ಮದ್ಯ ಸರಬರಾಜು ಟ್ರಕ್ಗೆ ಕ್ರೇನ್ ಡಿಕ್ಕಿ: ಉರುಳಿಬಿದ್ದ ಟ್ರಕ್ನಿಂದ ಮದ್ಯದ ಬಾಟಲಿಗಳನ್ನು ಹೊತ್ತೊಯ್ಯಲು ಮುಗಿಬಿದ್ದ ಜನರು
ಅಪಘಾತದ ರಭಸಕ್ಕೆ ಮದ್ಯದ ಟ್ರಕ್ ರಸ್ತೆಗೆ ಉರುಳಿಬಿದ್ದಿದ್ದು ವಾಹನದಲ್ಲಿ ಸಾಗಿಸುತ್ತಿದ್ದ ಮದ್ಯದ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು. ಇದೇ ಚಾನ್ಸ್ ಅಂತಾ ಅಲ್ಲೇ ಜಮಾವಣೆಗೊಂಡಿದ್ದ ಕೆಲವರು ಕೈಗೆ ಸಿಕ್ಕಷ್ಟು ಬಾಟಲಿ ಹೊತ್ತೊಯ್ಯುವ ದೃಶ್ಯ ಕಂಡು ಬಂತು.
ಬೆಂಗಳೂರು: ನಗರದ ಮಾಗಡಿ ಮುಖ್ಯರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಮದ್ಯ ಸರಬರಾಜು ಮಾಡುವ ಟ್ರಕ್, ಕ್ರೇನ್ ಹಾಗೂ ಲಾರಿ ನಡುವೆ ಸರಣಿ ಅಪಘಾತ ನಡೆದಿದೆ.
ಸೀಗೆಹಳ್ಳಿ ಗೇಟ್ ಬಳಿ ವೇಗವಾಗಿ ಚಲಿಸುತ್ತಿದ್ದ ವಾಹನಗಳು ಡಿಕ್ಕಿಯಾದ ಪರಿಣಾಮ ಅವಘಡ ಸಂಭವಿಸಿದೆ. ಆದರೆ, ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.
ಇತ್ತ, ಅಪಘಾತದ ರಭಸಕ್ಕೆ ಮದ್ಯದ ಟ್ರಕ್ ರಸ್ತೆಗೆ ಉರುಳಿಬಿದ್ದಿದ್ದು ವಾಹನದಲ್ಲಿ ಸಾಗಿಸುತ್ತಿದ್ದ ಮದ್ಯದ ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದವು. ಇದೇ ಚಾನ್ಸ್ ಅಂತಾ ಅಲ್ಲೇ ಜಮಾವಣೆಗೊಂಡಿದ್ದ ಕೆಲವರು ಕೈಗೆ ಸಿಕ್ಕಷ್ಟು ಬಾಟಲಿ ಹೊತ್ತೊಯ್ಯುವ ದೃಶ್ಯ ಕಂಡು ಬಂತು. ಮದ್ಯದ ಬಾಟಲಿಗಳಿಗಾಗಿ ಮುಗಿಬಿದ್ದು ಕೊಂಡೊಯ್ದರು.
Published On - 7:16 pm, Sat, 19 December 20