AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನ್​ಲೈನ್​ ಲೋನ್ ಪಡೆಯುವವರೇ ಎಚ್ಚರ! ಲೋನ್​ ತೀರಿಸಿದರೂ ಬ್ಲಾಕ್ ಮೇಲ್, ಅಶ್ಲೀಲ ಫೋಟೋ ಕಳುಹಿಸಿ ಬೆದರಿಕೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಓರ್ವ ವ್ಯಕ್ತಿ ಸ್ನೇಹಿತರು ಹೇಳಿದ ಮಾತು ಕೇಳಿ ಮೊಬೈಲ್​ನಿಂದ ಆನ್​ಲೈನ್​ನಲ್ಲಿ ಲೋನ್​ ಪಡೆದುಕೊಂಡು ಇದೀಗ ಮೋಸ ಹೋಗಿರುವಂತಹ ಘಟನೆ ನಡೆದಿದೆ. ಲೋನ್​ ಪಡೆದ ಹಣವನ್ನು ಕಟ್ಟಿದರೂ ಕೂಡ ಹೆಚ್ಚಿಗೆ ಹಣ ನೀಡುವಂತೆ ಅಶ್ಲೀಲ ಫೋಟೋ ಕಳುಹಿಸಿ ಬೆದರಿಕೆ ಹಾಕಿದ್ದಾರೆ.

ಆನ್​ಲೈನ್​ ಲೋನ್ ಪಡೆಯುವವರೇ ಎಚ್ಚರ! ಲೋನ್​ ತೀರಿಸಿದರೂ ಬ್ಲಾಕ್ ಮೇಲ್, ಅಶ್ಲೀಲ ಫೋಟೋ ಕಳುಹಿಸಿ ಬೆದರಿಕೆ
ಆನ್​ಲೈನ್​ ಲೋನ್ ಪಡೆಯುವವರೇ ಎಚ್ಚರ! ಲೋನ್​ ತೀರಿಸಿದರೂ ಬ್ಲಾಕ್ ಮೇಲ್, ಅಶ್ಲೀಲ ಫೋಟೋ ಕಳುಹಿಸಿ ಬೆದರಿಕೆ
ನವೀನ್ ಕುಮಾರ್ ಟಿ
| Edited By: |

Updated on: Sep 04, 2024 | 9:29 PM

Share

ದೇವನಹಳ್ಳಿ, ಸೆಪ್ಟೆಂಬರ್​ 04: ಆನ್​ ಲೈನ್​ನ್ನಲ್ಲಿ (Online loan) ನೀವು ಲೋನ್ ತೆಗೆದುಕೊಂಡಿದ್ದಿರಾ? ಈಗಾಗಲೇ ಆ ಲೋನ್ ಕಟ್ಟಿ ಎಲ್ಲವೂ ಸಾಲ ತಿರಿಸಿದ್ದೇವೆ ಅಂತ ಸುಮ್ಮನಾಗಿದ್ದಿರಾ? ಆಗಾದರೆ ಈ ಸ್ಟೋರಿ ಒಮ್ಮೆ ಓದಿ. ಯಾಕಂದ್ರೆ ನೀವು ಸಾಲವಾಗಿ ಪಡೆದ ಹಣ ಕಟ್ಟಿದ್ದರೂ ಮತ್ತೊಮ್ಮೆ ಹಣ ಕಟ್ಟುವಂತೆ ನಿಮಗೆ ಟಾರ್ಚರ್ ನೀಡಿ ನಿಮ್ಮದೆ ಅಶ್ಲೀಲ ಫೋಟೋಗಳನ್ನ ನಿಮ್ಮವರಿಗೆ ಕಳಿಸಿದರು ಅಚ್ಚರಿಯಿಲ್ಲ. ಇಂತಹದೊಂದು ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣ ನಿವಾಸಿಯಾದ ಶ್ರೀಕಾಂತ್​ ತನಗೆ ಕಷ್ಟ ಆಗಿದೆ ಅಂತ ಸ್ನೇಹಿತರು ಹೇಳಿದ ಮಾತು ಕೇಳಿ ಮೊಬೈಲ್​ನಿಂದ ಆನ್​ಲೈನ್​ನಲ್ಲಿ ಲೋನ್ ಮಾಡಿದ್ದಾರೆ. ಜೊತೆಗೆ ಆನ್ ಲೈನ್​ ಪೈನಾನ್ಸ್ ಆ್ಯಪ್ ಪ್ಲಾಶ್ ವಾಲೇಟ್ ಪೈನಾನ್ಸ್ನಿಂದ 10 ಸಾವಿರ ಲೋನ್ ಪಡೆದುಕೊಂಡಿದ್ದು ಈತನ ಕುಟುಂಬದ ಮಾಹಿತಿ ಜೊತೆಗೆ ಎಲ್ಲ ವಿವರಗಳನ್ನ ಆನ್ಲೈನ್ನಲ್ಲಿ ಆ್ಯಪ್ ಕೇಳಿದಂತೆ ಅಪಲೋಡ್ ಮಾಡಿದ್ದಾರೆ. ಹೀಗಾಗಿ ಲೋನ್​ ಎಲ್ಲಾ ಪ್ರೋಸಿಸರ್ ಮಾಡಿ ಆನ್ ಲೈನ್ ನಲ್ಲಿ 10 ಸಾವಿರ ರೂ. ಹಣವನ್ನ ಲೋನ್ ಪಡೆದುಕೊಂಡಿದ್ದು ಲೋನ್ ಪಡೆದ ಕೆಲ ತಿಂಗಳಲ್ಲೇ ಬಡ್ಡಿ ಸಮೇತ 20 ಸಾವಿರ ಹಣವನ್ನ ಕ್ಲಿಯರ್ ಸಹ ಮಾಡಿದ್ದಾರೆ.

ಇದನ್ನೂ ಓದಿ: ಕೊಪ್ಪಳ: ಅಂತರ್ಜಾತಿ ವಿವಾಹ, ದಲಿತ ಯುವತಿಗೆ ವಿಷವುಣಿಸಿ ಹತ್ಯೆ

ಆದರೆ ಆನ್ ಲೈನ್​ನಲ್ಲಿ ಪಡೆದ ಹಣವನ್ನ ಬಡ್ಡಿ ಸಮೇತ ಕ್ಲಿಯರ್ ಮಾಡಿದರು ಇನ್ನೂ ಹೆಚ್ಚಿನ ಹಣವನ್ನ ಕೊಡಬೇಕು ಅಂತ ಫೈನಾನ್ಸ್ ಕಡೆಯಿಂದ ಕಿರುಕುಳ ನೀಡ್ತಿದ್ದಾರಂತೆ. ಜೊತಗೆ ಲೋನ್ ಪಡೆದಿದ್ದ ಶ್ರೀಕಾಂತನ ಫೋಟೋಗಳನ್ನ ಅಶ್ಲೀಲವಾಗಿ ಎಡಿಟ್ ಮಾಡಿ ತನ್ನ ಮೊಬೈಲ್ ಕಾಂಟ್ಯಾಕ್ಟ್ ನಲ್ಲಿರುವವರಿಗೆಲ್ಲ ಕಳಿಸುವುದಾಗಿ ಬೆದರಿಕೆ ಹಾಕ್ತಿದ್ದು ತನ್ನ ಎಡಿಟೆಡ್ ಅಶ್ಲೀಲ ಫೋಟೋ ನೋಡಿದ ಯುವಕ ಬೆಚ್ಚಿ ಬಿದ್ದಿದ್ದಾರೆ.

ಇನ್ನೂ ಕೆಲ ಆನ್ಲೈನ್ ಪೋನ್ಗಳಿಂದ ಕಾಲ್ ಮಾಡ್ತಿದ್ದ ಲೋನ್ ಚಿಟಾರ್ಸ್ ಅಶ್ಲೀಲ ಪೊಟೊ ಕಳಿಸಿದ್ದಲ್ಲದೆ ನೀನು ಇನ್ನಷ್ಟು ಹಣ ಕೊಡದೇ ಹೋದ್ರೆ ನಿಮ್ಮ ಕುಟುಂಬಸ್ಥರಿಗೆ ಸ್ನೇಹಿತರಿಗೂ ಕಳಿಸಬೇಕಾಗುತ್ತೆ ಅಂತ ಬೆದರಿಕೆ ಹಾಕ್ತಿದ್ದಾರಂತೆ. ಅಲ್ಲದೆ ಆನ್ ಲೈನ್​ನಲ್ಲಿ ಪಡೆದುಕೊಂಡಿರುವ ಹಣವನ್ನ ಬಡ್ಡಿ ಸಮೇತ ಕಟ್ಟಿರುವ ಸ್ಕೀನ್ ಸಾಟ್ ಫೋಟೋಗಳನ್ನ ಕಳಿಸಿದರು, ಹೆಚ್ಚುವರಿ ಹಣ ನೀಡುವಂತೆ ಕಿರುಕುಳ ನೀಡ್ತಿದ್ದಾರೆ ಅಂತ ಯುವಕ ತನ್ನ ಅಳಲನ್ನ ತೋಡಿಕೊಳ್ತಿದ್ದಾರೆ.

ಅಲ್ಲದೆ ಆನ್ ಲೈನ್ ಲೋನ್ ಕಿರಕುಳದಿಂದ ನೊಂದ ಶ್ರೀಕಾಂತ್ ವಿಜಯಪುರ ಪೊಲೀಸ್ ಠಾಣೆಯಲ್ಲಿ ಲೋನ್ ನೀಡಿ ಬ್ಲಾಕ್ಮೈಲ್ ಮಾಡಿದ್ದ ಫೈನಾನ್ಸ್ ವಿರುದ್ದ ದೂರು ಸಹ ದಾಖಲು ಮಾಡಿದ್ದು ತನಗೆ ನ್ಯಾಯ ಕೊಡಿಸಿ ಅಂತ ಒತ್ತಾಯಿಸಿದ್ದಾನೆ.

ಇದನ್ನೂ ಓದಿ: ಚಿಕ್ಕಮಗಳೂರು: ಅನಿವಾಸಿ ಭಾರತೀಯ ವೈದ್ಯೆ ಮೇಲೆ ಯೋಗ ಗುರು ಅತ್ಯಾಚಾರ ಪ್ರಕರಣ, ಎಫ್​ಐಆರ್​ನಲ್ಲಿ ಅಚ್ಚರಿಯ ಮಾಹಿತಿ

ಒಟ್ಟಾರೆ ಸಂಕಷ್ಟದ ಸಮಯದಲ್ಲಿ ಸಹಾಯವಾಗುತ್ತೆ ಅಂತ ಪಡೆದಿದ್ದ ಲೋನ್ ಅನ್ನ ಬಡ್ಡಿ ಸಮೇತ ವಾಪಸ್ ಕಟ್ಟಿದ್ರು ಹೆಚ್ಚಿನ ಹಣಕ್ಕೆ ಕಿಡಿಗೇಡಿಗಳು ಬೇಡಿಕೆಯಿಟ್ಟು ಕಿರುಕುಳ ನೀಡ್ತಿರುವುದು ಆನ್ ಲೈನ್ ಲೋನ್ ಪಡೆದವರಿಗೆ ಸಂಕಷ್ಟವನ್ನ ತಂದೊಡ್ಡಿದೆ. ಇನ್ನೂ ಇತ್ತೀಚೆಗೆ ಈ ರೀತಿಯ ಆನ್ ಲೈನ್ ವಂಚನೆ ಮತ್ತು ಆ್ಯಪ್ ಕಿರುಕುಳದ ಕೇಸ್​ಗಳು ಸಹ ಹೆಚ್ಚಾಗ್ತಿದ್ದು ಪೊಲೀಸರು ಇಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಿದೆ.

ರಾಜ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.