ಬೆಂಗಳೂರಿನಲ್ಲಿ ಪಾದಯಾತ್ರೆ ಸದ್ದು; ಸಂಜೆ 7ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸುದ್ದಿಗೋಷ್ಠಿ
ಪಂಚಮಸಾಲಿ ಸಮುದಾಯದ 2A ಮೀಸಲಾತಿ ಬೇಡಿಕೆ ಹೋರಾಟ ತಾರಕಕ್ಕೇರಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನಲ್ಲಿ ಸಂಜೆ 7ಕ್ಕೆ ಸುದ್ದಿಗೋಷ್ಠಿ ನಡೆಸಲಿರುವ ಬಗ್ಗೆ ತಿಳಿಸಿದ್ದಾರೆ.
ಬೆಂಗಳೂರು: ಪಂಚಮಸಾಲಿ ಸಮುದಾಯದ 2A ಮೀಸಲಾತಿ ಬೇಡಿಕೆ ಹೋರಾಟ ತಾರಕಕ್ಕೇರಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಬೆಂಗಳೂರಿನಲ್ಲಿ ಸಂಜೆ 7ಕ್ಕೆ ಸುದ್ದಿಗೋಷ್ಠಿ ನಡೆಸುವುದಾಗಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಪಂಚಮಸಾಲಿಗರ ಹೋರಾಟ ಸಂಬಂಧ ಮಾತನಾಡಬಹುದು ಎಂಬ ಬಗ್ಗೆ ಕುತೂಹಲ ಉಂಟಾಗಿದೆ. ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ. ಪಾಟೀಲ್ ಹಾಗೂ ಉಳಿದ ಶಾಸಕರು ಮುಖ್ಯಮಂತ್ರಿಗೆ ಸಂಪೂರ್ಣ ಮಾಹಿತಿ ನೀಡಿ ಹೊರಬಂದಿದ್ದಾರೆ. ಬಳಿಕ, ಕಾವೇರಿ ನಿವಾಸದ ಆವರಣದಲ್ಲಿ ಸಚಿವ ನಿರಾಣಿ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು.
2A ಮೀಸಲಾತಿಗಾಗಿ ಪಂಚಮಸಾಲಿಗರ ಪಾದಯಾತ್ರೆ ಹೋರಾಟ, ಸಮಾವೇಶ ಸ್ಥಳದಿಂದ ವಿಧಾನಸೌಧದತ್ತ ಮುನ್ನುಗ್ಗಿದೆ. ಪಾದಯಾತ್ರೆಯನ್ನು ಮಾರ್ಗಮಧ್ಯೆ ತಡೆಯಲು ಪೊಲೀಸರು ಯತ್ನಿಸಿದ್ದಾರೆ. ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಮನವೊಲಿಸಲು ಪೊಲೀಸರು ಶತಪ್ರಯತ್ನ ಮಾಡಿದ್ದಾರೆ. ಪೊಲೀಸ್ ಆಯುಕ್ತ ಕಮಲ್ ಪಂತ್ ಸಹ ಸ್ವಾಮೀಜಿ ಜೊತೆಗೆ ಚರ್ಚೆ ನಡೆಸಿದರು.
ಪಾದಯಾತ್ರೆ ತಡೆಗೆ ಪೊಲೀಸರ ಬಿಗಿಬಂದೋಬಸ್ತ್ 2A ಮೀಸಲಾತಿಗಾಗಿ ಪಂಚಮಸಾಲಿಗರಿಂದ ಹೋರಾಟ, ಸಮಾವೇಶ ಸ್ಥಳದಿಂದ ವಿಧಾನಸೌಧದತ್ತ ಪಾದಯಾತ್ರೆ ಮುಂದುವರಿದಿದೆ. ಪಾದಯಾತ್ರೆ ತಡೆಯಲು ವಿಂಡ್ಸರ್ ಮ್ಯಾನರ್ ಬ್ರಿಡ್ಜ್ ಬಳಿ ಬ್ಯಾರಿಕೇಡ್ ಅಳವಡಿಸಲಾಗಿದೆ. ರಸ್ತೆಗೆ ಅಡ್ಡಲಾಗಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ಬ್ಯಾರಿಕೇಡ್ ಜತೆ ರಸ್ತೆಗೆ ಅಡ್ಡಲಾಗಿ ಪೊಲೀಸ್ ವಾಹನವನ್ನೂ ನಿಲ್ಲಿಸಿದ್ದಾರೆ.
ಬಿಡಿಎ ಕಚೇರಿ ಬಳಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಸಿಎಂ ನಿವಾಸದತ್ತ ಪಾದಯಾತ್ರೆ ಹೋಗದಂತೆ ತಡೆ ಒಡ್ಡಲಾಗಿದೆ. ಪೊಲೀಸರು ಪಾದಯಾತ್ರೆ ತಡೆದ ಹಿನ್ನೆಲೆ ಪರ್ಯಾಯ ಮಾರ್ಗವನ್ನು ಅನುಸರಿಸಿ ಹೋರಾಟಗಾರರು ತೆರಳುತ್ತಿದ್ದಾರೆ. ರೈಲ್ವೆ ಸಮಾನಾಂತರ ರಸ್ತೆ ಮೂಲಕ ಪಾದಯಾತ್ರೆ ತೆರಳುತ್ತಿದೆ. ವಿಧಾನಸೌಧ ಸಂಪರ್ಕಿಸುವ ಎರಡೂ ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ. ಚಾಲುಕ್ಯ ರಸ್ತೆ ಮೂಲಕ ವಿಧಾನಸೌಧ ಸಂಪರ್ಕದ ರಸ್ತೆಯನ್ನು ಬ್ಯಾರಿಕೇಡ್ ಹಾಕಿ ತಡೆಯಲು ಪೊಲೀಸರು ಪ್ರಯತ್ನಿಸಿದ್ದಾರೆ.
2A ಮೀಸಲಾತಿಗಾಗಿ ಪಂಚಮಸಾಲಿಗರಿಂದ ಪಾದಯಾತ್ರೆ, ಸಮಾವೇಶ ಸ್ಥಳದಿಂದ ಫ್ರೀಡಂಪಾರ್ಕ್ನತ್ತ ಮುಂದುವರಿದಿದೆ. ಬಿಡಿಎ ಜಂಕ್ಷನ್ಗೆ ಬಂದ ಪಂಚಮಸಾಲಿಗರ ಪಾದಯಾತ್ರೆಯನ್ನು ಸಿಎಂ ನಿವಾಸದತ್ತ ಹೋಗದಂತೆ ಪೊಲೀಸರು ತಡೆದಿದ್ದಾರೆ. ಹಾಗಾಗಿ, ಬಸವಣ್ಣ ರಸ್ತೆ ಮೂಲಕ ಫ್ರೀಡಂಪಾರ್ಕ್ನತ್ತ ಪಾದಯಾತ್ರೆ ಸಾಗುತ್ತಿದೆ.
ಟಿವಿ9ಗೆ ವಿಜಯಾನಂದ ಕಾಶಪ್ಪನವರ್ ಪ್ರತಿಕ್ರಿಯೆ ಮೀಸಲಾತಿ ಸಿಗೋವರೆಗೂ ಧರಣಿ ಮಾಡುತ್ತೇವೆ ಎಂದು ವಿಜಯಾನಂದ ಕಾಶಪ್ಪನವರ್ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರ ಮೀಸಲಾತಿ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಹಾಗೆಯೇ ನಾವೂ ಕೂಡ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇವೆ. ಮೀಸಲಾತಿ ಸಿಗುವವರೆಗೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಕಾಶಪ್ಪನವರ್ ಗುಡುಗಿದ್ದಾರೆ.
ಇದನ್ನೂ ಒದಿ: ಪಂಚಮಸಾಲಿ ಸಮಾವೇಶ: ಪೊಲೀಸ್ ಅನುಮತಿ ಇಲ್ಲದಿದ್ದರೂ ವಿಧಾನಸೌಧದತ್ತ ಪಾದಯಾತ್ರೆ
ರಾಣಿ ಚೆನ್ನಮ್ಮನ ಕಿತ್ತೂರು ಕೋಟೆ ದುರಸ್ತಿಗೆ ಹಣ ನೀಡಿ: ಪಂಚಮಸಾಲಿ ಸಮಾವೇಶದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಒತ್ತಾಯ
Published On - 5:29 pm, Sun, 21 February 21