ದಾವಣಗೆರೆ: ‘ಸೋಂಕಿತರ ಮನೆಯ SSLC ವಿದ್ಯಾರ್ಥಿಗಳಿಗೆ ಪರೀಕ್ಷೆ ಇರಲ್ಲ’
ಸೋಂಕಿತರ ಮನೆಯ SSLC ವಿದ್ಯಾರ್ಥಿಗಳಿಗೆ ಪರೀಕ್ಷೆ ಇರಲ್ಲ ಅಂತಾ ದಾವಣಗೆರೆ ಡಿಸಿ ತಿಳಿಸಿದ್ದಾರೆ. ಚನ್ನಗಿರಿ ಮತ್ತು ಹರಿಹರದ ಮೂವರು ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುತ್ತೆ. ಕಂಟೇನ್ಮೆಂಟ್ ಜೋನ್ಗಳಲ್ಲಿರೋ 96 ವಿದ್ಯಾರ್ಥಿಗಳಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತೆ ಅಂತಾ ಡಿಸಿ ಹೇಳಿದ್ದಾರೆ. ಓರ್ವ ನೀರು ಪಾಲು ಕೊಡಗು ಜಿಲ್ಲೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಮುಳುಗಿ ವ್ಯಕ್ತಿಯೊಬ್ಬ ಅಸುನೀಗಿದ್ದಾನೆ. ಪಿಂಡ ಪ್ರಧಾನಕ್ಕೆ ಬಂದ ವೇಳೆ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸುಬ್ರಹ್ಮಣಿ ಎಂಬಾತ ಮೃತಪಟ್ಟಿದ್ದಾನೆ. ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನ ಸ್ಥಳೀಯರು […]
ಸೋಂಕಿತರ ಮನೆಯ SSLC ವಿದ್ಯಾರ್ಥಿಗಳಿಗೆ ಪರೀಕ್ಷೆ ಇರಲ್ಲ ಅಂತಾ ದಾವಣಗೆರೆ ಡಿಸಿ ತಿಳಿಸಿದ್ದಾರೆ. ಚನ್ನಗಿರಿ ಮತ್ತು ಹರಿಹರದ ಮೂವರು ವಿದ್ಯಾರ್ಥಿಗಳಿಗೆ ಸಪ್ಲಿಮೆಂಟರಿ ಪರೀಕ್ಷೆಯಲ್ಲಿ ಅವಕಾಶ ಕಲ್ಪಿಸಲಾಗುತ್ತೆ. ಕಂಟೇನ್ಮೆಂಟ್ ಜೋನ್ಗಳಲ್ಲಿರೋ 96 ವಿದ್ಯಾರ್ಥಿಗಳಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತೆ ಅಂತಾ ಡಿಸಿ ಹೇಳಿದ್ದಾರೆ.
ಓರ್ವ ನೀರು ಪಾಲು ಕೊಡಗು ಜಿಲ್ಲೆ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಮುಳುಗಿ ವ್ಯಕ್ತಿಯೊಬ್ಬ ಅಸುನೀಗಿದ್ದಾನೆ. ಪಿಂಡ ಪ್ರಧಾನಕ್ಕೆ ಬಂದ ವೇಳೆ ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸುಬ್ರಹ್ಮಣಿ ಎಂಬಾತ ಮೃತಪಟ್ಟಿದ್ದಾನೆ. ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನ ಸ್ಥಳೀಯರು ರಕ್ಷಿಸಿದ್ದಾರೆ.
ಸಚಿವರ ನಗರ ಪ್ರದಕ್ಷಿಣೆ ವಿಜಯಪುರದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ನಗರ ಪ್ರದಕ್ಷಿಣೆ ಹಾಕಿದ್ರು. ದರ್ಗಾ ಬಳಿಯ ಕಲ್ಲಿನ ಖಣಿ, ಆಕೃತಿ ನಗರದಲ್ಲಿರೋ ಪಾರ್ಕ್ ಸೇರಿ ಹಲವೆಡೆ ಭೇಟಿ ನೀಡಿದ್ರು. ಬಳಿಕ ಅಭಿವೃದ್ಧಿ ಕೆಲಸಗಳ ಕುರಿತು ಅಧಿಕಾರಿಗಳ ಜತೆ ಪರಿಶೀಲನೆ ನಡೆಸಿ ಆಗಬೇಕಿರುವ ಕೆಲಸಗಳ ಬಗ್ಗೆ ಚರ್ಚೆ ನಡೆಸಿದ್ರು.
ಮಹಿಳೆ ಅಂತ್ಯಕ್ರಿಯೆಗೆ ವಿರೋಧ ಬಳ್ಳಾರಿಯ ವಾಜಪೇಯಿ ಬಡಾವಣೆ ಜನ್ರು ಸಂಗನಕಲ್ಲು ರಸ್ತೆ ಬಳಿಯಿರೋ ರುದ್ರಭೂಮಿ ಬಳಿ ಪ್ರತಿಭಟನೆ ನಡೆಸಿದ್ದಾರೆ. ಕೊರೊನಾ ಸೋಂಕಿತ ಮಹಿಳೆಯನ್ನ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡೋದನ್ನ ತಡೆದಿದ್ದಾರೆ. ಈ ವೇಳೆ ಶಾಸಕ ಸೋಮಶೇಖರ್ ರೆಡ್ಡಿ ಪ್ರತಿಭಟನಾಕಾರರ ಜತೆ ಕೈ ಜೋಡಿಸಿದ್ದು, ಅಸಾಮಾಧಾನಕ್ಕೆ ಕಾರಣವಾಯ್ತು.
2ಕ್ಕೂ ಹೆಚ್ಚು ಕೊರೊನಾ ಕೇಸ್? ದಾವಣಗೆರೆಗೆ ಜಿಲ್ಲೆಯಲ್ಲಿ ಇಂದು ಎರಡಕ್ಕೂ ಹೆಚ್ಚು ಕೊರೊನಾ ಪಾಸಿಟಿವ್ ಕೇಸ್ ದೃಢವಾಗೋ ಸಾಧ್ಯತೆ ದಟ್ಟವಾಗಿದೆ. ಕಂಟೇನ್ಮೆಂಟ್ ಜೋನ್ ವ್ಯಾಪ್ತಿಯ ಜನರಿಗೆ ವೈರಸ್ ವಕ್ಕರಿಸೋ ಶಂಕೆ ಮೂಡಿದೆ. ಇನ್ನು 1 ಸಾವಿರದ 293 ಜನರ ಕೊವಿಡ್ ವರದಿ ಬರಬೇಕಿದ್ದು, ಅದಕ್ಕಾಗಿ ಜಿಲ್ಲಾಡಳಿತ ಕಾಯುತ್ತಿದೆ.
ಮಹಿಳೆಗೆ ಸೋಂಕು, ಏರಿಯಾ ಸೀಲ್ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಪೇಪರ್ಟೌನ್ ಬಡಾವಣೆಯ ಮೂರನೇ ಕ್ರಾಸ್ನ್ನ ಸೀಲ್ ಮಾಡಲಾಗಿದೆ. ಮಹಾರಾಷ್ಟ್ರ ದಿಂದ ಬಂದಿರೋ ಬಡಾವಣೆಯ ಓರ್ವ ಮಹಿಳೆಗೆ ವೈರಸ್ ಇರೋದು ದೃಢವಾಗಿದೆ. ಇದ್ರಿಂದ ಏರಿಯಾದ ರಸ್ತೆಗಳನ್ನ ಬಂದ್ ಮಾಡಿ ಸೀಲ್ ಮಾಡಲಾಗುದೆ. ಸದ್ಯ ಮಹಿಳೆಗೆ ಕೊವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಹಿರೇಜಂತಕಲ್ ಸೀಲ್ಡೌನ್ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಹಿರೇಜಂತಕಲ್ ಗ್ರಾಮವನ್ನ ಅಧಿಕಾರಿಗಳು ಸೀಲ್ ಮಾಡಿದ್ದಾರೆ. ಗ್ರಾಮದ ಓರ್ವ ಮಹಿಳೆಗೆ ಸೋಂಕಿರೋದು ದೃಢವಾಗಿದ್ದು, ನಗರಸಭೆ ಸಿಬ್ಬಂದಿ ರಾಸಾಯನಿಕ ಸಿಂಪಡಿಸಿದ್ದಾರೆ. ರಸ್ತೆಗಳಿಗೆ ಮುಳ್ಳು ಹಾಕಿ ಗ್ರಾಮ ಪ್ರವೇಶವನ್ನ ನಿರ್ಬಂಧಿಸಿದ್ದಾರೆ.
ಸ್ವಯಂ ಪ್ರೇರಿತ ಲಾಕ್ ರಾಮನಗರ ಜಿಲ್ಲೆ ಮಾಗಡಿಯನ್ನ ವ್ಯಾಪಾರಸ್ಥರು ಸ್ವಯಂ ಲಾಕ್ ಮಾಡಿದ್ದಾರೆ. ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿದ್ದಾರೆ. ಸದ್ಯ ಅಗತ್ಯ ಸೇವೆ ಹೊರತು ಪಡೆಸಿ ಉಳಿದೆಲ್ಲವೂ ಪಟ್ಟಣದಲ್ಲಿ ಬಂದ್ ಆಗಿದ್ದು, ಬೆಳಗ್ಗೆ 7 ರಿಂದ 10 ಗಂಟೆವರೆಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
Published On - 2:45 pm, Tue, 23 June 20