AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಥಮ, ದ್ವಿತೀಯ ಪಿಯು ಕಾಲೇಜ್ ತೆರೆಯಲು ಸರ್ಕಾರದಿಂದ ಮಾರ್ಗಸೂಚಿ ಪ್ರಕಟ; ನಿಯಮಗಳೇನು? ಇಲ್ಲಿದೆ ವಿವರ

College Reopen: ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಕ್ಕೆ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ. ಕಾಲೇಜು ಆರಂಭಿಸುವ ಕುರಿತು ಸರ್ಕಾರದಿಂದ ಗೈಡ್​ಲೈನ್ಸ್ ಬಿಡುಗಡೆ ಆಗಿದೆ.

ಪ್ರಥಮ, ದ್ವಿತೀಯ ಪಿಯು ಕಾಲೇಜ್ ತೆರೆಯಲು ಸರ್ಕಾರದಿಂದ ಮಾರ್ಗಸೂಚಿ ಪ್ರಕಟ; ನಿಯಮಗಳೇನು? ಇಲ್ಲಿದೆ ವಿವರ
ಕಾಲೇಜು ಆರಂಭಕ್ಕೆ ಮಾರ್ಗಸೂಚಿ
TV9 Web
| Updated By: ganapathi bhat|

Updated on:Aug 18, 2021 | 8:29 PM

Share

ಬೆಂಗಳೂರು: ಪ್ರಥಮ ಹಾಗೂ ದ್ವಿತೀಯ ಪಿಯುಸಿ ತರಗತಿ ಆರಂಭಕ್ಕೆ ಮಾರ್ಗಸೂಚಿ ಪ್ರಕಟ ಮಾಡಲಾಗಿದೆ. ಕಾಲೇಜು ಆರಂಭಿಸುವ ಕುರಿತು ಸರ್ಕಾರದಿಂದ ಗೈಡ್​ಲೈನ್ಸ್ ಬಿಡುಗಡೆ ಆಗಿದೆ. ಶೇಕಡಾ 2 ಕ್ಕಿಂತ ಕಡಿಮೆ ಕೊರೊನಾ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಕಾಲೇಜು ತೆರೆಯಲು ಸೂಚಿಸಲಾಗಿದೆ. ಏಕಕಾಲದಲ್ಲಿ ಪ್ರಥಮ, ದ್ವಿತೀಯ ಪಿಯು ತರಗತಿ ನಡೆಸುವುದು ಎಂದು ಹೇಳಲಾಗಿದೆ. ವಾರದ ಮೊದಲ 3ದಿನ ಶೇಕಡಾ 50 ರಷ್ಟು ವಿದ್ಯಾರ್ಥಿಗಳಿಗೆ ಕ್ಲಾಸ್ ಮಾಡಬೇಕು. ಶೇಕಡಾ 50 ರಷ್ಟು ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರು ಆಗಬೇಕು. ಉಳಿದ ಶೇಕಡಾ 50 ರಷ್ಟು ವಿದ್ಯಾರ್ಥಿಗಳಿಗೆ ಮನೆಯಲ್ಲೇ ಆನ್​​ಲೈನ್​ ತರಗತಿ ನಡೆಸುವುದು. ಗುರುವಾರ, ಶುಕ್ರವಾರ, ಶನಿವಾರ ಉಳಿದ ಮಕ್ಕಳಿಗೆ ಕ್ಲಾಸ್​ ನಡೆಸುವ ಬಗ್ಗೆ ಸೂಚನೆ ಕೊಡಲಾಗಿದೆ.

ಆಗಸ್ಟ್ 23 ರಿಂದ ಪಿಯು ಕಾಲೇಜು ತರಗತಿಗಳು ಆರಂಭವಾಗಲಿದೆ. ಪ್ರಥಮ, ದ್ವಿತೀಯ ಪಿಯುಸಿ ತರಗತಿ ಏಕಕಾಲಕ್ಕೆ ಆರಂಭ ಆಗಲಿದೆ. ಪ್ರಥಮ, ದ್ವಿತೀಯ ಪಿಯುಸಿ ಆರಂಭಕ್ಕೆ ಮಾರ್ಗಸೂಚಿ ಪ್ರಕಟ ಆಗಿದೆ. ಕಾಲೇಜು ಆರಂಭಿಸುವ ಕುರಿತು ಸರ್ಕಾರದಿಂದ ಗೈಡ್​ಲೈನ್ಸ್ ನೀಡಲಾಗಿದೆ. ಅದರಂತೆ, ಶೇಕಡಾ 2 ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಕಾಲೇಜು ಓಪನ್ ಆಗಲಿದೆ. ಏಕಕಾಲದಲ್ಲಿ ಪ್ರಥಮ, ದ್ವಿತೀಯ ಪಿಯುಸಿ ತರಗತಿ ನಡೆಸುವುದು ಎಂದು ಹೇಳಲಾಗಿದೆ. ವಾರದ ಮೊದಲ 3ದಿನ ಶೇಕಡಾ 50 ರಷ್ಟು ವಿದ್ಯಾರ್ಥಿಗಳಿಗೆ ಮತ್ತು ನಂತರ ಶೇಕಡಾ 50 ರಷ್ಟು ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರು ಆಗಬಹುದು.

ಕಾಲೇಜು ಆರಂಭಕ್ಕೆ ಸೂಚಿಸಿದ ಮಾರ್ಗಸೂಚಿಯ ಇತರೆ ಅಂಶಗಳು ಇಲ್ಲಿದೆ:

  • ವಿದ್ಯಾರ್ಥಿಗಳ ಸಂಖ್ಯೆ 100 ಕ್ಕಿಂತ ಕಡಿಮೆ ಇರಬೇಕು
  • ವಿಶಾಲ ಕೊಠಡಿಗಳಿದ್ದರೆ ವಾರದ ಎಲ್ಲಾ ದಿನ ಭೌತಿಕ ತರಗತಿ ನಡೆಸಬಹುದು
  • ಕಾಲೇಜು ಆವರಣದಲ್ಲಿ ದೈಹಿಕ ಅಂತರ ಕಡ್ಡಾಯವಾಗಿರುತ್ತೆ
  • ಪ್ರಿನ್ಸಿಪಾಲ್, ಸಿಬ್ಬಂದಿ ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು
  • ವಿದ್ಯಾರ್ಥಿಗಳು ಕಾಲೇಜಿಗೆ ಬರಲು ಪೋಷಕರ ಒಪ್ಪಿಗೆ ಬೇಕು
  • ವಿದ್ಯಾರ್ಥಿಗಳಿಗೆ ಕೊವಿಡ್​​-19 ನೆಗೆಟಿವ್ ವರದಿ ಕಡ್ಡಾಯ
  • ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ವಿದ್ಯಾರ್ಥಿಗಳಿಂದ ಕೊವಿಡ್ ನಿಯಮಗಳ ಉಲ್ಲಂಘನೆಯಾಗದಂತೆ ಗಮನಿಸಬೇಕು
  • ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯ
  • ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಡ್ಡ ಹಿಡಿಯಬೇಕು, ಎಲ್ಲೆಂದರಲ್ಲಿ ಉಗುಳಬಾರದು
  • ಕಾಲೇಜು ಆರಂಭಕ್ಕೆ ಮುನ್ನ ಇಡೀ ಆವರಣ ಹಾಗೂ ಕೊಠಡಿಗಳನ್ನ ಸ್ಯಾನಿಟೈಸ್ ಮಾಡಬೇಕು
  • ಕೊವಿಡ್​ಗೆ ಬಳಸಿದ ಕಟ್ಟಡಗಳನ್ನ ಎರೆಡೆರಡು ಬಾರಿ ಸ್ಯಾನಿಟೈಸ್ ಮಾಡಬೇಕು
  • ಸಾಮೂಹಿಕ ಪ್ರಾರ್ಥನೆ, ಕ್ರೀಡೆ ಎಲ್ಲಾ ಚಟುವಟಿಕೆಗಳಿಗೆ ಕೋವಿಡ್ ನಿಯಮ ಕಡ್ಡಾಯ
  • ಪ್ರವೇಶ ಧ್ವಾರದಲ್ಲಿ ಥರ್ಮಲ್ ಸ್ಕ್ಯಾನರ್ ಹಾಗೂ ಸ್ಯಾನಿಟೈಸರ್ ಕಡ್ಡಾಯವಾಗಿ ಇರಬೇಕು

ಇದನ್ನೂ ಓದಿ: SSLC Exams: ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ; ವಿವರ ಇಲ್ಲಿದೆ

ಶೇಕಡಾ 2ಕ್ಕಿಂತ ಹೆಚ್ಚು ಕೊರೊನಾ ಪ್ರಕರಣ ಕಂಡುಬಂದರೆ ಅಂತಹ ಶಾಲೆ ಮುಚ್ಚಲಾಗುವುದು: ಕೆ ಸುಧಾಕರ್

Published On - 8:13 pm, Wed, 18 August 21

ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ