ಯಾದಗಿರಿ ಮತ್ತು ರಾಯಚೂರು ಜಿಲ್ಲಾಡಳಿತಗಳಿಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ; ಒಳ್ಳೆಯ ಕೆಲಸಗಳನ್ನು ಮಾಡುವಂತೆ ಕರೆ

ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜಿಲ್ಲಾಧಿಕಾರಿಗಳ ಜತೆ ವರ್ಚ್ಯುವಲ್​ ಸಂವಾದ ನಡೆಸಿದರು. ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಿಗೆ ಪ್ರಧಾನಿ ಮೋದಿಯಿಂದ ಶ್ಲಾಘನೆ.

ಯಾದಗಿರಿ ಮತ್ತು ರಾಯಚೂರು ಜಿಲ್ಲಾಡಳಿತಗಳಿಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ; ಒಳ್ಳೆಯ ಕೆಲಸಗಳನ್ನು ಮಾಡುವಂತೆ ಕರೆ
ಪ್ರಧಾನಿ ನರೇಂದ್ರ ಮೋದಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 22, 2022 | 3:58 PM

ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜಿಲ್ಲಾಧಿಕಾರಿಗಳ ಜತೆ ವರ್ಚ್ಯುವಲ್​ ಸಂವಾದ ನಡೆಸಿದ್ದಾರೆ. ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನದ ಬಗ್ಗೆ ಜಿಲ್ಲಾಧಿಕಾರಿಗಳಿಂದ ನೇರವಾಗಿ ವರದಿ ಪಡೆದುಕೊಂಡಿದ್ದಾರೆ. ಇನ್ನೂ ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಉತ್ತಮ ಆಡಳಿತ (Good Governance) ವ್ಯವಸ್ಥೆಯಲ್ಲಿ ಜಿಲ್ಲಾಡಳಿತಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಅಷ್ಟೇ ಅಲ್ಲ, ಸರ್ಕಾರಗಳ ಪ್ರಮುಖ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಜಿಲ್ಲಾಡಳಿತಗಳು ಸಹಾಯ ಮಾಡುತ್ತವೆ. ಹಾಗಾಗಿ, ಅಧಿಕಾರಿಗಳ ಕ್ಷೇತ್ರ ಭೇಟಿ ಮತ್ತು ಪರಿಶೀಲನೆ ಸಂಬಂಧ ಸವಿಸ್ತಾರವಾದ ಮಾರ್ಗಸೂಚಿ ತಯಾರಿಸಬೇಕಾದ ಅಗತ್ಯವಿದೆ ಎಂದೂ ಹೇಳಿದರು.

ಇವತ್ತು ಯಾದಗಿರಿ ಸೇರಿ ಐದು ಜಿಲ್ಲೆಗಳ ಡಿಸಿಗಳ ಜೊತೆ ಪ್ರಧಾನಿ ಸಂವಾದ ನಡೆಸಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಸಂವಾದ ನಡೆಸಿದ ಯಾದಗಿರಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ, ದೇಶದಲ್ಲಿ 122 ಮಹತ್ವಕಾಂಕ್ಷೆ ಜಿಲ್ಲೆಗಳಿವೆ ಅದರಲ್ಲಿ ಯಾದಗಿರಿ ಕೂಡ ಒಂದು. ಮಹತ್ವಕಾಂಕ್ಷೆ ಜಿಲ್ಲೆಗೆ ಸಂಬಂಧಿಸಿದಂತ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಹಾಗೂ ಕೆಲಸಗಳ ಬಗ್ಗೆ ವಿವರಣೆ ನೀಡಿದ್ದೆನೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಏನೇನ್ ಪೌಷ್ಟಿಕ ಆಹಾರ ಕೊಡಬೇಕಾಗಿದೆ ಮತ್ತು ಯಾವ ರೀತಿ ಕೊಡ್ತಾಯಿದ್ದೆವೆ ಅಂತ ಪ್ರಧಾನಿಗಳಿಗೆ ಹೇಳಿದ್ದೆವೆ ಎಂದರು. ಆರೋಗ್ಯ, ಕೃಷಿ, ಶಿಕ್ಷಣ ಹಾಗೂ ಅಪೌಷ್ಟಿಕತೆ ಬಗ್ಗೆ ಮಾಹಿತಿ ಕೇಳಿದ್ದಾರೆ. ಆ ಕುರಿತಾಗಿ ನಮ್ಮ ಜಿಲ್ಲಾ‌ ಮಟ್ಟದ ಅಧಿಕಾರಿಗಳನ್ನ ಕರೆದು ನಾನು ಸೂಚನೆ ನೀಡಿದ್ದೆನೆ. ನಾವು ಮೀನು ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮಾಡಿದ್ದೇವೆ. ನಮ್ಮ ಕೆಲಸಗಳ ಬಗ್ಗೆ ಪ್ರಧಾನಿಗಳು ಪ್ರಸಂಶೆ ವ್ಯಕ್ತಪಡಿಸಿದ್ದು,ಇನ್ನು ಹೆಚ್ಚು ಪ್ರಗತಿ ಮಾಡಿ ಎಂದು ಸೂಚನೆ ನೀಡಿದ್ದಾರೆ.  ಐದು ಜಿಲ್ಲೆಗಳಲ್ಲಿ ನಮ್ಮ ಜಿಲ್ಲೆಯನ್ನ ಸೆಲೆಕ್ಟ್ ಮಾಡಿದ್ದಕ್ಕೆ ನಾವು ಸಕ್ಸಸ್ ಸ್ಟೋರಿ ತರಹ ಪ್ರಸೆಂಟ್ ಮಾಡಿದ್ದೆವೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಇನ್ನೂ ಅದೇ ರೀತಿಯಾಗಿ ರಾಯಚೂರು ಜಿಲ್ಲೆಯನ್ನು ಶ್ಲಾಘಿಸಿರುವು ಪ್ರಧಾನಿ ನರೇಂದ್ರ ಮೋದಿ, ರಾಯಚೂರು ಜಿಲ್ಲೆಯೂ ಪೌಷ್ಟಿಕತೆಯುಕ್ತ ಜಿಲ್ಲೆಯಾಗುತ್ತಿದ್ದು, ಶೇ.70ರಷ್ಟಿದ್ದ ಪೌಷ್ಟಿಕತೆ ಪ್ರಮಾಣ ಶೇ.97ರಷ್ಟು ತಲುಪಿದೆ ಎಂದರು. ನೀತಿ ಆಯೋಗದ ಸಭೆಯಲ್ಲಿ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ, ಒಳ್ಳೆಯ ಕೆಲಸಗಳನ್ನ ಮಾಡಲು ಜಿಲ್ಲಾಧಿಕಾರಿಗಳಿಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ:

ಉತ್ತಮ ಆಡಳಿತದಲ್ಲಿ ಜಿಲ್ಲಾಡಳಿತಗಳ ಪಾತ್ರ ತುಂಬ ಮಹತ್ವದ್ದು, ಉತ್ಸಾಹದಿಂದ ಕೆಲಸ ಮಾಡಿ; ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಮಾತು