AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತಮ ಆಡಳಿತದಲ್ಲಿ ಜಿಲ್ಲಾಡಳಿತಗಳ ಪಾತ್ರ ಮಹತ್ವದ್ದು; ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಮಾತು

ಆಡಳಿತಗಳು ಮತ್ತು ಸಾರ್ವಜನಿಕರ ನಡುವೆ ಭಾವನಾತ್ಮಕ ಮತ್ತು ನೇರ ಸಂಪರ್ಕವಿರಬೇಕು. ಆಗ ಎಲ್ಲ ದಿಕ್ಕುಗಳಿಂದಲೂ ಅಭಿವೃದ್ಧಿ ಉತ್ತಮವಾಗಿ ಆಗುತ್ತದೆ. ಪ್ರತಿ ಜಿಲ್ಲಾ ಮಟ್ಟದಲ್ಲೂ ಯಶಸ್ಸು ಉಂಟಾಗುತ್ತಿರುವುದಕ್ಕೆ ಪ್ರಮುಖ ಕಾರಣ ಒಮ್ಮತ ಎಂದು ಪ್ರಧಾನಿ ಮೋದಿ ಹೇಳಿದರು.

ಉತ್ತಮ ಆಡಳಿತದಲ್ಲಿ ಜಿಲ್ಲಾಡಳಿತಗಳ ಪಾತ್ರ ಮಹತ್ವದ್ದು; ಜಿಲ್ಲಾಧಿಕಾರಿಗಳ ಸಭೆಯಲ್ಲಿ ಪ್ರಧಾನಿ ಮೋದಿ ಮಾತು
ಪ್ರಧಾನಮಂತ್ರಿ ನರೇಂದ್ರ ಮೋದಿ
Follow us
TV9 Web
| Updated By: Lakshmi Hegde

Updated on:Jan 22, 2022 | 3:28 PM

ದೆಹಲಿ: ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜಿಲ್ಲಾಧಿಕಾರಿಗಳ ಜತೆ ವರ್ಚ್ಯುವಲ್​ ಸಂವಾದ ನಡೆಸಿದ್ದಾರೆ. ಸರ್ಕಾರದ ಪ್ರಮುಖ ಯೋಜನೆಗಳ ಅನುಷ್ಠಾನದ ಬಗ್ಗೆ ಜಿಲ್ಲಾಧಿಕಾರಿಗಳಿಂದ ನೇರವಾಗಿ ವರದಿ ಪಡೆದಿದ್ದಾರೆ.  ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಉತ್ತಮ ಆಡಳಿತ (Good Governance) ವ್ಯವಸ್ಥೆಯಲ್ಲಿ ಜಿಲ್ಲಾಡಳಿತಗಳು ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು. ಅಷ್ಟೇ ಅಲ್ಲ, ಸರ್ಕಾರಗಳ ಪ್ರಮುಖ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಜಿಲ್ಲಾಡಳಿತಗಳು ಸಹಾಯ ಮಾಡುತ್ತವೆ. ಹಾಗಾಗಿ, ಅಧಿಕಾರಿಗಳ ಕ್ಷೇತ್ರ ಭೇಟಿ ಮತ್ತು ಪರಿಶೀಲನೆ ಸಂಬಂಧ ಸವಿಸ್ತಾರವಾದ ಮಾರ್ಗಸೂಚಿ ತಯಾರಿಸಬೇಕಾದ ಅಗತ್ಯವಿದೆ ಎಂದೂ ಹೇಳಿದರು. 

ನಮ್ಮ ದೇಶ ಜಿಲ್ಲಾಡಳಿತಗಳು ಮಹಾತ್ವಾಕಾಂಕ್ಷಿಯಾಗಿವೆ. ದೇಶವನ್ನು ಮುನ್ನಡೆಸುವಾಗ ಎದುರಾಗುವ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತಗಳ ಹೊಂದಾಣಿಕೆ, ಟೀಂ ವರ್ಕ್​​ನಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಗಳು ಉತ್ತಮವಾಗಿ ಆಗುತ್ತಿದೆ. ಸಕಾರಾತ್ಮಕ ಬೆಳವಣಿಗೆ ಆಗುತ್ತಿದೆ. ಒಟ್ಟಾರೆ ಫಲಿತಾಂಶ ಅತ್ಯುತ್ತಮವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಿ ಹೇಳಿದರು. ಜನಸಾಮಾನ್ಯರ ಆಕಾಂಕ್ಷೆಗಳು ನಮ್ಮ ಆಕಾಂಕ್ಷೆಗಳಾದಾಗ, ಇನ್ನೊಬ್ಬರ ಕನಸುಗಳನ್ನು ನನಸಾಗಿಸುವುದೇ ನಮ್ಮ ಯಶಸ್ಸಿನ ಅಳತೆಗೋಲಾದಾಗ ಕರ್ತವ್ಯದ ಹಾದಿಯು ಇತಿಹಾಸ ನಿರ್ಮಿಸುತ್ತದೆ. ಅಂಥ ಇತಿಹಾಸವನ್ನು ನಾವಿಂದು ದೇಶದ ಬಹುತೇಕ ಜಿಲ್ಲೆಗಳಲ್ಲಿ ಸಾಧಿಸಿದ್ದೇವೆ ಎಂದೂ ಹೇಳಿದರು.

ಆಡಳಿತಗಳು ಮತ್ತು ಸಾರ್ವಜನಿಕರ ನಡುವೆ ಭಾವನಾತ್ಮಕ ಮತ್ತು ನೇರ ಸಂಪರ್ಕವಿರಬೇಕು. ಆಗ ಎಲ್ಲ ದಿಕ್ಕುಗಳಿಂದಲೂ ಅಭಿವೃದ್ಧಿ ಉತ್ತಮವಾಗಿ ಆಗುತ್ತದೆ. ಪ್ರತಿ ಜಿಲ್ಲಾ ಮಟ್ಟದಲ್ಲೂ ಯಶಸ್ಸು ಉಂಟಾಗುತ್ತಿರುವುದಕ್ಕೆ ಪ್ರಮುಖ ಕಾರಣ ಒಮ್ಮತವಾಗಿದೆ. ನಾಗರಿಕ ಸೇವೆಯಲ್ಲಿರುವ ನನ್ನೆಲ್ಲ ಸಹೋದ್ಯೋಗಿಗಳಿಗೆ ಒಂದು ಮಾತು ಹೇಳುತ್ತೇನೆ. ನೀವು ನಿಮ್ಮ ಕೆಲಸವನ್ನು ಪ್ರಾರಂಭ ಮಾಡಿದ ಮೊದಲ ದಿನ ನೆನಪಿಟ್ಟುಕೊಳ್ಳಬೇಕು. ನೀವು ಈ ದೇಶಕ್ಕಾಗಿ ಎಷ್ಟು ಶ್ರಮಿಸುತ್ತಿದ್ದೀರಿ, ಏನು ಕೆಲಸ ಮಾಡುತ್ತೀದ್ದೀರಿ ಎಂಬದನ್ನೂ ಅವಲೋಕನ ಮಾಡಿಕೊಳ್ಳುತ್ತಿರಬೇಕು. ನಿಮಗೆ ದೇಶಸೇವೆ ಮಾಡಲು ಎಷ್ಟು ಉತ್ಸಾಹವಿದೆ. ಎಷ್ಟುವರ್ಷಗಳಿಂದ ನಾಗರಿಕ ಸೇವೆ ಮಾಡುತ್ತಿದ್ದೀರಿ ಎಂಬುದನ್ನೂ ಗಮನಿಸಿಕೊಳ್ಳಿ. ಸೇವೆಯ ಕೊನೆ ದಿನದವರೆಗೂ ಅಷ್ಟೇ ಉತ್ಸಾಹದಿಂದ ಕೆಲಸ ಮಾಡಿ ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.

ಇದೇ ವೇಳೆ ಜನಧನ್​ ಖಾತೆಗಳ ಬಗ್ಗೆ ಪ್ರಸ್ತಾಪಿಸಿದ ಅವರು, ಈ ಜನಧನ್​ ಖಾತೆಗಳ ಸಂಖ್ಯೆ ದೇಶದ ಎಲ್ಲ ಜಿಲ್ಲೆಗಳಲ್ಲೂ ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕರಿಂದ ಐದುಪಟ್ಟು ಹೆಚ್ಚಾಗಿದೆ. ಎಲ್ಲ ನಾಗರಿಕರಿಗೂ ಇದರಿಂದ ಅನುಕೂಲವಾಗಿದೆ ಎಂದು ಹೇಳಿದರು. ಹಾಗೇ, ಬಹುತೇಕವಾಗಿ ಪ್ರತಿಕುಟುಂಬದಲ್ಲೂ ಶೌಚಗೃಹ ನಿರ್ಮಾಣವಾಗಿದೆ. ಪ್ರತಿ ಗ್ರಾಮಕ್ಕೂ ವಿದ್ಯುತ್ ನೀಡಲಾಗಿದೆ.  ಬಡಕುಟುಂಬಗಳಿಗೆ ಶಕ್ತಿ ನೀಡಲು ಶ್ರಮಿಸಲಾಗಿದೆ. ಹೀಗೆ ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಜಿಲ್ಲಾಡಳಿತಗಳು ತುಂಬ ನಿಷ್ಠೆಯಿಂದ ಕೆಲಸ ಮಾಡಿವೆ ಎಂದು ಶ್ಲಾಘಿಸಿದರು. ನರೇಗಾ ಮತ್ತಿತರ ಯೋಜನೆಗಳ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು.

ಇದನ್ನೂ ಓದಿ: Sri Lanka Inflation: ಶ್ರೀಲಂಕಾದ ಹಣದುಬ್ಬರ ದರ ಡಿಸೆಂಬರ್​ನಲ್ಲಿ ಗರಿಷ್ಠ ಮಟ್ಟವಾದ ಶೇ 14ಕ್ಕೆ

Published On - 3:04 pm, Sat, 22 January 22

ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ಉಗ್ರರ ದಾಳಿ ನಡುವೆಯೂ ಕಾಶ್ಮೀರದಲ್ಲಿ ನಿಲ್ಲದ ಪ್ರವಾಸಿಗರ ಭೇಟಿ
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ