ಬಾರ್ನಲ್ಲಿ ಸೌಂಡ್ ಮಾಡಬೇಡ ಎಂದಿದ್ದಕ್ಕೆ ಬಿತ್ತು ಹೆಣ: ಕೊಲೆಗೈದು ರೂಂನಲ್ಲಿ ನಿದ್ರೆ ಮಾಡುತ್ತಿದ್ದ ಹಂತಕರ ಬಂಧನ
ಬಾರ್ನಲ್ಲಿ ಸೌಂಡ್ ಮಾಡಬೇಡ ಎಂದಿದ್ದಕ್ಕೆ ಪಾನಿಪುರಿ ವ್ಯಾಪಾರಿಯ ಕೊಲೆ ನಡೆದಿರುವಂತಹ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆನೇಕಲ್, ಅಕ್ಟೋಬರ್ 21: ಕ್ಷುಲ್ಲಕ ಕಾರಣಕ್ಕೆ ಪಾನಿಪುರಿ (Panipuri) ವ್ಯಾಪಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆಗೈದು ರೂಂನಲ್ಲಿ ನಿದ್ರೆ ಮಾಡುತ್ತಿದ್ದ ಜಾರ್ಖಂಡ್‌ನ ರಾಹುಲ್ ಕುಮಾರ್(27), ಸಹದೇವ್ ತುರಿ(45) ಅನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎನ್ನಲಾಗಿದೆ.
ಮೃತ ಸರ್ವೇಶ್ ಮೂಲತಃ ಉತ್ತರ ಪ್ರದೇಶವರು. ಉದ್ಯೋಗಕ್ಕಾಗಿ ಪತ್ನಿ-ಮಗನ ಜೊತೆ ಬೆಂಗಳೂರಿಗೆ ಬಂದಿದ್ದರು. ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪಾನಿಪುರಿ ವ್ಯಾಪಾರ ಮಾಡುತ್ತಿದ್ದರು. ಆದರೆ ಕುಡಿತದ ಚಟಕ್ಕೆ ದಾಸನಾಗಿದ್ದರು. ನಿನ್ನೆ ಸ್ನೇಹಿತರ ಜೊತೆ ಬಾರಿನಲ್ಲಿ ಕುಡಿಯಲು ಹೋದಾಗ ಕೊಲೆಯಾಗಿದ್ದಾರೆ.
ಕುಡಿದ ನಶೆಯಲ್ಲಿ ಸ್ನೇಹಿತರಿಂದಲೇ ನಡೀತಾ ಪಾನಿಪುರಿ ಅಂಗಡಿ ಮಾಲೀಕನ ಹತ್ಯೆ?
ಹೌದು. ನಿನ್ನೆ ರಾತ್ರಿ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಹೊಸೂರು ಮುಖ್ಯರಸ್ತೆಯ ಕೋನಪ್ಪನ ಅಗ್ರಹಾರ ಗೇಟ್ ಬಳಿ ಸರ್ವೇಶ್ ಕೊಲೆಯಾದ. ಉತ್ತರ ಪ್ರದೇಶ ಮೂಲದ ಈತ, ವರ್ಷದ ಹಿಂದೆ ಪತ್ನಿ ಮತ್ತು ಮಗನ ಜೊತೆ ಬೆಂಗಳೂರಿಗೆ ಬಂದಿದ್ದ. ಕೋನಪ್ಪನ ಅಗ್ರಹಾರ ಪುರಸಭೆಯ ಬಳಿ ಪಾನಿಪುರಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಪಾರ್ಕಿಂಗ್ ಟೈಲ್ಸ್ನಿಂದ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಇದನ್ನೂ ಓದಿ: ರೈಸ್ ಪುಲ್ಲಿಂಗ್ ವಸ್ತು ತೋರಿಸಿ ಉದ್ಯಮಿಗೆ ವಂಚನೆ: ಎಕರೆಗಟ್ಟಲೇ ಜಮೀನು ವಂಚಿಸಿದ್ದ ಐವರ ಬಂಧನ
ಇನ್ನೂ ನಿನ್ನೆ ರಾತ್ರಿ ಪಾನಿಪುರಿ ವ್ಯಾಪಾರ ಮುಗಿಸಿ ಹತ್ತಿರದ ಬಾರಿಗೆ ಮೂವರು ಸ್ನೇಹಿತರ ಜೊತೆ ಸರ್ವೇಶ್ ಹೋಗಿದ್ದಾನೆ. ಮದ್ಯಪಾನ ಬಳಿಕ ಅಲ್ಲಿಯೇ ಇದ್ದ ಬೀಡಾ ಅಂಗಡಿ ಸಿಗರೇಟ್ ಸೇದಿದ್ದು, ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಮೂವರು ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಬಳಿಕ ಅಲ್ಲಿಂದ ಹೊರಟ ಸರ್ವೇಶ್ ಬೆಳಗ್ಗೆ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಜೊತೆಯಲ್ಲಿದ್ದ ಸ್ನೇಹಿತರಿಂದಲೇ ಸರ್ವೇಶ್ ಕೊಲೆಯಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಕೊಡಗು: ಅಪ್ರಾಪ್ತೆಗೆ ಜನಿಸಿದ್ದ ನವಜಾತ ಶಿಶು ನಿಗೂಢ ನಾಪತ್ತೆ: ತಾಯಿ ಮೇಲೆ ಶಂಕೆ
ಇನ್ನೂ ಹೊಟ್ಟೆ ಪಾಡಿಗಾಗಿ ಉತ್ತರಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಸರ್ವೇಶ್ ಕೊಲೆಯಾಗಿದ್ದು, ಪತ್ನಿ ಮತ್ತು ಮಗ ಅನಾಥವಾಗಿದ್ದಾರೆ. ಪ್ರಕರಣ ಸಂಬಂಧ ಸೋಕೋ ಟೀಮ್ ಸಾಕ್ಷ್ಯಾಧಾರಗಳ ಕಲೆ ಹಾಕಿದ್ದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.