ಕಪ್ಪು ಬಣ್ಣದ ಕುರಿ, ಮೇಕೆ ಬಲಿ: ಕೇರಳದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ವಿರುದ್ಧ ಪಂಚಬಲಿ ಪೂಜೆ

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​, ನನ್ನ ಮತ್ತು ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕೇರಳದಲ್ಲಿ ದೊಡ್ಡ ಪ್ರಯೋಗ ನಡೆಯುತ್ತಿದೆ. 21 ಮೇಕೆ, 3 ಎಮ್ಮೆ, 21 ಕುರಿಗಳು ಸೇರಿದಂತೆ ಪಂಚ ಬಲಿ ಕೊಡುತ್ತಿದ್ದಾರೆ. ಅವರ ಪ್ರಯತ್ನ ನಡೀತಾ ಇದೆ. ಪ್ರಯೋಗ ಯಾರು ಮಾಡುತ್ತಿದ್ದಾರೆ ಎಲ್ಲ ಗೊತ್ತಿದೆ ಎಂದು ಹೇಳಿದ್ದಾರೆ.

ಕಪ್ಪು ಬಣ್ಣದ ಕುರಿ, ಮೇಕೆ ಬಲಿ: ಕೇರಳದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ವಿರುದ್ಧ ಪಂಚಬಲಿ ಪೂಜೆ
ಕಪ್ಪು ಬಣ್ಣದ ಕುರಿ, ಮೇಕೆ ಬಲಿ: ಕೇರಳದಲ್ಲಿ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಪಂಚಬಲಿ ಪೂಜೆ
Updated By: ಗಂಗಾಧರ​ ಬ. ಸಾಬೋಜಿ

Updated on: May 30, 2024 | 5:36 PM

ಬೆಂಗಳೂರು, ಮೇ 30: ನನ್ನ ಮತ್ತು ಸಿಎಂ ಸಿದ್ದರಾಮಯ್ಯ (Siddaramaiah) ಸರ್ಕಾರದ ವಿರುದ್ಧ ಕೇರಳದಲ್ಲಿ ದೊಡ್ಡ ಪ್ರಯೋಗ ನಡೆಯುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇರಳ ರಾಜರಾಜೇಶ್ವರಿ ದೇಗುಲದಲ್ಲಿ ಯಾಗ ನಡೀತಿದೆ. 21 ಮೇಕೆ, 3 ಎಮ್ಮೆ, 21 ಕುರಿಗಳು ಸೇರಿದಂತೆ ಪಂಚ ಬಲಿ ಕೊಡುತ್ತಿದ್ದಾರೆ. ಅವರ ಪ್ರಯತ್ನ ನಡೀತಾ ಇದೆ ಎಂದು ಹೇಳಿದ್ದಾರೆ.

ನನ್ನ ವಿರುದ್ಧ ಶತ್ರು ಭೈರವಿ ಯಾಗ ನಡೆಯುತ್ತಿದೆ. ಅಘೋರಿಗಳ ಮೂಲಕ ಈ ಯಾಗ ಮಾಡಿಸುತ್ತಿದ್ದಾರೆ. ಯಾರು ಮಾಡುತ್ತಿದ್ದಾರೆ ಎಲ್ಲ ಗೊತ್ತಿದೆ ಎಂದು ಹೇಳಿದ್ದಾರೆ. ನಾವು ನಂಬಿರುವ ದೇವರು ನಮ್ಮನ್ನು ಕಾಪಾಡುತ್ತಾನೆ ಎಂದಿದ್ದಾರೆ.

ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆ: ದೆಹಲಿಯಲ್ಲಿ ಚರ್ಚೆಗೆ ಬಂದ ಕಾಂಗ್ರೆಸ್ ಮುಖಂಡರ ಹೆಸರುಗಳು ಹೀಗಿವೆ

ಪರಿಷತ್ ಟಿಕೆಟ್ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ನಾವು ಲಿಸ್ಟ್ ಕೊಟ್ಟು ಬಂದಿದ್ದೇವೆ. 300 ಜನರು ಟಿಕೆಟ್ ಕೇಳಿದ್ದರು. 65 ಜನರ ಶಾಟ್ ಲಿಸ್ಟ್ ಮಾಡಿ ಕೊಟ್ಟಿದ್ದೇವೆ. ನಾವು ಓಪಿನಿಯನ್ ಹೇಳಿದ್ದೇವೆ. ಅವರು ತೀರ್ಮಾನ ಮಾಡುತ್ತಾರೆ. ಯತೀಂದ್ರ ಅವರದು ಕನ್ಫರ್ಮ್ ಆಗಿದೆ. ದೆಹಲಿಯಲ್ಲಿ ಫೈನಲ್ ಮಾಡುತ್ತಾರೆ.

ಪರಮೇಶ್ವರ್ ಅಭಿಪ್ರಾಯ ಎಲ್ಲ ಕೇಳಿದ್ದೇವೆ. ಸಿಎಂ ಭೇಟಿ ಮಾಡಿದ್ದರು. ಪಕ್ಷಕ್ಕೆ ದುಡಿದವರಿಗೆ ಟಿಕೆಟ್ ಕೋಡುತ್ತೇವೆ. ಕೆಲವರು ಪಕ್ಷಕ್ಕಾಗಿ ತ್ಯಾಗ ಮಾಡಿದ್ದಾರೆ. ಕೆಲವರು ಚುನಾವಣೆಯಲ್ಲಿ ಸೋತಿದ್ದಾರೆ. ಎಲ್ಲವನ್ನೂ ಗಮನಿಸಿ ಟಿಕೆಟ್ ಹಂಚಿಕೆ ಮಾಡುತ್ತಾರೆ. ಪ್ರಾದೇಶಿಕವಾರು ಎಲ್ಲವನ್ನೂ ಗಮನಿಸಿ ಟಿಕೆಟ್ ಹಂಚುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿಗೆ ಯಾರ ಮೇಲು ನಂಬಿಕೆ‌ ಇಲ್ಲ, ಮೋದಿ ಅವರನ್ನೇ ಬೈದಿದ್ದಾರೆ: ಚಲುವರಾಯಸ್ವಾಮಿ

ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು ವಿಚಾರವಾಗಿ ಮಾತನಾಡಿದ್ದು, ಬಿಜೆಪಿ ವಿರೋಧ ಪಕ್ಷ, ಸಹಜವಾಗಿ ಕೇಳುತ್ತಾರೆ. ಸಿಎಂ ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಸೂಕ್ಷ್ಮವಾಗಿ ಗಮನಿಸುತ್ತೇವೆ. ಯಾರು ತಪ್ಪು ಮಾಡಿದರೂ ತಪ್ಪೆ. ತಕ್ಷಣ ಎಫ್​​ಐಆರ್​ ಆಗಿದೆ. ಅಧಿಕಾರಿಗಳ ತಲೆದಂಡದಿಂದ ಎಲ್ಲ ಸರಿಹೋಗಲ್ಲ. ಎಲ್ಲವನ್ನೂ ಗಂಭೀರವಾಗಿ ತೆಗೆದುಕೊಂಡು ತನಿಖೆ ನಡೆಯುತ್ತಿದೆ. ಸಚಿವರು ಹೇಳಿದರು ಅಂತ ಡೆತ್ ನೋಟ್ ನಲ್ಲಿ ಇದೆ. ನಾಗೇಂದ್ರ ಹೇಳಿದ್ರು ಅಂತ ಇಲ್ಲ. ನಾನು ಕೂಡ ಎಫ್​​ಐಆರ್ ಓದಿದೆ. ಸಂಜೆ ವೇಳೆಗೆ ಕೆಲವೊಂದು ವಿಚಾರ ಗೊತ್ತಾಗುತ್ತೆ. ಸಂಜೆ ಸಚಿವರನ್ನು ಕರೆಸಿ ಮಾಹಿತಿ ಕೇಳುತ್ತೇವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:49 pm, Thu, 30 May 24