ಒಂದಕ್ಕಿಂತ ಒಂದು ಕಠಿಣ ಕೇಸ್‌ಗಳನ್ನ ದಾಖಲಿಸಿದ ಎಸ್‌ಐಟಿ, ಪ್ರಜ್ವಲ್‌ಗೆ ಬಿಗಿಯಾದ ಉರುಳು, ಏನೇನು ಶಿಕ್ಷೆ?!

| Updated By: ರಮೇಶ್ ಬಿ. ಜವಳಗೇರಾ

Updated on: May 10, 2024 | 4:45 PM

ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna) ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಅತ್ಯಾಚಾರ ಪ್ರಕರಣ (Rape Case) ದಾಖಲಾಗಿದೆ. ಈ ಮೂರನೇ ಎಫ್ಐಆರ್ ನಲ್ಲಿ ಒಂದಕ್ಕಿಂತ ಒಂದು ಕಠಿಣ ಸೆಕ್ಷನ್ ಹಾಕಲಾಗಿದೆ. ಇದರಿಂದ ಪ್ರಜ್ವಲ್​ಗೆ ದಿನದಿಂದ ದಿನಕ್ಕೆ ಉರುಳು ಬಿಗಿಯಾಗುತ್ತಿದೆ.

ಒಂದಕ್ಕಿಂತ ಒಂದು ಕಠಿಣ ಕೇಸ್‌ಗಳನ್ನ ದಾಖಲಿಸಿದ ಎಸ್‌ಐಟಿ, ಪ್ರಜ್ವಲ್‌ಗೆ ಬಿಗಿಯಾದ ಉರುಳು, ಏನೇನು ಶಿಕ್ಷೆ?!
ಪ್ರಜ್ವಲ್ ರೇವಣ್ಣ
Follow us on

ಬೆಂಗಳೂರು, (ಮೇ.10): ಹಾಸನ(Hassan) ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಒಂದರ ಮೇಲೊಂದು ಎಫ್​ಐಆರ್ ದಾಖಲಾಗುತ್ತಿವೆ. ಅದರಲ್ಲೂ ಮೂರನೇ ಎಫ್​ಐಆರ್​ ದಾಖಲಾಗಿರುವ ಸೆಕ್ಷನ್ ಪ್ರಜ್ವಲ್ ರೇವಣ್ಣಗೆ ಕಾನೂನು ಕಂಟಕ ಎದುರಾಗಿದೆ. ಪ್ರಜ್ವಲ್​ ರೇವಣ್ಣ ವಿರುದ್ಧ ಮೂರನೇ ಎಫ್​ಐಆರ್​ನಲ್ಲಿ ಐಪಿಸಿ 376(2)(N), 376(2)(K), 354(A), 354(B), 354(C) ಹಾಗೂ 506 ಅಡಿಯಲ್ಲಿ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಎಫ್ಐಆರ್ ನಲ್ಲಿ ಒಂದಕ್ಕಿಂತ ಒಂದು ಕಠಿಣ ಸೆಕ್ಷನ್ ಗಳನ್ನು ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್​ಗೆ ದಿನದಿಂದ ದಿನಕ್ಕೆ ಉರುಳು ಬಿಗಿಯಾಗುತ್ತಿದೆ.

ಹಾಗಾದ್ರೆ, ಪ್ರಜ್ವಲ್ ವಿರುದ್ದದ ಮೂರನೇ ಎಫ್​ಐಆರ್​ನಲ್ಲಿ ದಾಖಲಾಗಿರುವ ಸೆಕ್ಷನ್​ಗಳು ಏನೇನು ಹೇಳುತ್ತೆ ಎನ್ನುವುದನ್ನು ನೋಡುವುದಾದರೆ, 376(2)(N)- ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ, 376(2)(K)- 354(A) – ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ‌, 354(B)-ಬಟ್ಟೆ ಹಿಡಿದು ಎಳೆದಾಡಿದ ಆರೋಪ, 354(C) ಖಾಸಗಿ ಚಿತ್ರಗಳನ್ನ ಸೆರೆ ಹಿಡಿದು ವೀಕ್ಷಣೆ ಮಾಡುವುದು, ಆಕೆಯ ಒಪ್ಪಿಗೆ ಇಲ್ಲದೆ ಪ್ರಸಾರ ಮಾಡುವುದು, 506- ಬೆದರಿಕೆ ಹಾಕುವುದು. ಹೀಗೆ ಎಸ್ಐಟಿ ಮೂರನೇ ಎಫ್ಐಆರ್ ನಲ್ಲಿ ಕಠಿಣ ಸೆಕ್ಷನ್ ಗಳನ್ನ ಹಾಕಿದೆ.

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಪ್ರಕರಣ: ಹೆಚ್ಚುವರಿ ಇಬ್ಬರು ವಿಶೇಷ ಸರ್ಕಾರಿ ಅಭಿಯೋಜಕರ ನೇಮಕ

ಯಾವ ಸೆಕ್ಷನ್​ಗೆ ಏನೇನು ಶಿಕ್ಷೆ?

ಐಪಿಸಿ 376(2)(N), 376(2)(K), 354(A), 354(B), 354(C) ಹಾಗೂ 506 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಯಾವ ಸೆಕ್ಷನ್​ಗೆ ಏನು ಶಿಕ್ಷೆ ಎನ್ನುವ ವಿವರ ಈ ಕೆಳಗಿನಂತಿದೆ.

  • 376(2)(N)- ಅತ್ಯಾಚಾರ ಮಾಡುವಾಗ ದೈಹಿಕವಾಗಿ ಘಾಸಿಗೊಳಿಸುವುದು ಕನಿಷ್ಟ 10 ವರ್ಷಗಳಿಂದ ಗರಿಷ್ಠ ಜೀವಾವಧಿ ಶಿಕ್ಷೆ.
  • 376(2)(K)- ಒಪ್ಪಿಗೆ ನೀಡಲು ಸಾಧ್ಯವಾಗದ ಮಹಿಳೆ ಮೇಲೆ ಅತ್ಯಾಚಾರ ಕನಿಷ್ಟ 10 ವರ್ಷಗಳಿಂದ ಗರಿಷ್ಟ ಜೀವಾವಧಿ ಶಿಕ್ಷೆ
  • 354(A) – ಲೈಂಗಿಕ ದೌರ್ಜನ್ಯ ಕ್ಕೆ 3 ವರ್ಷಗಳವರೆಗೆ ಶಿಕ್ಷೆ.
  • 354(B) – ಮಹಿಳೆಯ ವಿವಸ್ತ್ರಗೊಳಿಸಲು ಬಲಪ್ರಯೋಗ 3 ರಿಂದ 7 ವರ್ಷಗಳವರೆಗೆ ಶಿಕ್ಷೆ
  • 354(C) ಮಹಿಳೆಯ ಲೈಂಗಿಕ ಕ್ರಿಯೆಯನ್ನು ಚಿತ್ರೀಕರಿಸುವುದು, ವೀಕ್ಷಿಸುವುದು 3 ರಿಂದ 7 ವರ್ಷಗಳವರೆಗೆ ಶಿಕ್ಷೆ.
  • 506- ಬೆದರಿಕೆ ಹಾಕುವುದು 7 ವರ್ಷಗಳವರೆಗೆ ಶಿಕ್ಷೆ

ಮತ್ತೊಂದೆಡೆ, ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣರನ್ನು ಭಾರತಕ್ಕೆ ಕರೆದೊಂದು ಬಂಧಿಸುವ ವಿಚಾರವಾಗಿ ವಿಶೇಷ ತನಿಖಾ ತಂಡ ಕಾರ್ಯ ಪ್ರವೃತ್ತವಾಗಿದೆ. ಕಿಡ್ನಾಪ್ ಪ್ರಕರಣದ ಆರೋಪಿ, ಮಾಜಿ ಸಚಿವ ಹೆಚ್ ಡಿ ರೇವಣ್ಣ ನ್ಯಾಯಾಂಗ ಬಂಧನ ಮುಂದುವರಿದಿದ್ದು, ಜಾಮೀನು ಅರ್ಜಿಯ ವಿಚಾರಣೆ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ.

ಇನ್ನು, ವಿಡಿಯೋ ಲೀಕ್ ಮಾಡಿದವರ ವಿರುದ್ಧ ಹೋರಾಟ ನಡೆಸುತ್ತಿರುವ ಜೆಡಿಎಸ್ ರಾಜ್ಯ ಅಧ್ಯಕ್ಷ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ವಿಶೇಷ ತನಿಖಾ ತಂಡಕ್ಕೆ ದೂರು ನೀಡಿದ್ದು, ಕುಮಾರಸ್ವಾಮಿ ಸಂತ್ರಸ್ತೆಯರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:07 pm, Fri, 10 May 24