ಶೀಘ್ರದಲ್ಲೇ ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಕಾನೂನು ಜಾರಿ: ಬಸವರಾಜ ಬೊಮ್ಮಾಯಿ

ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಕನ್ನಡದ ಅಭಿವೃದ್ಧಿಗೆ ಬದ್ಧವಾಗಿದೆ ಎಂದ ಬೊಮ್ಮಾಯಿ ನಮ್ಮ ಪಕ್ಷ ಮತ್ತು ಸರ್ಕಾರ  ನೆಲ, ಜಲ, ಜನ ಮತ್ತು ಭಾಷೆಯ ಬಗ್ಗೆ ಎಂದಿಗೂ ರಾಜಿ ಮಾಡುವುದಿಲ್ಲ ಎಂದು  ಹೇಳಿದ್ದಾರೆ.

ಶೀಘ್ರದಲ್ಲೇ ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಕಾನೂನು ಜಾರಿ: ಬಸವರಾಜ ಬೊಮ್ಮಾಯಿ
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Updated on: Sep 14, 2022 | 5:48 PM

ಕನ್ನಡವನ್ನು (Kannada) ಕಾನೂನಾತ್ಮಕವಾಗಿ ಕಡ್ಡಾಯಗೊಳಿಸಲು ಸರ್ಕಾರವು ಶೀಘ್ರದಲ್ಲೇ ಕಾನೂನನ್ನು ಮಂಡಿಸಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಬುಧವಾರ ವಿಧಾನಸಭೆಯಲ್ಲಿ ತಿಳಿಸಿದರು. ‘ಕನ್ನಡದ ಬಳಕೆ ಹೆಚ್ಚಿಸುವ’ ಸರ್ಕಾರದ ಪ್ರಯತ್ನದ ಭಾಗವಾಗಿ ಕನ್ನಡ ಕಡ್ಡಾಯಗೊಳಿಸುವ ಕ್ರಮ ಕೈಗೊಳ್ಳಲಾಗಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಕನ್ನಡದ ಅಭಿವೃದ್ಧಿಗೆ ಬದ್ಧವಾಗಿದೆ ಎಂದ ಅವರು ನಮ್ಮ ಪಕ್ಷ ಮತ್ತು ಸರ್ಕಾರ  ನೆಲ, ಜಲ, ಜನ ಮತ್ತು ಭಾಷೆಯ ಬಗ್ಗೆ ಎಂದಿಗೂ ರಾಜಿ ಮಾಡುವುದಿಲ್ಲ ಎಂದು  ಹೇಳಿದ್ದಾರೆ. ಅಂದಹಾಗೆ ಸೆಪ್ಟೆಂಬರ್ 14 ಭಾರತದಲ್ಲಿ ಹಿಂದಿ ದಿವಸ್ (Hindi Diwas) ಆಗಿ ಆಚರಿಸಲಾಗುತ್ತಿದೆ. ಈ ಮೂಲಕ ಬಿಜೆಪಿಯು ‘ಹಿಂದಿಫಿಕೇಶನ್’ ಅಥವಾ ಭಾರತದ ಮೇಲೆ ಪ್ರಜೆಗಳ ಮೇಲೆ ಹಿಂದಿ ಭಾಷೆಯನ್ನು ಹೇರುವ ಪ್ರಯತ್ನ ಮಾಡುತ್ತಿದೆ ಎಂಬ ಆರೋಪವೂ ಇದೆ.  ಹಿಂದಿ ದಿವಸ್‌ನಂದು ಕರ್ನಾಟಕದಲ್ಲಿ ಹಿಂದಿ ಹೇರಿಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು ಜೆಡಿಎಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೋಮವಾರ ಪತ್ರ ಬರೆದು ತೆರಿಗೆದಾರ ಹಣ ಬಳಸಿಕೊಂಡು ‘ಹಿಂದಿ ದಿವಸ್’ ಆಚರಿಸದಂತೆ ಒತ್ತಾಯಿಸಿದ್ದಾರೆ.

ಇಂದು (ಬುಧವಾರ) ಸಿಎಂ ಬೊಮ್ಮಾಯಿ ಅವರು ಸದನದಲ್ಲಿ ಕನ್ನಡ ಕಡ್ಡಾಯಗೊಳಿಸುವ ಕಾನೂನನ್ನು ತರುವುದಾಗಿ ಹೇಳಿದ್ದಾರೆ. ಕಳೆದ ವರ್ಷ ಕರ್ನಾಟಕ ಪರ ಸಂಘಟನೆಗಳು ಹಿಂದಿ ದಿವಸ್​​ನಂದು ಸಾಮಾಜಿಕ ಮಾಧ್ಯಮಗಳಲ್ಲಿ “ಹಿಂದಿ ಹೇರಿಕೆ” ಎಂದು ತೀವ್ರವಾಗಿ ಪ್ರತಿಭಟಿಸಿದ್ದವು. ಹಿಂದಿಯ ‘ಹೇರಿಕೆ’ ಮತ್ತು ಅದನ್ನು ದೇಶದಲ್ಲಿ ಸಾಮಾನ್ಯ ಭಾಷೆಯಾಗಿ ಸ್ವೀಕರಿಸಬೇಕೇ ಎಂಬ ಬಗ್ಗೆ ಹೊಸ ಚರ್ಚೆಯ ನಡುವೆ ವಿವಾದವು ಉದ್ಭವಿಸಿದೆ. ಈ ಹಿಂದೆ, ಕುಮಾರಸ್ವಾಮಿ ಅವರು ಹಿಂದಿ ದಿವಸ್ ಆಚರಣೆಯನ್ನು ವಿರೋಧಿಸಿದ್ದರು.

ಈ ವರ್ಷದ ಆರಂಭದಲ್ಲಿ, ಹಿಂದಿ ಭಾಷೆಯ ಬಗ್ಗೆ ಎರಡು ಪ್ರಮುಖ ಚರ್ಚೆಗಳು ನಡೆದಿತ್ತು. ಇದರಲ್ಲಿ ಮೊದಲನೆಯದು ಅಜಯ್ ದೇವಗನ್ ಮತ್ತು ಕಿಚ್ಚ ಸುದೀಪ್ ನಡುವಿನ ಟ್ವಿಟರ್ ಜಗಳ ಮತ್ತು ಎರಡನೆಯದ್ದು, ಇಂಗ್ಲಿಷ್ ಭಾಷೆಗೆ ಪರ್ಯಾಯವಾಗಿ ಹಿಂದಿಯನ್ನು ಒಪ್ಪಿಕೊಳ್ಳಬೇಕು ಎಂದು ಅಮಿತ್ ಶಾ ಅವರ ಹೇಳಿಕೆ.

2011 ರಲ್ಲಿ ನಡೆಸಿದ ಇತ್ತೀಚಿನ ಜನಗಣತಿಯ ಪ್ರಕಾರ, 43 ದಶಲಕ್ಷಕ್ಕೂ ಹೆಚ್ಚು ಜನರು ಸ್ಥಳೀಯ ಕನ್ನಡ ಮಾತನಾಡುವವರು ಇದ್ದಾರೆ. ಸಂಸ್ಕೃತಿ ಸಚಿವಾಲಯವು ನೇಮಿಸಿದ ಭಾಷಾ ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಭಾರತ ಸರ್ಕಾರವು ಕನ್ನಡವನ್ನು ಭಾರತದ ಶಾಸ್ತ್ರೀಯ ಭಾಷೆಯಾಗಿ ಅಂಗೀಕಾರ ನೀಡಿತು.

ಇದನ್ನೂ ಓದಿ
ದೇಶದಲ್ಲಿ ಹಿಂದಿ ದಿವಸ್​, ತ್ರಿಭಾಷಾ ಸೂತ್ರ ಹೇರಿದ್ದು ಕಾಂಗ್ರೆಸ್: ಆದ್ರೆ ಮಾತೃಭಾಷೆಯಲ್ಲೇ ಶಿಕ್ಷಣ ಕಲ್ಪಿಸಿರುವುದು ಮೋದಿ ಸರ್ಕಾರ- ಕರ್ನಾಟಕ ಬಿಜೆಪಿ ಟ್ವೀಟ್
ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಮೊದಲ ಪೂಜೆ, ಯಾವ ಭಾಷೆಯ ಹೇರಿಕೆಯನ್ನೂ ಸಹಿಸುವುದಿಲ್ಲ: ಹಿಂದಿ ದಿವಸ್​ಗೆ ಸಿದ್ದರಾಮಯ್ಯ ವಿರೋಧ

ಏತನ್ಮಧ್ಯೆ, ಸುಮಾರು 61.5 ಕೋಟಿ ಭಾಷಿಗರನ್ನು ಹೊಂದಿರುವ ಹಿಂದಿ ವಿಶ್ವದ ಮೂರನೇ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿ ಉಳಿದಿದೆ. ಏತನ್ಮಧ್ಯೆ, ಹಿಂದಿ ಭಾರತದ ರಾಷ್ಟ್ರಭಾಷೆಯೇ ಎಂಬುದು ಮತ್ತೆ ಮತ್ತೆ ಚರ್ಚೆಗೆ ಬರುತ್ತಲೇ ಇದೆ. ಡಿಸೆಂಬರ್ 1946 ರಲ್ಲಿ ಸಂವಿಧಾನ ರಚನಾ ಸಭೆಯು ಮೊದಲ ಬಾರಿಗೆ ಸಭೆ ಸೇರಿದಾಗ, ಸಾಕಷ್ಟು ಚರ್ಚೆ ನಂತರ ಸದನದ ಕಲಾಪಗಳನ್ನು ಹಿಂದೂಸ್ತಾನಿ ಮತ್ತು ಇಂಗ್ಲಿಷ್‌ನಲ್ಲಿ ನಡೆಸಬೇಕೆಂದು ನಿರ್ಧರಿಸಲಾಯಿತು.

Published On - 5:43 pm, Wed, 14 September 22