Petrol Diesel Price: ಸತತ 15ನೇ ದಿನವೂ ಪೆಟ್ರೋಲ್, ಡೀಸೆಲ್ ದರದಲ್ಲಿ ಬದಲಾವಣೆಗಳಿಲ್ಲ!

Petrol Diesel Rate in Bangalore: ಸತತ 15ನೇ ದಿನವೂ ಪೆಟ್ರೋಲ್​, ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆಗಳು ಕಂಡು ಬಂದಿಲ್ಲ. ಹಾಗಿದ್ದರೆ ದೇಶದ ವಿವಿಧ ನಗರಗಳಿಲ್ಲಿ ಇಂಧನ ದರ ಎಷ್ಟೆದೆ ಎಂಬುದರ ವಿವರ ಇಲ್ಲಿದೆ.

Petrol Diesel Price: ಸತತ 15ನೇ ದಿನವೂ ಪೆಟ್ರೋಲ್, ಡೀಸೆಲ್ ದರದಲ್ಲಿ ಬದಲಾವಣೆಗಳಿಲ್ಲ!
ಸಾಂದರ್ಭಿಕ ಚಿತ್ರ
Follow us
shruti hegde
|

Updated on: Mar 14, 2021 | 9:38 AM

ಬೆಂಗಳೂರು: ಸತತವಾಗಿ 15 ನೇ ದಿನವೂ ಪೆಟ್ರೋಲ್​, ಡೀಸೆಲ್​ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ದರ ಬದಲಾವಣೆ ಕಾಣದ ಗ್ರಾಹಕರು ನಿರಾಳರಾಗಿದ್ದಾರೆ. ದೆಹಲಿಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್ ದರ 91.17 ರೂಪಾಯಿ ಹಾಗೂ ಡೀಸೆಲ್​ ದರ ಪ್ರತಿ ಲೀಟರಿಗೆ 81.47 ರೂಪಾಯಿ ಇದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 94.22 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೂ ಡೀಸೆಲ್ ದರ 86.37 ರೂಪಾಯಿಗೆ ಮಾರಾಟವಾಗುತ್ತಿದೆ.

ಫೆಬ್ರವರಿ ತಿಂಗಳ ಕೊನೆಯಲ್ಲಿ ಇಂಧನ ದರ ಏರಿಕೆಯ ನಂತರ ದರದಲ್ಲಿ ವ್ಯತ್ಯಾಸ ಕಂಡಿಲ್ಲ. ಈ ವರ್ಷದ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಇಂಧನ ದರ ವ್ಯತ್ಯಾಸವನ್ನು ನೋಡುವುದಾದರೆ, ಪೆಟ್ರೋಲ್ 25 ದಿನಗಳಲ್ಲಿ 7.36 ರೂಪಾಯಿ ಹೆಚ್ಚಳವಾಗಿದೆ. ಹಾಗೂ ಡೀಸೆಲ್ 16 ದಿನಗಳಲ್ಲಿ 4.52 ರೂ ಹೆಚ್ಚಳವಾಗಿದ್ದು, ಫೆಬ್ರವರಿ ತಿಂಗಳ ಕೊನೆಯ 16 ದಿನಗಳಲ್ಲಿ ಬೆಲೆ 4.52 ರೂಪಾಯಿ ಹೆಚ್ಚಳವಾಗಿದೆ. ಬಹುತೇಕ ಎಲ್ಲ ನಗರಗಳಲ್ಲಿ ಪೆಟ್ರೋಲ್ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ಮುಂಬೈನಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 97.57 ರೂಪಾಯಿ ಹಾಗೂ ಡೀಸೆಲ್​ ಪ್ರತಿ ಲೀಟರಿಗೆ 88.60 ರೂಪಾಯಿಗೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಪ್ರತಿ ಲೀಟರಿಗೆ ಪೆಟ್ರೋಲ್​ 93.11 ರೂಪಾಯಿಗೆ ಮಾರಾಟವಾಗುತ್ತಿದ್ದು, ಡೀಸೆಲ್​ ಪ್ರತಿ ಲೀಟರಿಗೆ 86.45 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಕೋಲ್ಕತ್ತದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ದರ 91.35 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಹಾಗೆಯೇ ಪ್ರತಿ ಲೀಟರ್​ ಡೀಸೆಲ್​ನ್ನು 84.35 ರೂಪಾಯಿಗೆ ಮಾರಾಟವಾಗುತ್ತಿದೆ.

ವಿಧಾನಸಭೆ ಚುನಾವಣೆ, ನಾಲ್ಕು ರಾಜ್ಯಗಳು ಸೇರಿದಂತೆ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಈ ತಿಂಗಳ ಅಂತ್ಯದಲ್ಲಿ ಎದುರಾಗುತ್ತಿದೆ. ಚುನಾವಣೆ ಎದುರಿಗಿರುವುದರಿಂದ ಪೆಟ್ರೋಲ್​, ಡೀಸೆಲ್​ ದರ ಸ್ಥಿರವಾಗಿದೆ ಎಂಬುದು ಸಾರ್ವಜನಿಕರ ಮಾತು. ಜೊತೆಗೆ ಚುನಾವಣೆ ನಂತರ ಏರಿಕೆಯತ್ತ ಸಾಗಲೂ ಬಹುದು ಎಂಬುದು ಬಹು ಜನರ ಅಭಿಪ್ರಾಯ. ಫೆಬ್ರವರಿ ತಿಂಗಳಲ್ಲಿ ಏರಿಕೆ ಕಂಡಿದ್ದ ಪೆಟ್ರೋಲ್​ ದರ ಮಾರ್ಚ್​ ತಿಂಗಳ ಪ್ರಾರಂಭದಿಂದಲೂ ದರ ಬದಲಾವಣೆ ಕಂಡಿಲ್ಲ. ಹಾಗಾಗಿ ಇಂತಹ ಮಾತುಗಳು ಕೇಳಿ ಬರುತ್ತಿದೆ.

ಇನ್ನು, ಭೂಪಾಲ್​ನಲ್ಲಿ ಪೆಟ್ರೋಲ್​ 99.21 ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗೂ ಡೀಸೆಲ್​ 89.76 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ರಾಂಚಿಯಲ್ಲಿ ಪೆಟ್ರೋಲ್​ 88.54 ರೂಪಾಯಿ ಹಾಗೂ ಡೀಸೆಲ್​ 86.37 ರೂಪಾಯಿಗೆ ಮಾರಾಟವಾಗುತ್ತಿದೆ. ಪಾಟ್ನಾದಲ್ಲಿ ಪ್ರತಿ ಲೀ. ಪೆಟ್ರೋಲ್​ ದರ 93.48 ರೂಪಾಯಿ ಹಾಗೂ ಡೀಸೆಲ್​ 86.73 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ. ಲಕ್ನೋದಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ 89.31 ರೂಪಾಯಿ ಹಾಗೂ ಡೀಸೆಲ್​ 81.85 ರೂಪಾಯಿಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕ ಬಜೆಟ್ 2021: ಪೆಟ್ರೋಲ್ ದರದಲ್ಲಿ ಯಾವ ಇಳಿಕೆಯೂ ಆಗಲಿಲ್ಲ; ಇಂದು ರಾಜ್ಯದಲ್ಲಿ ರೂ. 96ರ ಗಡಿಯಲ್ಲಿ ಪೆಟ್ರೋಲ್​ ಬೆಲೆ

ಇದನ್ನೂ ಓದಿ: Petrol Diesel Price | ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಪ್ರತಿ ಲೀಟರಿಗೆ 94.22 ರೂಪಾಯಿ