ಬಾಗಲಕೋಟೆ: ದ್ವೇಷ ರಾಜಕಾರಣಕ್ಕೆ ಮುಂದಾಯ್ತಾ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ? ಜಿಲ್ಲೆಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿರುವುದು ಇದಕ್ಕೆ ಕಾರಣವಾಗಿದೆ.
ನೆರೆಯಿಂದ ಹಾನಿಯಾದ ರಸ್ತೆ ದುರಸ್ತಿಗೆ ಅನುದಾನ ಸಂಬಂಧಿಸಿದಂತೆ ಬಿಜೆಪಿ ಶಾಸಕರಿರುವ ಬಾಗಲಕೋಟೆ, ತೇರದಾಳ, ಬೀಳಗಿ, ಹುನಗುಂದ ಮತ್ತು ಮುಧೋಳ ಕ್ಷೇತ್ರಗಳ ರಸ್ತೆ ದುರಸ್ತಿಗೆ ತಲಾ 4 ಕೋಟಿ ರೂ. ಸರ್ಕಾರ ಅನುದಾನ ನೀಡಿದೆ. ಆದ್ರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಹಾಗೂ ಆನಂದ ನ್ಯಾಮಗೌಡ ಕ್ಷೇತ್ರ ಜಮಖಂಡಿಗೆ ಬಿಡಿಗಾಸು ಅನುದಾನ ನೀಡದೆ ಕಡೆಗಣಿಸಲಾಗಿದೆ.
ಹಿಂದೆಯೂ ಅನುದಾನ ಕಡಿತ ಮಾಡಲಾಗಿತ್ತು:
ಈ ಎರಡೂ ಕ್ಷೇತ್ರದ ರಸ್ತೆ ದುರಸ್ತಿಗೆ ಅನುದಾನ ನೀಡದಿದ್ದಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿಂದೆಯೂ ಬಾದಾಮಿ ಕ್ಷೇತ್ರದ 35 ಕೋಟಿ ರೂ. ಹಾಗೂ ಜಮಖಂಡಿ ಕ್ಷೇತ್ರದ 47 ಕೋಟಿ ರೂ. ಅನುದಾನವನ್ನು ಕಡಿತ ಮಾಡಲಾಗಿತ್ತು. ಹೀಗಾಗಿ ಬಿಎಸ್ವೈ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.