರಾತ್ರಿ ಹಬ್ಬ ಶುರುವಾಗಿರುವುದರಿಂದ ಮುಂದಿನ ವಾರ ಸಾಲು ಸಾಲು ರಜೆಗಳಿವೆ. ಆಯುಧಪೂಜೆ, ವಿಜಯದಶಮಿ, ಶನಿವಾರ, ಭಾನುವಾರ, ಈದ್​ ಮಿಲಾದ್​ ಎಲ್ಲವೂ ಸಾಲು ಸಾಲಾಗಿ ಬಂದಿರುವುದರಿಂದ ಜನರು ತಮ್ಮ ಊರುಗಳಿಗೆ, ಪ್ರವಾಸಕ್ಕೆ ಹೋಗುವ ತಯಾರಿಯಲ್ಲಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಕೆಎಸ್​ಆರ್​ಟಿಯಿಂದ 1,000 ಹೆಚ್ಚುವರಿ ಬಸ್​ಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ದಸರಾ ಹಬ್ಬದ ಹಿನ್ನೆಲೆಯಲ್ಲಿ ಅ. 13ರಿಂದ ಅ. 21ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯದ ಸ್ಥಳಗಳಿಗೆ 1000 ಹೆಚ್ಚುವರಿ ಕೆಎಸ್​ಆರ್​ಟಿಸಿ ಬಸ್‌ ಸಂಚಾರ ಮಾಡಲಿದೆ. ಕರ್ನಾಟಕದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಮೈಸೂರು, ಮಡಿಕೇರಿ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್‌ ಮುಂತಾದ ಸ್ಥಳಗಳಿಗೆ ಹೆಚ್ಚುವರಿ KSRTC ಬಸ್​ಗಳು ಸಂಚರಿಸಲಿವೆ.

ಹೊರರಾಜ್ಯದ ತಿರುಪತಿ, ವಿಜಯವಾಡ, ಹೈದರಾಬಾದ್‌, ತಿರುವನಂತಪುರಂ, ಕೊಟ್ಟಾಯಂ, ಚೆನ್ನೈ, ಕೊಯಮತ್ತೂರು, ಪೂನಾ, ಪಣಜಿ ಮೊದಲಾದ ಸ್ಥಳಗಳಿಗೆ ಕೆಎಸ್​ಆರ್​ಟಿಸಿ ಹೆಚ್ಚುವರಿ ಬಸ್‌ ವ್ಯವಸ್ಥೆ ಮಾಡಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಸಂಚರಿಸುವ ಈ ಹೆಚ್ಚುವರಿ ಬಸ್‌ಗಳ ಪ್ರಯಾಣ ದರದಲ್ಲಿ ಯಾವುದೇ ಹೆಚ್ಚಳ ಇರುವುದಿಲ್ಲ.

ಬಸ್​ಗಳಲ್ಲಿ ಪ್ರಯಾಣಿಸುವವರು ಕರ್ನಾಟಕ ರಸ್ತೆ ಸಾರಿಗೆ ನಿಗಮದ (KSRTC) ಅಧಿಕೃತ ವೆಬ್​ಸೈಟ್ ಮತ್ತು ರಾಜ್ಯ ಹಾಗೂ ಹೊರರಾಜ್ಯಗಳಲ್ಲಿರುವ ಕೆಎಸ್​ಆರ್​ಟಿಸಿ ಬುಕಿಂಗ್‌ ಕೌಂಟರ್‌ಗಳಲ್ಲಿ ಮುಂಗಡ ಟಿಕೆಟ್‌ ಕಾಯ್ದಿರಿಸಬಹುದು.

ಇದನ್ನೂ ಓದಿ: ಮಾಸ್ಕ್​ ಧರಿಸಲು ಹೇಳಿದ KSRTC ಬಸ್ ಕಂಡಕ್ಟರ್​ಗೆ ಹಿಗ್ಗಾಮುಗ್ಗಾ ಥಳಿಸಿ ಹಲ್ಲು ಮುರಿದ ಯುವಕರು

Mysore Dasara 2021: ‘ಮುಂದಿನ ಬಾರಿ ವೈಭವೋಪೇತ ದಸರಾ ಆಚರಿಸುವಂತಾಗಲಿ’: ಸಿಎಂ ಬೊಮ್ಮಾಯಿ ಆಶಯ

(Navaratri 2021 KSRTC to operate 1000 additional buses for Dasara season to Dharmasthala, Shimoga, Sringeri other cities)